Drishyam 2 Box Office : ಬಾಕ್ಸಾಫೀಸ್ ನಲ್ಲಿ ದಾಖಲೆ ಬರೆಯತ್ತಿದೆ ಅಜಯ್ ದೇವಗನ್ ದೃಶ್ಯಂ 2

ಸೂಪರ್‌ ಸ್ಟಾರ್‌ ಅಜಯ್ ದೇವಗನ್ ಮತ್ತು ಅಕ್ಷಯ್ ಖನ್ನಾ ಅಭಿನಯದ ದೃಶ್ಯಂ 2 ಸಿನಿಮಾ ನವೆಂಬರ್‌ 18ಕ್ಕೆ ಬಿಡುಗಡೆಯಾಗಿದೆ. ಸಿನಿಮಾ ಬಿಡುಗಡೆಯಾದ (Drishyam 2 Box Office) ದಿನವೇ ಸಿನಿಪ್ರೇಕ್ಷಕರ ಮೆಚ್ಚುಗೆ ಪಾತ್ರವಾಗಿದೆ. ಸಿನಿಮಾ ಮೊದಲ ಭಾಗವೇ ಅತಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಅದರ ಮುಂದುವರಿದ ಭಾಗ ದೃಶ್ಯಂ 2 ಸಿನಿಮಾ ಅದಕ್ಕೆ ಪೂರಕವಾಗಿದ್ದು, ಸಿನಿಪ್ರೇಕ್ಷಕರನ್ನು ಇನ್ನಷ್ಟು ಮನರಂಜಿಸುತ್ತಿದೆ. ದೃಶ್ಯಂ 2 ಸಿನಿಮಾವು ಕ್ರೈಮ್ ಥ್ರಿಲ್ಲರ್ ಹೆಚ್ಚಿನ ನಿರೀಕ್ಷೆಯ ನಡುವೆ ಬಿಡುಗಡೆಯಾಗಿದ್ದು, ಸಿನಿಮಂದಿರಗಳಲ್ಲಿ ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಸಿನಿಮಾವು ಮೊದಲ ದಿನಕ್ಕಿಂತ 2 ನೇ ದಿನದಲ್ಲಿ ಭರ್ಜರಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನ್ನು ದಾಖಲಿಸಿದೆ.

ದೃಶ್ಯಂ 2 ಬಾಕ್ಸ್ ಆಫೀಸ್ ವಿವರ :
ದೃಶ್ಯಂ 2 ಎರಡನೇ ದಿನದಲ್ಲಿ ಮೊದಲ ದಿನಕ್ಕಿಂತ ಹೆಚ್ಚಿನ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಮಾಡುವ ನಿರೀಕ್ಷೆಯನ್ನು ಮೂಡಿಸಿದೆ. ಸಿನಿಮಾವು ಶೇ. 40 ಕ್ಕಿಂತ ಹೆಚ್ಚಿನ ಬೆಳವಣಿಗೆಯೊಂದಿಗೆ ಬಿಡುಗಡೆಯಾದ ಎರಡನೇ ದಿನದಲ್ಲಿ ಸುಮಾರು 20 ಕೋಟಿ ರೂಪಾಯಿಗಳನ್ನು ಗಳಿಸುವ ನಿರೀಕ್ಷೆಯಿದೆ. “ದೃಶ್ಯಂ 2 ಸಿನಿಮಾವು ಶನಿವಾರದಂದು ಸುಮಾರು 20.5 ರಿಂದ 21 ಕೋಟಿ ಕಲೆಕ್ಷನ್ ಸಂಗ್ರಹಿಸುವ ಮೂಲಕ ಸೂಪರ್ ಹಿಟ್ ಆಗಿ ಹೊರಹೊಮ್ಮುತ್ತಿದೆ. ಸಿನಿಮಾದ ಎರಡು ದಿನದ ಕಲೆಕ್ಷನ್ 36 ಕೋಟಿ ನಿವ್ವಳ ಆಗಿರುತ್ತದೆ. ಸಿನಿಮಾವು ವಾರಾಂತ್ಯದಲ್ಲಿ 60 ಕೋಟಿ ಕಲೆಕ್ಷನ್‌ ಆಗುವ ಸಾಧ್ಯತೆ ಇರುತ್ತದೆ ಎಂದಿದ್ದಾರೆ.

ಅಜಯ್‌ ದೇವಗನ್ ಅಭಿನಯದ “ದೃಶ್ಯಂ” ಸಿನಿಮಾ 2015 ರ ಕ್ರೈಮ್ ಥ್ರಿಲ್ಲರ್‌ನ ಮುಂದುವರಿದ ಭಾಗವಾಗಿದೆ. ಇದು ಅದೇ ಹೆಸರಿನ ಮೋಹನ್ ಲಾಲ್ ನಟನೆಯ ಮಲಯಾಳಂ ಸಿನಿಮಾದ ಹಿಂದಿಗೆ ರಿಮೇಕ್ ಆಗಿರುತ್ತದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಬಿಡುಗಡೆಯಾದ ಮಲಯಾಳಂ ಚಿತ್ರದ ಮುಂದುವರಿದ ಭಾಗವಾಗಿದೆ. ಆತ್ಮರಕ್ಷಣೆಗಾಗಿ ನಡೆದ ಒಂದು ಕೊಲೆಯನ್ನು ಕಥಾನಾಯಕ ಮುಚ್ಚಿ ಹಾಕುತ್ತಾನೆ. ತನ್ನ ಕುಟುಂಬದವರು ಪೊಲೀಸರ ಕೈಗೆ ಸಿಲುಕಿಕೊಳ್ಳದಂತೆ ಚಾಲಾಕಿತನದಿಂದ ಬಚಾವ್‌ ಮಾಡುತ್ತಾನೆ. ಇದು ದೃಶ್ಯಂ ಮೊದಲ ಭಾಗವಾಗಿದೆ. ಎರಡನೇ ಭಾಗದಲ್ಲಿ ಆ ಕೇಸ್‌ ಮತ್ತೆ ಓಪನ್‌ ಆಗುತ್ತದೆ. ಹಲವು ಟ್ವಿಸ್ಟ್‌ಗಳ ಮೂಲಕ ಕಥೆ ಸಾಗುತ್ತದೆ. ಈ ಬಾರಿ ಹೀರೋ ತನ್ನ ಕುಟುಂಬವನ್ನು ಹೇಗೆ ರಕ್ಷಿಸುತ್ತಾನೆ ಎನ್ನುವುದುನ್ನು ತಿಳಿಯಲು ದೃಶ್ಯಂ 2 ಸಿನಿಮಾ ಪೂರ್ತಿ ನೋಡಬೇಕು.

ಇದನ್ನೂ ಓದಿ : Tabassum no more: ಎರಡೆರಡು ಬಾರಿ ಹೃದಯಾಘಾತಕ್ಕೆ ತುತ್ತಾದ ಬಾಲಿವುಡ್ ಹಿರಿಯ ನಟಿ ತಬಸ್ಸುಮ್ ಇನ್ನಿಲ್ಲ..

ಇದನ್ನೂ ಓದಿ : Vedha Poster: ಶಿವಣ್ಣನ ಮುಂದೆ ಕೈಯಲ್ಲಿ ಕಲ್ಲನ್ನೆತ್ತಿ ಅದೃಷ್ಟ ಪರೀಕ್ಷೆಗೆ ಇಳಿದ ಅರುಣ್ ಸಾಗರ್ ಪುತ್ರಿ

ಇದನ್ನೂ ಓದಿ : Nawazuddin Siddiqui : ಮಂಗಳಮುಖಿಯಾಗಿ ಬದಲಾದ ನಟ ನವಾಜುದ್ದೀನ್ ಸಿದ್ದಿಕಿ

“ದೃಶ್ಯಂ 2” ನಲ್ಲಿ, ದೇವಗನ್ ವಿಜಯ್ ಸಾಲ್ಗೋಂಕರ್ ಅವರ ಪಾತ್ರದಲ್ಲಿ ಪುನಃ ಕಾಣಿಸಿಕೊಳ್ಳುತ್ತಾರೆ. ಸಿನಿಮಾದಲ್ಲಿ ಶ್ರಿಯಾ ಶರಣ್, ರಜತ್ ಕಪೂರ್, ಟಬು ಮತ್ತು ಇಶಿತಾ ದತ್ತಾ, ಹೊಸ ಪಾತ್ರದಲ್ಲಿ ಅಕ್ಷಯ್ ಖನ್ನಾ ನಟಿಸಿದ್ದಾರೆ. “ದೃಶ್ಯಂ 2” ಸಿನಿಮಾವನ್ನು ಭೂಷಣ್ ಕುಮಾರ್, ಕುಮಾರ್ ಮಂಗತ್ ಪಾಠಕ್, ಅಭಿಷೇಕ್ ಪಾಠಕ್ ಮತ್ತು ಕ್ರಿಶನ್ ಕುಮಾರ್ ನಿರ್ಮಾಣ ಮಾಡಿದ್ದಾರೆ.

Drishyam 2 Box Office: Ajay Devgn’s Drishyam 2 is setting records at the box office

Comments are closed.