Bank fraud case: ಬ್ಯಾಂಕ್‌ ಅಧಿಕಾರಿ ಎಂದು ನಂಬಿಸಿ ಹಣ ವಂಚನೆ: ಪ್ರಕರಣ ದಾಖಲು

ಉಡುಪಿ: (Bank fraud case) ಬ್ಯಾಂಕಿನ ನಿವೃತ್ತ ಉದ್ಯೋಗಿಯೋರ್ವರಿಗೆ ತಾನು ಬ್ಯಾಂಕ್‌ ಅಧಿಕಾರಿಯೆಂದು ನಂಬಿಸಿ ಹಂತಹಂತವಾಗಿ ಹಣ ವರ್ಗಾವಣೆ ಮಾಡಿಕೊಂಡು ಲಕ್ಷಾಂತರ ರೂ ವಂಚಿಸಿದ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎ.ಎಲ್.ಎನ್ ರಾವ್ ಲೇವೌಟ್, ಅಲೆವೂರು ರಸ್ತೆ, ಮಣಿಪಾಲ ಇಲ್ಲಿನ ನಿವಾಸಿಯಾದ ಸ್ಟ್ಯಾನ್ಲೀ .ಪಿ. ಕುಂದರ್ (79 ವರ್ಷ) ಇವರು ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಉದ್ಯೋಗಿಯಾಗಿದ್ದು, ಕೆನರಾ ಬ್ಯಾಂಕ್ ಮಣಿಪಾಲ ಶಾಖೆಯಲ್ಲಿ ಎಸ್.ಬಿ ಖಾತೆ ಯನ್ನು ಹೊಂದಿದ್ದಾರೆ. ಯಾರೋ ಅಪರಿಚಿತ ವ್ಯಕ್ತಿಯ ಮೊಬೈಲ್‌ ನಿಂದ ಕುಂದರ್‌ ಅವರ ಮೊಬೈಲ್‌ ಗೆ ಸಂದೇಶವೊಂದು ಬಂದಿದ್ದು, ಅದರಲ್ಲಿ “Dear CANARA BANK Customer Your Account Has Been Blocked Due TO KYC within 24 Hrs Please Contact Customer care 8539021512 to continue your Services.” ಎನ್ನುವುದಾಗಿ ನಮೂದಿಸಿತ್ತು.

ಅಪರಿಚಿತ ವ್ಯಕ್ತಿಯ ಮೊಬೈಲ್‌ ನಂಬರ್‌ ನಿಂದ ಬಂದ ಈ ಸಂದೇಶವನ್ನು ಕೆನರಾ ಬ್ಯಾಂಕ್ ಕಸ್ಟಮರ್ ಕೇರ್ ಎಂದು ನಂಬಿಕೊಂಡು ಆ ನಂಬರ್‌ ಗೆ ಕರೆ ಮಾಡಿದ್ದಾರೆ. ಈ ವೇಳೆ ತಾನು ಬ್ಯಾಂಕ್‌ ಅಧಿಕಾರಿ ಎಂದು ಕುಂದರ್‌ ಅವರನ್ನು ನಂಬಿಸಿ ಬ್ಯಾಂಕ್‌ ಖಾತೆಯ ವಿವರ ಹಾಗೂ ಓಟಿಪಿಯನ್ನು ಪಡೆದುಕೊಂಡಿದ್ದಾರೆ. ಇದಾದ ಬಳಿಕ ವ್ಯಕ್ತಿಯ ಖಾತೆಯಿಂದ ಹಂತಹಂತವಾಗಿ 50,000 ರೂ., 14,330.40 ರೂ., 14,165.20 ರೂ., 14,165.20 ರೂ., 14,165.20 ರೂ., ನಂತೆ 4 ಬಾರಿ ಟ್ರಾನ್ಸೆಕ್ಷನ್ ಮಾಡಿಸಿ ಒಟ್ಟು 1,06,826 ರೂ. ಅನ್ನು ಆನ್‌ ಲೈನ್‌ ಮೂಲಕ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

ಇದನ್ನೂ ಓದಿ : Mangalore car accident case: ಮಂಗಳೂರು ಕಾರು ಅಪಘಾತ ಪ್ರಕರಣ: ತುಳು ಸ್ಟ್ಯಾಂಡ್‌ ಅಪ್‌ ಕಾಮಿಡಿಯನ್‌ ಅರೆಸ್ಟ್‌

ಇದನ್ನೂ ಓದಿ : Student rape and murder: ವಿದ್ಯಾರ್ಥಿನಿ ಮೇಲೆ ಕಾಲೇಜು ಪ್ರಾಂಶುಪಾಲನಿಂದ ಅತ್ಯಾಚಾರ, ಕೊಲೆ ಆರೋಪ; ಪೋಷಕರಿಂದ ಆಕ್ರೋಶ

ಇದರಿಂದ ನಷ್ಟವುಂಟಾದ ಕುಂದರ್‌ ಅವರು ಘಟನೆಯ ಬಗ್ಗೆ ಅರಿತುಕೊಂಡಿದ್ದು, ಕೂಡಲೇ ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

Bank fraud case: Money fraud by pretending to be a bank official: File a case

Comments are closed.