Exclusive: ಧೂಳು ತುಂಬಿದ ಬೆಂಗಳೂರು ಪಿಚ್’ನಲ್ಲಿ ಎಲ್ಲಿ ನೋಡಿದ್ರೂ ಕ್ರ್ಯಾಕ್, ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಕಾಂಗರೂಗಳ ಅಭ್ಯಾಸ ಹೇಗಿದೆ ಗೊತ್ತಾ?

ಬೆಂಗಳೂರು: ಫೆಬ್ರವರಿ 9ರಿಂದ ಆರಂಭವಾಗಲಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ (Border-Gavaskar Trophy test series) ಪ್ರವಾಸಿ ಆಸ್ಟ್ರೇಲಿಯಾ ತಂಡ ಭರ್ಜರಿ ಅಭ್ಯಾಸ ನಡೆಸುತ್ತಿದೆ.ಬೆಂಗಳೂರಿನ ಹೊರವಲಯದ ಆಲೂರಿನಲ್ಲಿರುವ KSCA ಮೈದಾನದಲ್ಲಿ ಆಸ್ಟ್ರೇಲಿಯಾ ತಂಡದ ನಾಲ್ಕು ದಿನಗಳ ಅಭ್ಯಾಸ ಶಿಬಿರ ಗುರುವಾರ ಆರಂಭಗೊಂಡಿದೆ (Australia training camp in Bangalore). ಭಾರತ ವಿರುದ್ಧ ಸ್ಪಿನ್ ಸವಾಲು ಎದುರಾಗಲಿರುವ ಕಾರಣ ಸ್ಪಿನ್ ಬೌಲಿಂಗನ್ನು ಎದುರಿಸುವ ನಿಟ್ಟಿನಲ್ಲಿ ಕಾಂಗರೂಗಳು ಬೆಂಗಳೂರಿನಲ್ಲಿ ವಿಶೇಷ ಅಭ್ಯಾಸ ನಡೆಸುತ್ತಿದ್ದಾರೆ.ಆಲೂರು ಮೈದಾನದಲ್ಲಿ ಆಸ್ಟ್ರೇಲಿಯಾ ಆಟಗಾರರು ಅಭ್ಯಾಸ ನಡೆಸುತ್ತಿರುವ ಧೂಳು ತುಂಬಿದ ಪಿಚ್ ವೈರಲ್ ಆಗಿದೆ.

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಆಟಗಾರರಿಗೆ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಅಕ್ಷರ್ ಪಟೇಲ್ ಮತ್ತು ಕುಲ್ದೀಪ್ ಯಾದವ್ ಅವರ ಸ್ಪಿನ್ ಚಾಲೆಂಜ್ ಎದುರಾಗಲಿದೆ. ಭಾರತದ ಸ್ಪಿನ್ನರ್’ಗಳನ್ನು ಸಮರ್ಥವಾಗಿ ಎದುರಿಸಲು ಪ್ಲಾನ್ ಮಾಡಿರುವ ಆಸ್ಟ್ರೇಲಿಯಾ ಆಟಗಾರರು, ಆಲೂರು ಕ್ರೀಡಾಂಗಣದಲ್ಲಿ ಸಿದ್ಧಪಡಿಸಲಾಗಿರುವ ಎರಡು ಸ್ಪಿನ್ ಪಿಚ್’ಗಳಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ.ಮುಖ್ಯವಾಗಿ ಅಶ್ವಿನ್ ಅವರನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಅವರದ್ದೇ ಶೈಲಿಯಲ್ಲಿ ಬೌಲಿಂಗ್ ಮಾಡುವ ಬರೋಡದ ಆಫ್ ಸ್ಪಿನ್ನರ್ ಮಹೇಶ್ ಪಿಥಿಯಾ (Mahesh Pithiya) ಅವರನ್ನು ತನ್ನ ಅಭ್ಯಾಸ ಶಿಬಿರಕ್ಕೆ ಕರೆಸಿಕೊಂಡಿದೆ.

ಮಹೇಶ್ ಪಿಥಿಯಾ ಅವರ ಬೌಲಿಂಗ್ ಶೈಲಿ ಅಶ್ವಿನ್ ಅವರ ಬೌಲಿಂಗ್ ಶೈಲಿಯನ್ನೇ ಹೋಲುತ್ತದೆ. ಹೀಗಾಗಿ ಮಹೇಶ್ ಅವರನ್ನು ಆಸೀಸ್ ತಂಡ ಬೆಂಗಳೂರಿಗೆ ಕರೆಸಿಕೊಂಡಿದ್ದು, ಅವರ ಬೌಲಿಂಗ್ ಅನ್ನು ಕಾಂಗರೂ ಆಟಗಾರರು ಹೆಚ್ಚು ಹೆಚ್ಚು ಎದುರಿಸುತ್ತಿದ್ದಾರೆ. 21 ವರ್ಷದ ಮಹೇಶ್ ಪಿಥಿಯಾ ಬರೋಡ ಪರ ಈಗಾಗ್ಲೇ 4 ಪ್ರಥಮದರ್ಜೆ ಪಂದ್ಯಗಳನ್ನಾಡಿದ್ದು, 8 ವಿಕೆಟ್ ಕಬಳಿಸಿದ್ದಾರೆ.

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ (India Vs Australia test series) ಆತಿಥೇಯ ಭಾರತ ತಂಡದ ಅಭ್ಯಾಸ ಶಿಬಿರ ಗುರುವಾರ ನಾಗ್ಪುರದ ಜಮ್ತಾದಲ್ಲಿರುವ ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಆರಂಭಗೊಂಡಿದೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಲಿರುವ ಎಲ್ಲಾ ಆಟಗಾರರು ಟೀಮ್ ಇಂಡಿಯಾ ಟ್ರೈನಿಂಗ್ ಕ್ಯಾಂಪ್’ಗೆ ಹಾಜರಾಗಿದ್ದಾರೆ.

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ವೇಳಾಪಟ್ಟಿ (India Vs Australia (Border-Gavaskar Trophy test series):
ಪ್ರಥಮ ಟೆಸ್ಟ್: ಫೆಬ್ರವರಿ 9-13 (ವಿಸಿಎ ಕ್ರೀಡಾಂಗಣ, ಜಮ್ತಾ; ನಾಗ್ಪುರ)
2ನೇ ಟೆಸ್ಟ್: ಫೆಬ್ರವರಿ 17-21 (ಫಿರೋಜ್ ಶಾ ಕ್ರೀಡಾಂಗಣ, ದೆಹಲಿ)
3ನೇ ಟೆಸ್ಟ್: ಮಾರ್ಚ್ 1-5 (HPCA ಕ್ರೀಡಾಂಗಣ, ಧರ್ಮಶಾಲಾ)
4ನೇ ಟೆಸ್ಟ್: ಮಾರ್ಚ್ 9-13 (ನರೇಂದ್ರ ಮೋದಿ ಕ್ರೀಡಾಂಗಣ, ಅಹ್ಮದಾಬಾದ್)

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆ.ಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜ, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಇಶಾನ್ ಕಿಶನ್, ಅಕ್ಷರ್ ಪಟೇಲ್, ಶುಭಮನ್ ಗಿಲ್, ಉಮೇಶ್ ಯಾದವ್, ಜೈದೇವ್ ಉನಾದ್ಕಟ್, ಶ್ರೇಯಸ್ ಅಯ್ಯರ್ (2ನೇ ಟೆಸ್ಟ್ ಪಂದ್ಯಕ್ಕೆ ಲಭ್ಯ).

ಇದನ್ನೂ ಓದಿ : MS Dhoni Police look: ಪೊಲೀಸ್ ಅವತಾರದಲ್ಲಿ ಎಂ.ಎಸ್ ಧೋನಿ : ಮಾಹಿಯ ಹೊಸ ಲುಕ್‌ಗೆ ಫ್ಯಾನ್ಸ್ ಫಿದಾ

ಇದನ್ನೂ ಓದಿ : Washington Sundar : ಟೀಮ್ ಇಂಡಿಯಾ ಸ್ಟಾರ್ ವಾಷಿಂಗ್ಟನ್ ಸುಂದರ್‌ಗೆ ಒಂದು ಕಿವಿ ಕಿವುಡು; ಅಚ್ಚರಿಯಾದ್ರೂ ಇದು ಸತ್ಯ

ಇದನ್ನೂ ಓದಿ : Karnataka vs Uttarkhand : ಮೂರೂವರೆ ದಿನಗಳಲ್ಲೇ ಉತ್ತರಾಖಂಡ್ ಉಡೀಸ್, ರಣಜಿ ಟ್ರೋಫಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆಡಲಿರುವ ಆಸ್ಟ್ರೇಲಿಯಾ ತಂಡ:
ಪ್ಯಾಟ್ ಕಮಿನ್ಸ್ (ನಾಯಕ), ಸ್ಟೀವನ್ ಸ್ಮಿತ್ (ಉಪನಾಯಕ), ಡೇವಿಡ್ ವಾರ್ನರ್, ಮ್ಯಾಟ್ ರೆನ್’ಶಾ, ಮಾರ್ನಸ್ ಲಬುಶೇನ್, ಅಲೆಕ್ಸ್ ಕ್ಯಾರಿ, ಸ್ಕಾಟ್ ಬೊಲಾಂಡ್, ಕ್ಯಾಮರೂನ್ ಗ್ರೀನ್, ಪೀಟರ್ ಹ್ಯಾಂಡ್ಸ್’ಕಾಂಬ್, ಜೋಶ್ ಹೇಜಲ್’ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜ, ನೇಥನ್ ಲಯಾನ್, ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್.

Australia training camp in Bangalore: Everywhere you look on the dusty Bangalore pitch, crack, do you know how the kangaroos are practicing for the Border-Gavaskar Test series?

Comments are closed.