ಉಡುಪಿಯಲ್ಲಿ ಮತ್ತೆ ಕೊರೊನಾ ಬ್ಲಾಸ್ಟ್ : ಮಣಿಪಾಲದಲ್ಲಿ ಸಾವಿರದಂಚಿನಲ್ಲಿ ಸೋಂಕಿತರು

ಉಡುಪಿ : ಕೊರೊನಾ ಹೆಮ್ಮಾರಿ ಸೋಂಕು ಉಡುಪಿಯಲ್ಲಿ ಮತ್ತೆ ಆರ್ಭಟಿಸೋದಕ್ಕೆ ಶುರು ಮಾಡಿದೆ. ಜಿಲ್ಲೆಯಲ್ಲಿಂದು ಕೂಡ ಸೋಂಕಿತರ ಸಂಖ್ಯೆ ನೂರರ ಗಡಿದಾಟಿದೆ. ಅದ್ರಲ್ಲೂ ಮಣಿಪಾಲದಲ್ಲಿಯೇ ಸೋಂಕಿತರ ಒಟ್ಟು ಸಂಖ್ಯೆ ಸಾವಿರದಂಚಿಗೆ ಬಂದು ನಿಂತಿದೆ.

ಉಡುಪಿ ಜಿಲ್ಲೆಯಲ್ಲಿಂದು 115 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸಕ್ರೀಯ ಪ್ರಕರಣಗಳ ಸಂಖ್ಯೆ 824ಕ್ಕೆ ಏರಿಕೆಯಾಗಿದೆ. ಉಡುಪಿ ತಾಲೂಕಿನಲ್ಲಿ 84, ಕುಂದಾಪುರದಲ್ಲಿ 24, ಕಾರ್ಕಳದಲ್ಲಿ 7 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಮಣಿಪಾಲದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯನ್ನು ಕಾಣುತ್ತಿದ್ದು ಇಂದೂ ಕೂಡ 70 ಮಂದಿಗೆ ಸೋಂಕು ದೃಢಪಟ್ಟಿದೆ.

ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಸಕ್ರೀಯ ಪ್ರಕರಣಗಳು ಸಾವಿರದಂಚಿಗೆ ಬಂದು ನಿಂತಿದೆ. ಅಲ್ದಲೇ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುವ ಆತಂಕ ವ್ಯಕ್ತವಾಗಿದ್ದು, ಮಣಿಪಾಲ ಕೊರೊನಾ ಹಾಟ್ ಸ್ಪಾಟ್ ಆಗಿ ಮಾರ್ಪಟ್ಟಿದೆ.

https://kannada.newsnext.live/corona-virus-hike-no-exams-all-students-pass/

Comments are closed.