ರಾಜ್ಯದಲ್ಲಿ ಕೊರೊನಾ ಆರ್ಭಟ: ಒಂದೇ ದಿನ 3,082 ಮಂದಿಗೆ ಸೋಂಕು

ಬೆಂಗಳೂರು : ಕೊರೊನಾ ವೈರಸ್ ಎರಡನೇ ಅಲೆಯ ಆರ್ಭಟ ರಾಜ್ಯದಲ್ಲಿ ಜೋರಾಗುತ್ತಿದೆ. ದಿನ ಕಳೆದಂತೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಇಂದು ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಬರೋಬ್ಬ 2004 ಪ್ರಕರಣ ದಾಖಲಾಗಿದ್ರೆ, ರಾಜ್ಯದಲ್ಲಿ 3,082 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಸಿಲಿಕಾನ್ ಸಿಟಿ ಬೆಂಗಳೂರಲ್ಲಿಂದು ಕೊರೊನಾ ಮಹಾಮಾರಿ 2 ಸಾವಿರದ ಗಡಿದಾಟಿದೆ. ಬೆಂಗಳೂರಲ್ಲಿಂದು 2004 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದರೆ, ಕಲಬುರಗಿ 159, ಉಡುಪಿ 115, ಮೈಸೂರು 114, ದಕ್ಷಿಣ ಕನ್ನಡ 68, ಹಾಸನ 65, ಬೀದರ್ 63, ಧಾರವಾಡ 60, ಬಳ್ಳಾರಿ 53, ತುಮಕೂರು 59, ಬೆಂಗಳೂರು ಗ್ರಾಮಾಂತರ 46, ಬೆಳಗಾವಿ 36, ಮಂಡ್ಯ 34, ಶಿವಮೊಗ್ಗ 33, ವಿಜಯಪುರ 24, ಕೊಪ್ಪಳ 20, ಚಿಕ್ಕಬಳ್ಳಾಪುರ 17, ಕೊಡಗು 14, ಗದಗ 14, ರಾಯಚೂರು 13, ಚಿತ್ರದುರ್ಗ 12, ಉತ್ತರ ಕನ್ನಡ 11, ಕೋಲಾರ 9, ಯಾದಗಿರಿ 9, ಚಾಮರಾಜನಗರ 9, ಚಿಕ್ಕಮಗಳೂರು 8, ದಾವಣಗೆರೆ 7, ರಾಮನಗರ 3, ಹಾವೇರಿ 2 ಹಾಗೂ ಬಾಗಲಕೋಟೆಯಲ್ಲಿ 1ಪ್ರಕರಣ ದಾಖಲಾಗಿದೆ.

https://kannada.newsnext.live/dks-belagavi-jarakiholi-protest/

ರಾಜ್ಯದಲ್ಲಿಂದು ಮಹಾಮಾರಿಗೆ 12 ಮಂದಿ ಬಲಿಯಾಗಿದ್ದಾರೆ. ಕೊರೊನಾ ಸೋಂಕಿತರ ಸಂಖ್ಯೆ 3 ಸಾವಿರದ ಗಡಿ ದಾಟುತ್ತಿದ್ದಂತೆಯೇ, ಸಕ್ರೀಯ ಪ್ರಕರಣಗಳ ಸಂಖ್ಯೆ 23,037ಕ್ಕೆ ಏರಿಕೆಯಾಗಿದೆ. ಈ ಮೂಲಕ ಕೊರೊನಾ ಪ್ರಕರಣಗಳ ಸಂಖ್ಯೆ 9,87,012ಕ್ಕೆ ಏರಿಕೆಯಾಗಿದೆ. ದಿನ ಕಳೆದಂತೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ. ಅದ್ರಲ್ಲೂ ಸಿಲಿಕಾನ್ ಸಿಟಿಯಲ್ಲಿ ಸೋಂಕಿನ ಪ್ರಮಾಣ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Comments are closed.