Overpass collapse: ಮಹಾರಾಷ್ಟ್ರದಲ್ಲಿ ಮೇಲ್ಸೇತುವೆ ಕುಸಿತ: ಮಹಿಳೆ ಸಾವು, 12 ಜನ ಗಂಭೀರ ಗಾಯ

ಮುಂಬೈ: (Overpass collapse) ಮಹಾರಾಷ್ಟ್ರದ ಚಂದ್ರಾಪುರದ ಬಲ್ಹರ್ಷಾ ರೈಲ್ವೇ ಜಂಕ್ಷನ್‌ ನಲ್ಲಿ ಭಾನುವಾರ ಮೇಲ್ಸೇತುವೆ ಕುಸಿದು ಬಿದ್ದ ಪರಿಣಾಮ ಮಹಿಳೆಯೋರ್ವರು ಸಾವನ್ನಪ್ಪಿದ್ದಾರೆ. 12 ಜನ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರೈಲ್ವೇ ಫ್ಲಾಟ್‌ ಫಾರ್ಮ್‌ ನ ಸ್ಕೈವಾಕ್‌ ಕೆಳಗೆ ನಡೆದುಕೊಂಡು ಹೋಗುತ್ತಿದ್ದ ಪ್ರಯಾಣಿಕರ ಮೇಲೆ ಮೇಲ್ಸೇತುವೆ ಕುಸಿದಿದೆ. ಇದರಿಂದ ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ.

ಪ್ಲಾಟ್‌ ಫಾರ್ಮ್‌ ಒಂದರಿಂದ ಐದರವರೆಗೆ ಸಂಪರ್ಕಿಸುವ ಏಕೈಕ ಮೇಲ್ಸೇತುವೆ (Overpass collapse) ಇದಾಗಿದ್ದು, ಪುಣೆಗೆ ಹೋಗುವ ರೈಲನ್ನು ಹಿಡಿಯಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಸೇತುವೆಯ ಮೇಲೆ ಮತ್ತು ಕೆಳಗೆ ಓಡಾಡುತ್ತಿದ್ದರು. ಇದೇ ವೇಳೆ ಸಂಜೆ ಸುಮಾರು 5 ಗಂಟೆಯ ಹೊತ್ತಿಗೆ ಇದ್ದಕ್ಕಿದ್ದಂತೆ ಸೇತುವೆಯ ಒಂದು ಭಾಗ ಕುಸಿದು ಬಿದ್ದಿದೆ. ಇದರ ಪರಿಣಾಮವಾಗಿ ಸುಮಾರು ಇಪ್ಪತ್ತು ಅಡಿ ಕೆಳಗಿದ್ದ ರೈಲ್ವೇ ಹಳಿಯ ಮೇಲೆ ಸುಮಾರು 13 ಜನರು ಬಿದ್ದಿದ್ದಾರೆ. ಹಳಿಯ ಮೇಲೆ ಬಿದ್ದ ಜನರಲ್ಲಿ ಓರ್ವ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದು,ಉಳಿದವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ರೈಲ್ವೆ ಇಲಾಖೆಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಇದನ್ನೂ ಓದಿ : Indian Student Died : ಸೈಕಲ್‌ಗೆ ಪಿಕಪ್‌ ಟ್ರಕ್‌ ಢಿಕ್ಕಿ : ಕೆನಡಾದಲ್ಲಿ ಭಾರತದ ವಿದ್ಯಾರ್ಥಿ ಸಾವು

ಇದನ್ನೂ ಓದಿ : Baba Ramdev: ‘ಮಹಿಳೆಯರು ಬಟ್ಟೆ ಧರಿಸದೇ ಇದ್ರೂ’.. ವಿವಾದದ ಕಿಡಿ ಹೊತ್ತಿಸಿದ ಯೋಗ ಗುರು ಹೇಳಿಕೆ

ಮೇಲ್ಸೇತುವೆ ಕುಸಿತದಿಂದ ಗಾಯಗೊಂಡವರನ್ನು ಬಲ್ಲಾರ್‌ ಪುರ ಗ್ರಾಮಾಂತರ ಆಸ್ಪತ್ರೆಗೆ ಸಾಗಿಸಲಾಗಿದೆ. ಕೆಲವರನ್ನು ನಂತರದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಚಂದ್ರಾಪುರ ಸರ್ಕಾರಿ ವೈದ್ಯಕೀಯ ಕಾಲೇಜು, ಹಾಗೂ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಜಿಲ್ಲಾ ಮಾಹಿತಿ ಕಚೇರಿ ತಿಳಿಸಿದೆ.

https://twitter.com/subhamt356/status/1596857317521514496?ref_src=twsrc%5Etfw%7Ctwcamp%5Etweetembed%7Ctwterm%5E1596857317521514496%7Ctwgr%5E521cef0b57f0fdb35f5f91e7378e6e3a36d2fc54%7Ctwcon%5Es1_&ref_url=https%3A%2F%2Ftv9kannada.com%2Fnational%2F1-person-dead-12-injured-as-slab-of-overbridge-collapses-in-maharashtra-chandrapur-kannada-news-sct-au49-477094.html

(Overpass collapse) One woman died as a result of the overpass collapse at Balharsha railway junction in Chandrapur, Maharashtra on Sunday. 12 people were injured and the injured were admitted to the hospital. The flyover collapsed on the passengers who were walking under the skywalk of the railway flat form. The passengers were seriously injured.

Comments are closed.