Coastal Rains : ಕರಾವಳಿ ಸೇರಿ ರಾಜ್ಯದ ಹಲವೆಡೆ ಮಳೆಯ ಆರ್ಭಟ

ಬೆಂಗಳೂರು : ರಾಜ್ಯದ ಕರಾವಳಿ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ನಿನ್ನೆಯಿಂದ ಮತ್ತೆ ಮಳೆರಾಯ (Coastal Rains) ಆರ್ಭಟ ಜೋರಾಗಿದೆ. ಹವಾಮಾನ ಇಲಾಖೆ ಪ್ರಕಾರ, ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ನಿನ್ನೆ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣದಿಂದ ಕೂಡಿದ್ದು, ಮಧ್ಯಾಹ್ನದ ವೇಳೆ ಮಳೆ ಶುರುವಾಗಿದೆ.

ರಾಜ್ಯದ ಕರಾವಳಿ ಜಿಲ್ಲೆಗಳ ಹಲವೆಡೆ ಅಲ್ಲಲ್ಲಿ ಇಂದು ಮತ್ತು ನಾಳೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಮುದ್ರದಲ್ಲಿ ಮಾಮೂಲಿಗಿಂದ ಅಲೆಗಳು ಹೆಚ್ಚಾಗುವ ಸಾಧ್ಯತೆ ಇದ್ದು, 0.4 ಮೀಟರ್‌ ನಿಂದ 1ಮೀಟರ್‌ ವರೆಗೂ ಅಲೆಗಳು ಅಬ್ಬರಿಸಲಿದೆ. ಅಷ್ಟೇ ಅಲ್ಲದೇ ಗುಡುಗು, ಮಿಂಚಿನೊಂದಿಗೆ ಸುಮಾರು 30 ರಿಂದ 40ಕಿ.ಮೀ ವೇಗದಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಮುಂದಿನ ಎರಡು ದಿನಗಳವರೆಗೂ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ : Udupi DC Dr. Vidyakumari : ಮುಕ್ತ ವಿವಿ ಶೈಕ್ಷಣಿಕ ಪ್ರಚಾರ ವಾಹನಕ್ಕೆ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಚಾಲನೆ

ಇದನ್ನೂ ಓದಿ : Udupi DC Dr. Vidyakumari : ಉಡುಪಿಯ ಪ್ರವಾಸಿ ತಾಣಗಳ ಭೇಟಿಗೆ ಅಗಸ್ಟ್ ಅಂತ್ಯದವರೆಗೂ ನಿರ್ಬಂಧ : ಉಡುಪಿ ಡಿಸಿ ಡಾ.ವಿದ್ಯಾಕುಮಾರಿ

ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣಕನ್ನಡ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ ಕಳೆದ ಎರಡು ವಾರಗಳಿಂದ ಮಳೆ ಕಡಿಮೆಯಾಗಿದ್ದು, ಬಿರು ಬಿಸಿನ ತಾಪಮಾನ ಏರಿಕೆಯಿಂದ ನದಿಗಳ ನೀರು ಇಳಿಕೆ ಕಂಡಿದೆ. ಹೀಗಾಗಿ ವಾಡಿಕೆಯಂತೆ ಆಟಿ ಅಮಾವಾಸ್ಯೆ ದಿನ ಸುರಿಯಬೇಕಿದ್ದ ಮಳೆ ಕೂಡ ಕಣ್ಮರೆಯಾದಂತೆ ಆಗಿದೆ. ಇದ್ದರಿಂದ ಕರಾವಳಿ ಭಾಗದ ರೈತರು ಮಳೆ ಕಾಣದ ಆತಂತಕ್ಕೆ ಒಳಗಾಗಿದ್ದರು. ಆದರೆ ನಿನ್ನೆ ಸುರಿಯುತ್ತಿದ್ದ ಮಳೆಯಿಂದ ಕೊಂಚ ಸಿಟ್ಟುಸಿರು ಬಿಡುವಂತೆ ಆಗಿದೆ.

Coastal Rains: Rainfall in many parts of the state including the coast

Comments are closed.