Cooker bomb blast case : ಮಂಗಳೂರಿನ ಇಂಜಿನಿಯರಿಂಗ್‌ ಕಾಲೇಜಿನ ಮೇಲೆ ಎನ್‌ಐಎ ದಾಳಿ

ಮಂಗಳೂರು: (Cooker bomb blast case) ಕಳೆದ ನವೆಂಬರ್‌ ನಲ್ಲಿ ಮಂಗಳೂರು ನಗರದ ನಾಗೂರಿಯಲ್ಲಿ ನಡೆದ ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ತಂಡವು ಮಂಗಳೂರು ಹೊರವಲಯದಲ್ಲಿರುವ ಇಂಜಿನಿಯರಿಂಗ್‌ ಕಾಲೇಜಿನ ಮೇಲೆ ದಾಳಿ ನಡೆಸಿದೆ.

ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ(Cooker bomb blast case)ದ ಪ್ರಮುಖ ಆರೋಪಿ ಉಗ್ರ ಶಾರೀಖ್ ವಿಚಾರಣೆ ನಡೆಸಿದ ಎನ್ ಐ ಎ ಅಧಿಕಾರಿಗಳು ಶಿಕ್ಷಣ ಸಂಸ್ಥೆಗೆ ದಾಳಿ ನಡೆಸಿದ್ದಾರೆ. ಈಗಾಗಲೇ ಎನ್ಐಎ ದಿಂದ ಬಂಧಿತನಾಗಿರುವ ಶಂಕಿತ ಉಗ್ರ ಮಾಝ್ ಮುನೀರ್ ಎಂಬಾತ ಇದೇ ಶಿಕ್ಷಣ ಸಂಸ್ಥೆಯಿಂದ ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದನು. ಈ ಕಾರಣದಿಂದಾಗಿ ಎನ್‌ ಐ ಎ ಅಧಿಕಾರಿಗಳು ಉಗ್ರರು ಓದಿದ ಕಾಲೇಜಿನಲ್ಲೂ ಕುಕ್ಕರ್‌ ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ನಡೆಸಲು ಮುಂದಾಗಿದ್ದು, ಇಂದು ಏಳು ಜನರ ಎನ್‌ ಐ ಎ ತಂಡ ಕಾಲೇಜಿಗೆ ದಾಳಿ ನಡೆಸಿದೆ.

ಏನಿದು ಪ್ರಕರಣ..?
ಕಳೆದ ವರ್ಷ ನವೆಂಬರ್‌ ನಲ್ಲಿ ಮಂಗಳೂರಿನ ಪಂಪ್‌ವೆಲ್‌ನಿಂದ ನಾಗುರಿ ಕಡೆ ಚಲಿಸುತ್ತಿದ್ದ ಆಟೋದಲ್ಲಿ ಸ್ಫೋಟ ಸಂಭವಿಸಿತ್ತು. ಇದಕ್ಕೂ ಮುನ್ನ ದಾರಿ ಮಧ್ಯೆ ಪ್ರಯಾಣಿಕನೊಬ್ಬ ಕೈಯಲ್ಲಿ ಕುಕ್ಕರ್ ಹಿಡಿದುಕೊಂಡು ಆಟೋ ಹತ್ತಿದ್ದ. ಆತ ನಾಗುರಿಗೆ ಹೋಗಲು ಚಾಲಕನಿಗೆ ಸೂಚಿಸಿದ್ದ. ಆದರೆ ಕೆಲವೇ ಕ್ಷಣಗಳಲ್ಲಿ ನಾಗುರಿಯ ಕಂಕನಾಡಿ ಪೊಲೀಸ್ ಠಾಣೆಯ ಎದುರು ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಿದೆ. ಶಂಕಿತನ ಕೈಯಲ್ಲಿದ್ದ ಕುಕ್ಕರ್ ಸ್ಪೋಟದ ತೀವ್ರತೆಗೆ ಛಿದ್ರಗೊಂಡಿದೆ. ಈ ಕುರಿತು ಪೊಲೀಸ್‌ ಅಧಿಕಾರಿಗಳು ಇಂಚಿಂಚು ಮಾಹಿತಿಗಳನ್ನು ಕಲೆ ಹಾಕಿದ್ದು, ಈಗಾಲೇ ಸಾಕಷ್ಟು ಮಾಹಿತಿಗಳು ಬಯಲಾಗಿವೆ. ಇನ್ನಷ್ಟು ಮಾಹಿತಿಗಳನ್ನು ಬಯಲಿಗೆಳೆಯುವ ಕಾರ್ಯ ಪೊಲೀಸ್‌ ಹಾಗೂ ರಾಷ್ಟ್ರೀಯ ತನಿಖಾ ತಂಡದಿಂದ ನಡೆಯುತ್ತಿದೆ. ಇದೀಗ ಸದ್ಯ ಕುಕ್ಕರ್‌ ಬಾಂಬ್‌ ಬ್ಲಾಸ್ಟ್‌ ನ ಆರೋಪಿ ಉಗ್ರ ಶಾರೀಖ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗಿದ್ದಾನೆ. ತನಿಖಾ ದಳ ಆತನನ್ನು ವಸಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದೆ. ಈ ಹಿನ್ನಲೆಯಲ್ಲಿ ಇಂದು ಆತನ ಜೊತೆಗಿದ್ದ ಇನ್ನೋರ್ವ ಶಂಕಿತ ಮಾಝ್‌ ಮುನೀರ್‌ ಓದಿದ ಕಾಲೇಜಿಗೆ ತನಿಖಾ ತಂಡ ದಾಳಿ ನಡೆಸಿದ್ದು, ತನಿಖಾ ತಂಡ ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಬಯಲಿಗೆಳೆಯುವ ಪಣ ತೊಟ್ಟಿದೆ.

ಇದನ್ನೂ ಓದಿ : Udupi Co-vaccine mela: ಅವಳಿ ಜಿಲ್ಲೆಗಳಲ್ಲಿ ಕೋವಿಶೀಲ್ಡ್‌ ಲಸಿಕೆ ಕೊರತೆ: ಜ.4 ರಂದು ಉಡುಪಿಯಲ್ಲಿ ಕೋವ್ಯಾಕ್ಸಿನ್‌ ಮೇಳ

ಇದನ್ನೂ ಓದಿ : District Conference of Journalists -2023: ಸಮಾಜದ ಅಭಿವೃದ್ಧಿಗೆ ಪತ್ರಕರ್ತರ ಕೊಡುಗೆ ಶ್ರೇಷ್ಠವಾದುದು: ಪ್ರಕಾಶ್ ಶೆಟ್ಟಿ ಅಭಿಮತ

ಇದನ್ನೂ ಓದಿ : High tech bus stand: ರಾಜ್ಯದ ಮೊದಲ ಹೈಟೆಕ್‌ ಬಸ್‌ ನಿಲ್ದಾಣ ಸುರತ್ಕಲ್‌ ನಲ್ಲಿ ಪ್ರಾರಂಭ

The National Investigation Agency team has raided an engineering college on the outskirts of Mangalore in connection with the cooker bomb blast case in Naguri, Mangalore city.

Comments are closed.