Producer Umesh Banaker: ಅಪ್ಪು ಸಾವಿನ ಹೊತ್ತಲ್ಲಿ ಕ್ರಾಂತಿ ಶೂಟಿಂಗ್ ನಿಲ್ಲಿಸಿದ್ದ ನಟ ದರ್ಶನ್‌ : ನಿರ್ಮಾಪಕ ಉಮೇಶ್ ಬಣಕರ್‌ ಬಿಚ್ಚಿಟ್ಟ ಸತ್ಯ

(Producer Umesh Banker) ಸ್ಯಾಂಡಲ್‌ ವುಡ್‌ ನಲ್ಲಿ ಇದೀಗ ಅಭಿಮಾನಿಗಳ ಮಧ್ಯೆಯೆ ಕಿಚ್ಚು ಹೊತ್ತಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಷ್ಟೇ ಅಲ್ಲದೇ ಹೊರಗಡೆಯೂ ಕೂಡ ಈ ಫ್ಯಾನ್‌ ವಾರ್‌ ಹಬ್ಬಿಕೊಂಡಿದೆ. ಇದಕ್ಕೆ ಒಂದು ತಾಜಾ ಉದಾಹರಣೆಯೆಂದರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ನಡುವಿನ ಫ್ಯಾನ್ ವಾರ್. ಹೊಸಪೇಟೆಯಲ್ಲಿ ನಡೆದ ಕ್ರಾಂತಿ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ದರ್ಶನ್ ಮೇಲೆ ಚಪ್ಪಲಿ ಎಸೆದು ಕಿಡಿಗೇಡಿಗಳು ಫ್ಯಾನ್‌ ವಾರ್‌ ಅನ್ನು ಸದುಪಯೋಗಪಡಿಸಿಕೊಂಡಿದ್ದರು. ಯಾರೋ ಮೂರನೇಯವರು , ಕಿಡಿಗೇಡಿಗಳು ಮಾಡಿದ ನೀಚ ಕೆಲಸದಿಂದ ಕೆಸರೆರೆಚಿಸಿಕೊಂಡವರು ಮಾತ್ರ ದರ್ಶನ್ ಹಾಗೂ ಪುನೀತ್ ರಾಜ್‌ಕುಮಾರ್‌ ಅವರ ಅಭಿಮಾನಿಗಳು.

ಹೌದು, ಈ ಕೃತ್ಯವನ್ನು ಎಸಗಿದ್ದು ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳೇ ಎಂದು ದರ್ಶನ್ ಅಭಿಮಾನಿಗಳು ಆರೋಪಿಸಿದರೆ, ಇದನ್ನು ಯಾವುದೇ ಕಾರಣಕ್ಕೂ ಅಪ್ಪು ಫ್ಯಾನ್ಸ್ ಮಾಡಿಲ್ಲ ಎಂದು ಅವರ ವಾದಕ್ಕೆ ಪ್ರತಿವಾದವೆಂಬಂತೆ ಪುನೀತ್ ರಾಜ್‌ ಕುಮಾರ್‌ ಫ್ಯಾನ್ಸ್ ಇದ್ದರು. ಹೀಗಾಗಿ ಇಬ್ಬರು ಬಹುದೊಡ್ಡ ಕಲಾವಿದರ ಅಭಿಮಾನಿಗಳ ನಡುವಿನ ಈ ಕಿಡಿಗೇಡಿಗಳು ಹಚ್ಚಿದ ಕಿಚ್ಚು ಮತ್ತಷ್ಟು ಹೆಚ್ಚಾಗಿ ದೊಡ್ಡ ಮಟ್ಟದ ವಿವಾದವನ್ನೇ ಹುಟ್ಟುಹಾಕಿ, ದೊಡ್ಡ ಮಟ್ಟದಲ್ಲೇ ಸದ್ದು ಮಾಡಿತ್ತು.

ಅಷ್ಟೇ ಅಲ್ಲದೇ ಇದಕ್ಕೆ ಪೂರಕವೆಂಬಂತೆ ಫ್ಯಾನ್‌ ವಾರ್‌ ಜೊತೆಗೆ ಇದರಲ್ಲಿ ಸ್ಟಾರ್ ಗಳ ಮಧ್ಯೆ ವಾರ್ ಕೂಡ ಇದೆ. ಹೀಗಾಗಿ ಯಾರೂ ಕೂಡ ಈ ವಿಷಯದ ಕುರಿತು ಮಾತನಾಡುತ್ತಿಲ್ಲ ಎಂಬ ಅಭಿಪ್ರಾಯವೂ ಸಹ ಕೆಲವರಲ್ಲಿ ವ್ಯಕ್ತವಾಗಿತ್ತು. ಈ ಅಭಿಪ್ರಾಯದ ಕುರಿತಾಗಿ ನಿರ್ಮಾಪಕ ಉಮೇಶ್ ಬಣಕರ್ (Producer Umesh Banaker) ಪ್ರತಿಕ್ರಿಯೆ ನೀಡಿದ್ದಾರೆ. ಸಿನಿರಸಿಕರ ಸ್ಟಾರ್‌ ವಾರ್‌ ಅಭಿಪ್ರಾಯದ ಕುರಿತು ಮಾತನಾಡಿದ ಉಮೇಶ್ ಬಣಕರ್, ” ಇವೆಲ್ಲಾ ಸತ್ಯಕ್ಕೆ ತುಂಬಾ ದೂರವಾದ ಮಾತು. ಪುನೀತ್ ರಾಜ್‌ಕುಮಾರ್ ನಿಧನ ಹೊಂದಿದ ವಿಷಯ ತಿಳಿಯುತ್ತಿದ್ದಂತೆ ಶೂಟಿಂಗ್‌ನಲ್ಲಿ ತೊಡಗಿಕೊಂಡಿದ್ದ ದರ್ಶನ್ ಆ ಕೂಡಲೇ ಶೂಟಿಂಗ್ ನಿಲ್ಲಿಸಿದ್ದರು. ಅಲ್ಲದೇ 15 ದಿನಗಳ ಕಾಲ ಯಾವುದೇ ಶೂಟಿಂಗ್ ಮಾಡುವುದು ಬೇಡ ಎಂದು ಹೇಳಿದ್ದರು. ಇಬ್ಬರ ನಡುವೆ ಅಂತಹ ಸ್ನೇಹ ಇತ್ತು.” ಎಂದು ತಿಳಿಸಿದರು. ಅವರ ಸ್ನೇಹಕ್ಕೆ ಈ ವಿಷಯವೇ ಸಾಕ್ಷಿ ಎಂದಿದ್ದಾರೆ.

ಈ ಫ್ಯಾನ್‌ವಾರ್ ಎಂಬುದನ್ನು ಒಬ್ಬ ಕಲಾವಿದನ ನಿಜವಾದ ಅಭಿಮಾನಿಗಳು ಮಾಡಲು ಸಾಧ್ಯವಿಲ್ಲ, ಇಬ್ಬರ ಮಧ್ಯೆ ತಂದಿಟ್ಟು ತಮಾಷೆ ನೋಡಿ ತೀಟೆ ತೀರಿಸಿಕೊಳ್ಳುವವರು ಮಾತ್ರ ಮಾಡುವ ಕೆಲಸವಿದು. ಹೇಗಿದ್ದರೂ ಜಿಯೋದಲ್ಲಿ ಮೂರು ತಿಂಗಳಿಗಳಿಗೊಮ್ಮೆ ಹಣ ಕಟ್ಟಿ ಡೇಟಾ ಬಳಸುವ ಅವಕಾಶವಿದೆ, ಹೀಗಾಗಿ ಕೆಲಸವಿಲ್ಲದ ಕಿಡಿಗೇಡಿಗಳು ಇಬ್ಬರ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣ ಎಂಬ ಆಯುಧ ಬಳಸಿ ಬೆಂಕಿ ಹಚ್ಚುತ್ತಿದ್ದಾರೆ.” ಎಂದಿದ್ದಾರೆ (Producer Umesh Banaker).

ಇನ್ನು ದರ್ಶನ್ ಆಪ್ತ ಗೆಳೆಯರಲ್ಲಿ ಒಬ್ಬರಾದ ವಿನೋದ್ ಪ್ರಭಾಕರ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಪುನೀತ್ ರಾಜ್‌ಕುಮಾರ್ ನಿಧನ ಹೊಂದಿದಾಗ ದರ್ಶನ್ ಅವರು ಯಾವ ರೀತಿ ಪ್ರತಿಕ್ರಿಯಿಸಿದ್ರು ಎಂಬುದನ್ನು ತಿಳಿಸಿದ್ದರು. ದರ್ಶನ್‌ ಆಗಲಿ ಪುನಿತ್‌ ರಾಜ್ ಕುಮಾರ್‌ ಅಗಲಿ ತಮ್ಮ ಅಭಿಮಾನಿಗಳಿಗೆ ವಾರ್‌ ಮಾಡಲು ಪ್ರೇರೆಪಿಸಿಲ್ಲ, ಅಂತಹ ಹೇಳಿಕೆಗಳನ್ನು ಇದುವರೆಗೂ ನೀಡಿಲ್ಲ ಎಂದಿದ್ದಾರೆ.

ಇದನ್ನೂ ಓದಿ : ಪರಂವಃ ಪಿಕ್ಚರ್ಸ್‌ ಬ್ಯಾನರ್‌ ಅಡಿಯಲ್ಲಿ ಸಿದ್ದವಾಯ್ತು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’: ಪೋಸ್ಟರ್‌ ಬಿಡುಗಡೆಗೊಳಿಸಿದ ರಕ್ಷಿತ್‌ ಶೆಟ್ಟಿ

ಈ ಹಿಂದೆ ಅಭಿಮಾನಿಗಳು ಒಬ್ಬರಿಗೊಬ್ಬರು ಕಿತ್ತಾಡುವಾಗ ಪ್ರತಿಕ್ರಿಯೆ ನೀಡಿದ್ದ ದರ್ಶನ್‌ “ಇನ್ನೋರ್ವ ನಟನ ಬಗ್ಗೆ ಕೀಳಾಗಿ ಮಾತನಾಡುವವನು ನಮ್ಮ ಅಭಿಮಾನಿಗಳಾಗಲು ಸಾಧ್ಯವಿಲ್ಲ. ಒಬ್ಬ ಕಲಾವಿದನ ನಿಜವಾದ ಅಭಿಮಾನಿಗಳು ಇನ್ನೊಬ್ಬ ಕಲಾವಿದನಿಗೆ ಕೆಟ್ಟದಾಗಿ ಮಾತನಾಡುವುದಿಲ್ಲ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು.

Along with the fan war, it also has a war between the stars. Hence the opinion was also expressed by some that no one is talking about this issue. Producer Umesh Bankar has given a response on this opinion.

Comments are closed.