2 Month baby died: ಕಪಿಚೇಷ್ಟೆಗೆ ಹಾರಿಹೊಯ್ತು ಹಸುಳೆಯ ಪ್ರಾಣ : ಮಹಡಿಯಿಂದ ಮಗುವನ್ನು ಎಸೆದ ವಾನರ ಸೈನ್ಯ

ಉತ್ತರ ಪ್ರದೇಶ: (2 Month baby died) ಕೋತಿಗಳ ಹಿಂಡೊಂದು ಮನೆಯಂಗಳದಲ್ಲಿ ಮಲಗಿದ್ದ ಎರಡು ತಿಂಗಳ ಮಗುವನ್ನು ಮನೆಯ ಮಹಡಿ ಮೇಲೆ ಹೊತ್ತೊಯ್ದು ಅಲ್ಲಿಂದ ಕೆಳಗೆ ಎಸೆದಿದ್ದು, ಬಿದ್ದ ರಭಸಕ್ಕೆ ಎರಡು ತಿಂಗಳ ಹಸುಗೂಸು ಅಲ್ಲಿಯೇ ಪ್ರಾಣ ಕಳೆದುಕೊಂಡಿದೆ. ಮಂಗನ ಚೇಷ್ಟೆಗೆ ಏನು ಅರಿಯದ ಪುಟ್ಟ ಕಂದಮ್ಮ ಪ್ರಾಣ ಕಳೆದುಕೊಂಡ ಘಟನೆ ಉತ್ತರ ಪ್ರದೇಶದ ಬಂಡಾ ಜಿಲ್ಲೆಯಲ್ಲಿ ನಡೆದಿದೆ.

ಕೋತಿಗಳ ಹಿಂಡಿನ ಮಧ್ಯೆಯೇ ಕಿತ್ತಾಟ ನಡೆದಿದೆ. ಕಿತ್ತಾಡಿಕೊಂಡ ಕೋತಿಗಳ ಗುಂಪು ಮನೆಯಂಗಳದಲ್ಲಿ ಮಲಗಿದ್ದ ಎರಡು ತಿಂಗಳ ಮಗುವನ್ನು ಎತ್ತಿಕೊಂಡು ಹೋಗಿವೆ. ಮಗುವನ್ನು ಎತ್ತಿಕೊಂಡು ಹೋಗುತ್ತಿರುವುದನ್ನು ನೋಡಿದ ಮನೆಯವರು ಮಗುವನ್ನು ರಕ್ಷಿಸಲು ಮುಂದಾಗಿದ್ದಾರೆ. ಈ ವೇಳೆ ಮಂಗಗಳು ಮಗುವನ್ನು ಎತ್ತಿಕೊಂಡು ಮನೆಯ ಮಹಡಿ ಮೇಲೆ ಹತ್ತಿದ್ದು, ಮನೆಯವರು ಮಗುವನ್ನು ರಕ್ಷಿಸಲು ಪ್ರಯತ್ನಿಸಿದಾಗ ಮಂಗಗಳ ಗುಂಪು ಎರಡು ತಿಂಗಳ ಕಂದಮ್ಮ(2 Month baby died) ನನ್ನು ಮಹಡಿ ಮೇಲಿಂದ ಎಸೆದಿವೆ.

ತಕ್ಷಣವೇ ಮನೆಯವರು ಮಗುವನ್ನು ಅಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ಆದರೆ ವೈದ್ಯರು ,ಮಗು ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ. ಮಹಡಿಯ ಮೇಲಿಂದ ಬಿದ್ದ ರಭಸಕ್ಕೆ ಹಸುಗೂಸು ಸ್ಥಳದಲ್ಲೇ ಪ್ರಾಣ ಬಿಟ್ಟಿತ್ತು. ಗುವನ್ನು ಕಳೆದುಕೊಂಡು ದುಃಖಿತರಾದ ತಂದೆ, “ನಮ್ಮ ಊರಿನಲ್ಲಿ ಮಂಗಗಳ ಕಾಟ ವಿಪರೀತವಾಗಿದೆ. ಈಗಾಗಲೇ ಹಲವರು ಮಂಗಗಳ ಕಾಟಕ್ಕೆ ತುತ್ತಾಗಿ ಗಾಯಗೊಂಡಿದ್ದಾರೆ. ಇದರ ಬಗ್ಗೆ ದೂರು ನೀಡಿದರು ಅರಣ್ಯ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Belagavi Accident-6 died: ಪಾದಯಾತ್ರೆಗಳ ಪಾಲಿಗೆ ಯಮನಂತೆ ಬಂದ ಬೊಲೆರೊ : ಯಲ್ಲಮ್ಮನ ದರ್ಶನಕ್ಕೆ ಹೊರಟಿದ್ದ 6 ಮಂದಿ ಸಾವು

ಇದನ್ನೂ ಓದಿ : Mumbai Lift collapse: ಬಹುಮಹಡಿ ಕಟ್ಟಡದ ಲಿಫ್ಟ್‌ ಕುಸಿತಕ್ಕೆ ಯುವಕ ಬಲಿ

ಈ ಹಿಂದೆ ಕೂಡ ಉತ್ತರ ಪ್ರದೇಶದ ಅಲಿಘಡ ಎಂಬಲ್ಲಿನ ಕಾಲೇಜೊಂದರಲ್ಲಿ ಮಂಗಗಳ ಹಿಂಡು ವಿದ್ಯಾರ್ಥಿಗಳ ಮೇಲೆನ ದಾಳಿ ನಡೆಸಿದ್ದವು. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೂ ಕೂಡ ತೊಂದರೆಯಾಗಿತ್ತು.

A herd of monkeys carried a two-month-old baby who was sleeping in the courtyard of the house and threw it down from there, and a two-month-old cow died there.

Comments are closed.