ಉಡುಪಿಯಲ್ಲಿ 33 ಮಂದಿಗೆ ಕೊರೊನಾ ಸೋಂಕು : ಮಣಿಪಾಲದ ಎಂಐಟಿ ಕ್ಯಾಂಪಸ್ ಕಂಟೈನ್ಮೆಂಟ್ ಝೋನ್

ಉಡುಪಿ : ಕಳೆದ ಕೆಲ ತಿಂಗಳುಗಳಿಂದ ತಣ್ಣಗಾಗಿದ್ದ ಕೊರೊನಾ ವೈರಸ್ ಸೋಂಕು ಇದೀಗ ಉಡುಪಿ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದೆ. ಇಂದು 33 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮಣಿಪಾಲದ ಎಂಐಟಿ ಕ್ಯಾಂಪಸ್ ನ್ನು ಕಂಟೈನ್ಮೆಂಟ್ ಝೋನ್ ಆಗಿ ಘೋಷಿಸಲಾಗಿದೆ.

ಎಂಐಟಿ ಕಾಲೇಜಿನ ಸುಮಾರು 27 ಮಂದಿ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಕಾಲೇಜು ಕ್ಯಾಂಪಸ್ ನ್ನು ಕಂಟೈನ್ಮೆಮಟ್ ಝೋನ್ ಆಗಿ ಘೋಷಿಸಲಾಗಿದೆ. ಅಲ್ಲದೇ ಕೊರೊನಾ ಪೀಡಿತರನ್ನು ಐಸೋಲೇಷನ್ ಗೆ ಒಳಪಡಿಸಲಾಗಿದ್ದು, ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

https://kannada.newsnext.live/dk-shivakumar-contest-next-election-mangalore-north-constituency/

ಜಿಲ್ಲೆಯಲ್ಲಿ 33 ಮಂದಿ ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಅಗತ್ಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಖಾರಿ ಡಾ ಸುಧೀರ್ ಚಂದ್ರ ಸೂಡಾ ಅವರು ತಿಳಿಸಿದ್ದಾರೆ.

Comments are closed.