Mandir of Mother India: ಕರಾವಳಿಯಲ್ಲಿ ಲೋಕಾರ್ಪಣೆಯಾಗಲಿದೆ ಮತ್ತೊಂದು ಭವ್ಯ ಮಂದಿರ: ಇದರ ವಿಶೇಷತೆಯೇನು ಗೊತ್ತಾ?

ಮಂಗಳೂರು: (Mandir of Mother India) ದೇಶದಲ್ಲಿ ಕೇರಳ ದೇವರ ನಾಡು ಎಂದು ಪ್ರಖ್ಯಾತಿ ಹೊಂದಿದರೆ ಕರ್ನಾಟಕದ ಕರಾವಳಿ ದೇವರ ಬೀಡು ಅಂತಲೇ ಪ್ರಖ್ಯಾತಿ ಹೊಂದಿದೆ. ಈಗಾಗಲೇ ಹತ್ತು ಹಲವು ಪ್ರಸಿದ್ದ ದೇವಾಲಯಗಳನ್ನು ಹೊಂದಿದ ಕರಾವಳಿಯಲ್ಲಿ ಮತ್ತೊಂದು ಭವ್ಯ ಮಂದಿರ ಲೋಕಾರ್ಪಣೆಗೊಳ್ಳಲಿದೆ.

ದೈವಗಳ ನೆಲೆಬೀಡಾಗಿರುವ ಕರಾವಳಿಯಲ್ಲಿ, ದೇಶ ಭಕ್ತರ ಪಾಲಿಗೆ ಸ್ಫೂರ್ತಿಯಾಗಿ ಪ್ರವಾಸಿಗರಿಗೆ ರಮಣೀಯ ಸ್ಥಳವಾಗಿಯೂ ಜನರ ಮನಸ್ಸಿಗೆ ಆನಂದ ನೀಡಲು ಸುಂದರವಾದ ಭಾರತ ಮಾತೆಯ ಮಂದಿರ ಸಜ್ಜಾಗುತ್ತಿದೆ. ದಕ್ಷಿಣ ಕನ್ನಡದ ಪುತ್ತೂರು ತಾಲೂಕಿನ ಹನುಮಗಿರಿ ಪಂಚಮುಖಿ ಆಂಜನೇಯ ಕ್ಷೇತ್ರದ ಸಮೀಪದಲ್ಲಿರುವ ಅಮರಗಿರಿಯಲ್ಲಿ ಭವ್ಯವಾದ ಭಾರತ ಮಾತಾ ಮಂದಿರ ನಿರ್ಮಾಣಗೊಂಡಿದೆ. ಧರ್ಮಶ್ರೀ ಪ್ರತಿಷ್ಠಾನದ ವತಿಯಿಂದ ಈ ಮಂದಿರ ನಿರ್ಮಾಣವಾಗಿದ್ದು, ಸರಿಸುಮಾರು ಎರಡೂವರೆ ಎಕರೆ ಜಾಗದಲ್ಲಿ ಮಂದಿರ ನಿರ್ಮಿಸಲಾಗಿದೆ.

ದೇವರ ಬೀಡಿನ ಸಾಲಿಗೆ ಇಂದಿನಿಂದ ಇನ್ನೊಂದು ಭಾರತಮಾತೆಯ ಮಂದಿರ ಸೇರ್ಪಡೆಯಾಗಿದ್ದು, ಪ್ರಕೃತಿ ರಮಣೀಯತೆಯ ಮಧ್ಯೆ ತಲೆಯೆತ್ತಿರುವ ಭಾರತ ಮಾತಾ ಮಂದಿರವನ್ನು ರಾಷ್ಟ್ರಾಭಿಮಾನ ಮೂಡಿಸುವ ಸಲುವಾಗಿ ಮೂರು ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಭಾರತದಲ್ಲಿ ಕನ್ಯಾಕುಮಾರಿ ಬಿಟ್ಟರೆ ಭಾರತ ಮಾತೆಯ ಮಂದಿರ ನಿರ್ಮಾಣವಾಗಿರುವ ಎರಡನೇ ಸ್ಥಳ ಎಂತಲೇ ಈ ಮಂದಿರ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನೂ ಈ ಮಂದಿರದಲ್ಲಿ ಭಾರತಮಾತೆಯ ವಿಗ್ರಹ, ಜೈ ಜವಾನ್‌ ಜೈ ಕಿಸಾನ್‌ ಘೋಷವಾಕ್ಯದ ಪೂರಕವಾಗಿಬ ಯೋಧರ ಮತ್ತು ರೈತರ ಪ್ರತಿಮೆಯನ್ನು ಹಾಗೂ ಸ್ವಾಂತಂತ್ರ್ಯ ಹೋಅಟಗಾರರ ಚಿತ್ರಗಳನ್ನು ನಿರ್ಮಿಸಲಾಗಿದೆ.

ಇದನ್ನೂ ಓದಿ : Amit Shah roadshow cancelled: ಕೊರಗಜ್ಜನ ದೈವ ಕೋಲಕ್ಕಾಗಿ ಮಂಗಳೂರಿನಲ್ಲಿ ಅಮಿತ್‌ ಶಾ ರೋಡ್‌ ಶೋ ರದ್ದು

ಇದನ್ನೂ ಓದಿ : Amit Shah to Puttur: ನಾಳೆ ಪುತ್ತೂರಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ

ಇದನ್ನೂ ಓದಿ : Udupi Plastic road experiment: ಉಡುಪಿಯಲ್ಲಿ ಯಶಸ್ವಿ ಕಂಡ ಪ್ಲಾಸ್ಟಿಕ್‌ ರಸ್ತೆ ಪ್ರಯೋಗ

ಇನ್ನೂ ದೇಶ ಭಕ್ತಿ ಸಾರುವ ಅಮರಗಿರಿಯ ಭಾರತ ಮಾತೆ ಮಂದಿರವನ್ನು ಇಂದು ಕೆಂದ್ರ ಗೃಹ ಸಚಿವ ಅಮಿತ್‌ ಶಾ ಲೋಕಾರ್ಪಣೆ ಮಾಡಲಿದ್ದಾರೆ. ಇಂದಿನಿಂದ ಅಮರಗಿರಿಯ ಭಾರತಮಾತೆ ಮಂದಿರ ಕರಾವಳಿ ಭಾಗದ ಮತ್ತೊಂದು ಪುಣ್ಯಕ್ಷೇತ್ರವಾಗಿ ದೇಶಭಕ್ತರ ಮನಕ್ಕೆ ಮುದ ನೀಡಲಿದೆ.

Mandir of Mother India: Another grand temple to be dedicated on the coast: Do you know what is special about it?

Comments are closed.