ಕುಕ್ಕೆ ಸುಬ್ರಹ್ಮಣ್ಯ ದೇಗುಲದ ವಿರುದ್ದ ಸಿಡಿದೆದ್ದ ಭಕ್ತರು

ಮಂಗಳೂರು : ರಾಜ್ಯದ ಶ್ರೀಮಂತ ದೇಗುಲವೆಂಬ ಖ್ಯಾತಿಗೆ ಪಾತ್ರವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆಯ ಸುಬ್ರಹ್ಮಣ್ಯ ದೇಗುಲಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಆಶ್ಲೇಷಾ ಪೂಜೆಗೆ ಆನ್ ಲೈನ್ ಮೂಲಕ ಬುಕ್ಕಿಂಗ್ ಮಾಡುವ ಬದಲು, ದೇವಸ್ಥಾನದಲ್ಲಿಯೇ ಟಿಕೆಟ್ ಪಡೆಯಬೇಕೆಂಬ ದೇವಸ್ಥಾನದ ನಿಯಮ ಭಕ್ತರನ್ನು ಆಕ್ರೋಶಿತರನ್ನಾಗಿಸಿದೆ.

ಹೌದು, ಕುಕ್ಕೆ ಸುಬ್ರಹ್ಮಣ್ಯನ ಕ್ಷೇತ್ರದಲ್ಲಿ ನಾಗದೋಷ ಪರಿಹಾರಕ್ಕೆ ನಿತ್ಯವೂ ಸಾವಿರಾರು ಮಂದಿ ಆಗಮಿಸುತ್ತಿದ್ದಾರೆ. ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆುಯಲ್ಲಿ ಕಡಿಮೆಯಾಗಿಲ್ಲ. ಹಿಂದೆಲ್ಲಾ ಆಶ್ಲೇಷ ಪೂಜೆಯನ್ನು ಮಾಡಿಸುವ ಭಕ್ತರು ಆನ್ ಲೈನ್ ಮೂಲಕವೇ ಬುಕ್ಕಿಂಗ್ ಮಾಡಿಸುತ್ತಿದ್ದರು. ಆದ್ರೀಗ ದೇವಸ್ಥಾನದ ಆಡಳಿತ ಮಂಡಳಿ ನಿಯಮದಲ್ಲಿ ಬದಲಾವಣೆಯನ್ನು ಮಾಡಿಕೊಂಡಿದ್ದು. ಭಕ್ತರು ದೇವಸ್ಥಾನಕ್ಕೆ ಬಂದೇ ಟಿಕೆಟ್ ಪಡೆಯಬೇಕಾಗಿದೆ.

ಹೀಗಾಗಿ ನಿನ್ನೆ ರಾತ್ರಿಯೇ ಕ್ಷೇತ್ರಕ್ಕೆ ಬಂದಿರುವ ಸಾವಿರಾರು ಭಕ್ತರು ಆಶ್ಲೇಷ ಪೂಜೆ ಟಿಕೆಟ್ ಮಾಡಿಸಲು ಕೌಂಟರ್ ಮುಂದೆ ಸಾಲುಗಟ್ಟಿ ನಿಂತಿದ್ದಾರೆ.  ರಾತ್ರಿ 12 ಗಂಟೆಯಿಂದ ಬೆ.7 ಗಂಟೆಯವರೆಗೆ ಕುಕ್ಕೆಯಲ್ಲಿ ಭಾರೀ ಜನಜಂಗುಳಿ ಸೇರಿದ್ದು ನಿಗದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪೂಜೆ ಮಾಡಿಸಲು ಆಗಮಿಸಿದ್ದಾರೆ.

ಹೊಸ ನಿಮಯದಿಂದಾಗಿ ರಥಬೀದಿಯುದ್ದಕ್ಕೂ ಭಕ್ತರು ಸರತಿ ಸಾಲಿನಲ್ಲಿ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿದೆ. ದೇವಸ್ಥಾನದ ಆಡಳಿತ ಮಂಡಳಿ ಇದೀಗ ನಿಯಮದಲ್ಲಿ ಬದಲಾವಣೆಯನ್ನು ಮಾಡಿರೋದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

Comments are closed.