ಮೊಬೈಲ್ ನಲ್ಲಿ ಕೊರೊನಾ ಕಾಲರ್ ಟೋನ್ ಕಿರಿಕಿರಿ ತಪ್ಪಿಸಬೇಕೇ ? ಹಾಗಾದ್ರೆ ಇಲ್ಲಿದೆ ಮಾಹಿತಿ

ನವದೆಹಲಿ : ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡ ದಿನದಿಂದ ಹಿಡಿದು ಇಂದಿನವರೆಗೂ ಯಾರಿಗೆ ಕರೆ ಮಾಡಿದ್ರೂ ಕೊರೊನಾ ಕಾಲರ್ ಟೋನ್ ಕಿರಿಕಿರಿಯಾಗುತ್ತಿದೆ. ಎಮರ್ಜೆನ್ಸಿ ಕರೆ ಮಾಡಿದ್ರೂ ಕೂಡ ಕಾಲ್ ಕನಕ್ಟ್ ಆಗೋದಕ್ಕೆ ಕನಿಷ್ಠ ಒಂದು ನಿಮಿಷ ಹಿಡಿಯುತ್ತೆ. ಇನ್ನು ಪದೇ ಪದೇ ಕಾಲ್ ಮಾಡಿದಾಗ ಕೊರೊನಾ ಮುನ್ನೆಚ್ಚರಿಕೆಯ ಕಾಲರ್ ಟೋನ್ ನಿಂದ ಗ್ರಾಹಕರು ಬೇಸತ್ತು ಹೋಗಿದ್ದಾರೆ.

ಕಳೆದ ಐದಾರು ತಿಂಗಳಿನಿಂದಲೂ ಕೊರೊನಾ ಕಾಲರ್ ಟೋನ್ ನಿಂದ ಕಿರಿಕಿರಿ ಅನುಭವಿಸುತ್ತಿರುವ ಬಹುತೇಕ ಗ್ರಾಹಕರು ಸರಕಾರದ ಮುಂದೆಯೂ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಸರಕಾರಗಳು ಮಾತ್ರ ಗ್ರಾಹಕರಿಗೆ ಕೊರೊನಾ ಕಾಲರ್ ಟೋನ್ ನಿಂದ ಮುಕ್ತಿ ದೊರಕಿಸಿಲ್ಲ. ಆದರೆ ಕೊರೊನಾ ಕಾಲರ್ ಟೋನ್ ನಿಂದ ತಪ್ಪಿಸಿಕೊಳ್ಳೋದಕ್ಕೆ ಇಲ್ಲೊಂದು ಅವಕಾಶವಿದೆ.

JIO ಗ್ರಾಹಕರು : ನೀವು ಜಿಯೋ ಗ್ರಾಹಕರಾಗಿದ್ದರೆ STOP ಎಂದು ಟೈಪ್ ಮಾಡಿ 155223ಗೆ ಮೇಸೆಜ್ ಮಾಡಿ. ಆಗ ನಿಮ್ಮ ಮೊಬೈಲ್ ಸಂಖ್ಯೆಗೆ ಕೊರೊನಾ ಕಾಲರ್ ಟೋನ್ ಬದಲಾದ ಸಂದೇಶ ಬರುತ್ತದೆ.

AIRTEL ಗ್ರಾಹಕರು : ನೀವು ಏರ್ ಟೆಲ್ ಗ್ರಾಹಕರಾಗಿದ್ದರೆ ನಿಮ್ಮ ಮೊಬೈಲ್ ಸಂಖ್ಯೆಯಿಂದ 642*224# ಎಂದು ಟೈಪ್ ಮಾಡಿ ನಂತರ 1ನ್ನು ಒತ್ತಿ. ಹೀಗೆ ಮಾಡಿದ್ರೆ ನಿಮ್ಮ ಮೊಬೈಲ್ ಸಂಖ್ಯೆಗೆ ಕೊರೊನಾ ಕಾಲರ್ ಟೋನ್ ಬದಲಾದ ಸಂದೇಶ ರವಾನೆಯಾಗುತ್ತದೆ.

BSNL ಗ್ರಾಹಕರು : ನೀವು ಬಿಎಸ್ ಎನ್ ಎಲ್ ಗ್ರಾಹಕರಾಗಿದ್ದರೆ, UNSUB ಎಂದು ಟೈಪ್ ಮಾಡಿ 56700 ಅಥವಾ 56799ಗೆ ಮೇಸೆಜ್ ಮಾಡಿ. ಹೀಗೆ ಮಾಡಿದ ಕೂಡಲೇ ನಿಮ್ಮ ಮೊಬೈಲ್ ಸಂಖ್ಯೆಗೆ ಕೊರೊನಾ ಕಾಲರ್ ಟೋನ್ ಬದಲಾವಣೆಯಾಗಿರುವ ಸಂದೇಶ ರವಾನೆಯಾಗುತ್ತದೆ.

ವೊಡಾಪೋನ್/ ಐಡಿಯಾ ಗ್ರಾಹಕರು : ನೀವು ವೊಡಾಪೋನ್ ಹಾಗೂ ಐಡಿಯಾ ಗ್ರಾಹಕರಾಗಿದ್ದರೆ ನೀವು ನಿಮ್ಮ ಮೊಬೈಲ್ ಸಂಖ್ಯೆಯಿಂದ CANCT ಎಂದು ಟೈಪ್ ಮಾಡಿ 144 ಸಂಖ್ಯೆಗೆ ಕಳುಹಿಸಿ. ಹೀಗೆ ಮಾಡಿದ ಕೂಡಲೇ ನಿಮ್ಮ ಮೊಬೈಲ್ ಸಂಖ್ಯೆಗೆ ಕೊರೊನಾ ಕಾಲರ್ ಟೋನ್ ಬದಲಾವಣೆಯಾಗಿರುವ ಸಂದೇಶ ರವಾನೆಯಾಗುತ್ತದೆ.

Comments are closed.