Fatty Liver Day Adarsh Hospital Udupi : ಉಡುಪಿ : ಫ್ಯಾಟಿ ಲಿವರ್ ದಿನದ ಹಿನ್ನೆಲೆಯಲ್ಲಿ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಜೂನ್ 13 ರಂದು ಆಯೋಜಿಸಲಾಗಿದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದ್ದು, ಸಂಪೂರ್ಣ ಉಚಿತವಾಗಿ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಬಹುದಾಗಿದೆ.

ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಯಕೃತ್ತು ಮತ್ತು ಕರಳು ಸಂಬಂಧಿತ ಕಾಯಿಗಳ ತಜ್ಞರೊಂದಿಗೆ ಸಮಾಲೋಚನೆ, ಆಹಾರ ಪಥ್ಯ ಸಮಾಲೋಚನೆ ನಡೆಸಬಹುದಾಗಿದೆ. ಇನ್ನು ರಕ್ತ ಪರೀಕ್ಷೆ ಕೂಡ ಉಚಿತವಾಗಿದ್ದು, ರಕ್ತದ ಸಕ್ಕರೆಯ ಅಂಶ, ರಕ್ತದ ಕೊಬ್ಬಿನಾಂಶ, LFT ಪರೀಕ್ಷೆಯ ಮೇಲೆ ಶೇ. 50 ರಷ್ಟು ರಿಯಾಯಿತಿಯನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಆದರ್ಶ ಆಸ್ಪತ್ರೆ ಉಡುಪಿ : 0820-3702100-109| 9663330864 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

ಏನಿದು ಫ್ಯಾಟಿ ಲಿವರ್ (Fatty Liver Disease )?
ಯಕೃತ್ತು ದೇಹದ ಪ್ರಮುಖ ಅಂಗ. ದೇಹದಲ್ಲಿ ಆಹಾರದ ಜೀರ್ಣಕ್ರೀಯೆಯಲ್ಲಿ ಯಕೃತ್ತು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದರೆ ಯಕೃತ್ತಿನಲ್ಲಿ ಕೊಬ್ಬು ಅತಿಯಾಗಿ ಶೇಖರಣೆಗೊಳ್ಳುವ ಸ್ಥಿತಿಯೇ ಫ್ಯಾಟಿ ಲಿವರ್ ಕಾಯಿಲೆ. ಕೆಲವೊಮ್ಮೆ ಯಕೃತ್ತಿನಲ್ಲಿ ಉರಿಯೂತವನ್ನು ಉಂಟು ಮಾಡುತ್ತದೆ. ಯಕೃತ್ತಿನಲ್ಲಿ ಗಾಯಗಳು ಕಾಣಿಸಿಕೊಂಡು, ಹಾನಿ ಉಂಟಾಗುವ ಸಾಧ್ಯತೆಯಿದೆ.

ಇದನ್ನೂ ಓದಿ : Heart Health Tips: ಹೃದ್ರೋಗದಿಂದ ದೂರವಿರಲು ಈ 5 ಹಾಲಿನ ಉತ್ಪನ್ನಗಳಿಂದ ದೂರವಿರಿ
ಹೆಚ್ಚಾಗಿ ಮಧ್ಯಪಾನ ಮಾಡುವವರು, ಬೊಜ್ಜು ಹೊಂದಿರುವವರು, ಮಧುಮೇಹ, ಡಿಸ್‌ಲಿಪಿಡೇಮಿಯ, ಸ್ಟಿರಾಯ್ಡ್‌ಗಳಂತಹ ಔಷಧಗಳನ್ನು ತೆಗೆದುಕೊಳ್ಳುವವರಲ್ಲಿ ಈ ಫ್ಯಾಟಿ ಲಿವರ್ ಕಾಯಿಲೆ ಕಂಡು ಬರುವ ಸಾಧ್ಯತೆಯಿದೆ. ಆರೋಗ್ಯ ತಪಾಸಣೆಯನ್ನು ಮಾಡಿಸುವ ಮೂಲಕ ಈ ಫ್ಯಾಟಿ ಲಿವರ್ ಕಾಯಿಲೆಯನ್ನು ಪತ್ತೆ ಹಚ್ಚಬಹುದು.
Fatty Liver Day: Free health checkup camp on June 13 at Adarsh Hospital Udupi
ಇದನ್ನೂ ಓದಿ : ಸಕ್ಕರೆ ಖಾಯಿಲೆ ಹತೋಟಿಗೆ ತರುತ್ತೆ ಮೆಂತ್ಯ ಕಾಳು – ಎದೆ ಹಾಲು ಹೆಚ್ಚಿಸೋಕೆ ಇದು ಉತ್ತಮ ಔಷಧ