Gas Tanker leak : ಕಾಪು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್‌ನಿಂದ ಅನಿಲ ಸೋರಿಕೆ, ಆತಂಕದಲ್ಲಿ ಜನತೆ

ಕಾಪು : ಬುಲೆಟ್ ಟ್ಯಾಂಕರ್‌ನಿಂದ ಅನಿಲ ಸೋರಿಕೆಯಾಗಿರುವ (Gas Tanker leak) ಘಟನೆ ಕಾಪುವಿನ ಉಳಿಯಾರಗೋಳಿ ಬಿಕ್ಕೋ ಸಮೀಪದಲ್ಲಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಇದರಿಂದಾಗಿ ಸುತ್ತಮುತ್ತಿನ ಪ್ರದೇಶದಲ್ಲಿನ ಜನರಿಗೆ ಆತಂಕ ಉಂಟಾಗಿದೆ.

ಪಂಜಾಬ್ ಕಾರ್ಬೋನಿಕ್ ಸಂಸ್ಥೆಗೆ ಸೇರಿದ ಟ್ಯಾಂಕರ್ ಇದಾಗಿದೆ ಎಂದು ತಿಳಿದು ಬಂದಿದೆ. ಮಹಾರಾಷ್ಟ್ರದಿಂದ ಮಂಗಳೂರಿಗೆ ಕಾರ್ಬನ್ ಡೈಆಕ್ಸೈಡ್ ಅನಿಲವನ್ನು ಟ್ಯಾಂಕರ್‌ ಮೂಲಕ ಸಾಗಾಟ ಮಾಡಲಾಗುತ್ತಿತ್ತು. ಆದ್ರೆ ಕಾಪು ಬಳಿಗೆ ಬರುತ್ತಿದ್ದಂತೆಯೇ ಟ್ಯಾಂಕರ್‌ ನಿಂದ ಏಕಾಏಕಿಯಾಗಿ ಗ್ಯಾಸ್‌ ಸೋರಿಕೆಯಾಗಲು ಆರಂಭಿಸಿದೆ.

ಸ್ಥಳಕ್ಕೆ ಉಡುಪಿಯ ಅಗ್ನಿಶಾಮಕ ಸಿಬ್ಬಂದಿಗಳು ಭೇಟಿ ನೀಡಿ ಟ್ಯಾಂಕರ್‌ ತಪಾಸಣೆ ನಡೆಸಿದ್ದಾರೆ. ಅಲ್ಲದೇ ಟ್ಯಾಂಕರ್‌ ಮುಚ್ಚಳದಿಂದ ಸೋರಿಕೆಯಾಗುತ್ತಿರುವ ಗ್ಯಾಸ್‌ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಸ್ಥಳಕ್ಕೆ ಕಾಪು ಪೊಲೀಸ್‌ ಠಾಣಾಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ. ಸಂಚಾರವನ್ನು ನಿಯಂತ್ರಿಸುವ ಕಾರ್ಯವನ್ನು ಮಾಡಿದ್ದಾರೆ. ಸದ್ಯ ಅಗ್ನಿಶಾಮಕ ದಳದ ಸಿಬ್ಬಂದಿಯ ಯಶಸ್ವಿ ಕಾರ್ಯಾಚರಣೆಯನ್ನು ನಡೆಸಿ ಗ್ಯಾಸ್‌ ಸೋರಿಕೆಯನ್ನು ತಡೆಗಟ್ಟಿದ್ದಾರೆ. ಅಲ್ಲದೇ ಟ್ಯಾಂಕರ್‌ ಇದೀಗ ಮಂಗಳೂರಿನತ್ತ ಪ್ರಯಾಣ ಬೆಳೆಸಿದೆ.

ನಿರಂತರ ಅತ್ಯಾಚಾರವೆಸಗಿ ಬಾಲಕಿಯನ್ನು ಗರ್ಭಿಣಿಯನ್ನಾಗಿಸಿದ 50ರ ಕಾಮುಕ ಅರೆಸ್ಟ್​

ಮಹಾರಾಷ್ಟ್ರ : ಮಹಿಳೆಯರನ್ನು ರಕ್ಷಿಸಲು ದೇಶದಲ್ಲಿ ಎಷ್ಟೇ ಬಲವಾದ ಕಾನೂನುಗಳನ್ನು ಜಾರಿಗೆ ತಂದರೂ ಸಹ ದೇಶದಲ್ಲಿ ಮಹಿಳೆಯ ಮೇಲಿನ ಶೋಷಣೆಗಳು ನಡೆಯುತ್ತಲೇ ಇದೆ. ಕಠಿಣ ಕಾನೂನು ಕ್ರಮಗಳನ್ನು ಜಾರಿಗೆ ತಂದರೂ ಕಾಮುಕರಲ್ಲಿ ಭಯ ಹುಟ್ಟುವಂತೆ ಕಾಣುತ್ತಿಲ್ಲ. ಈ ಮಾತಿಗೆ ಸಾಕ್ಷಿ ಎಂಬಂತೆ ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ 50 ವರ್ಷದ ವ್ಯಕ್ತಿಯೊಬ್ಬ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಪಕ್ಕದ ಮನೆಯ ಬಾಲಕಿಯ ಮೇಲೆ ಈತ ನಿರಂತರ ಅತ್ಯಾಚಾರ ಎಸಗಿದ್ದು ಪರಿಣಾಮ ಬಾಲಕಿಯು ಗರ್ಭಿಣಿಯಾಗಿದ್ದು ಆ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ .

ಮೇ 24ರಂದು ಬಾಲಕಿಯ ನೆರೆ ಮನೆಗೆ ಶಿಫ್ಟ್​ ಆಗಿದ್ದ 50 ವರ್ಷದ ವ್ಯಕ್ತಿಯು ಮನೆಯ ಸರಂಜಾಮುಗಳನ್ನು ಶಿಫ್ಟ್​ ಮಾಡಲು ಈ ಬಾಲಕಿಯ ಬಳಿ ನೆರವು ಕೇಳಿದ್ದ ಎನ್ನಲಾಗಿದೆ. ಅದರಂತೆ ಬಾಲಕಿಯು ಆತನಿಗೆ ವಸ್ತುಗಳನ್ನು ಶಿಫ್ಟ್​ ಮಾಡಲು ಸಹಾಯ ಮಾಡಿದ್ದಳು. ಬಾಲಕಿಯಿಂದ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯು ಬಳಿಕ ಮನೆಯ ಕೆಲವು ವಸ್ತುಗಳನ್ನು ಬಾಲಕಿಯು ಕದ್ದಿದ್ದಾಳೆ ಎಂದು ಆರೋಪ ಹೊರಿಸಿದ್ದನು.

ಮೇ 24 ಹಾಗೂ ಮೇ 25ರ ಮಧ್ಯರಾತ್ರಿ ಆಕೆಯನ್ನು ಮನೆಯಿಂದ ಹೊರ ಹೋಗುವ ಮುನ್ನ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ ಈ ಘಟನೆಯ ಬಗ್ಗೆ ಬಾಲಕಿಯು ಯಾರಲ್ಲಿಯೂ ಹೇಳಿಕೊಂಡಿರಲಿಲ್ಲ. ಕಳೆದ ವಾರ ಆಕೆಯ ಆರೋಗ್ಯ ಹದಗೆಟ್ಟ ಸಂದರ್ಭದಲ್ಲಿ ವೈದ್ಯರು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಬಾಲಕಿ ಗರ್ಭಿಣಿಯಾಗಿದ್ದಾಳೆ ಎಂಬ ಮಾಹಿತಿ ಕುಟುಂಬಸ್ಥರಿಗೆ ತಿಳಿದಿದೆ. ಕುಟುಂಬದವರು ಬಾಲಕಿಯನ್ನು ಪ್ರಶ್ನಿಸಿದ ಸಂದರ್ಭದಲ್ಲಿ ಆಕೆ ತಾನು ನೆರೆ ಮನೆಯವನಿಂದ ಅತ್ಯಾಚಾರಕ್ಕೆ ಒಳಗಾಗಿದ್ದೇನೆ ಎಂದು ಬಾಯ್ಬಿಟ್ಟಿದ್ದಾಳೆ. ಕೂಡಲೇ ಬಾಲಕಿಯ ಪೋಷಕರು ಪೊಲೀಸ್​ ಠಾಣೆಗೆ ತೆರಳಿ ದೂರನ್ನು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ಈತ ವಿರುದ್ಧ ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ : Heavy Rain Red Alert : ಕರಾವಳಿಯಲ್ಲಿ ಮೇಘಸ್ಪೋಟ : ರೆಡ್‌ ಅಲರ್ಟ್‌ ಘೋಷಣೆ, ಶಾಲೆಗಳಿಗೆ ರಜೆ, 5 ದಿನ ಸುರಿಯಲಿದೆ ಭಾರಿ ಮಳೆ

ಇದನ್ನೂ ಓದಿ : siddaramaiah : ಅಹಿಂದ ಮತ ಸೆಳೆಯಲು ಕಾಂಗ್ರೆಸ್​ ಮಾಸ್ಟರ್​ಪ್ಲಾನ್​ : ಕೋಲಾರದಿಂದ ಸಿದ್ದರಾಮಯ್ಯ ಕಣಕ್ಕಿಳಿಯುವ ಸಾಧ್ಯತೆ

Gas Tanker leak from Tanker in National Highway Kaup Near udupi

Comments are closed.