Airtel New Recharge Plan : ಏರ್‌ಟೆಲ್‌ನ ರೇಟ್‌ ಕಟರ್‌ ಪ್ಲಾನ್‌ಗಳು! ಅಗ್ಗದ 4 ಹೊಸ ಪ್ಲಾನ್‌ಗಳು ಯಾವುದು ಗೊತ್ತಾ?

ಭಾರತದ ಮುಂಚೂಣಿಯ ಟೆಲಿಕಾಂ ಆಪರೇಟರ್‌ ಸಂಸ್ಥೆಯಾದ ಏರ್‌ಟೆಲ್‌(Airtel) 4 ಹೊಸ ಪ್ಲಾನ್‌ ಪರಿಚಯಿಸುತ್ತಿದೆ. ಇದರಲ್ಲಿ ಒಂದೆರಡು ಸ್ಮಾರ್ಟ್‌ ರಿಚಾರ್ಜ್‌ ಮತ್ತು ದರ ಕಡಿತ ಯೋಜನೆಗಳು (Airtel New Recharge Plan) ಸೇರಿವೆ. ಈ ಯೋಜನೆಗಳು 30 ದಿನಗಳ ಎರಡು ತಿಂಗಳ ಮಾನ್ಯತೆ ಹೊಂದಿದೆ. ಸ್ಮಾರ್ಟ್‌ ರಿಚಾರ್ಜ್‌ ಆಯ್ಕೆಗಳೂ ಸಹ ಇದರಲ್ಲಿ ಸೇರಿವೆ.

ಎಲ್ಲಾ ಏರ್‌ಟೆಲ್‌ ಪ್ಲಾನ್‌ಗಳು ಕೈಗೆಟುಕುವ ದರದಲ್ಲಿವೆ. ಅತಿ ಕಡಿಮೆ ಬೆಲೆ ಪ್ಲಾನ್‌ 109 ರೂಪಾಯಿಗಳಿಂದ ಆರಂಭವಾಗಿದೆ. ಏರ್‌ಟೆಲ್‌ ನ ಹೊಸ ಪ್ಲಾನ್‌ಗಳು ತಮ್ಮ ಮೊಬೈಲ್‌ ಸಂಖ್ಯೆಯನ್ನು ಸಕ್ರಿಯವಾಗಿ ಇಡಲು ಬಯಸುವವರಿಗೆ ಸೂಕ್ತವಾಗಿದೆ. ಏರ್‌ಟೆಲ್‌ ಈ ಪ್ಲಾನ್‌ಗಳನ್ನು ರೇಟ್‌ ಕಟ್ಟರ್‌ ಪ್ಲಾನ್‌ಗಳು ಎಂದು ಹೇಳಿದೆ.

ಅತಿ ಕೆಡಿಮೆ ಬೆಲೆಯ ಏರ್‌ಟೆಲ್‌ನ ನಾಲ್ಕು ಹೊಸ ಪ್ಲಾನ್‌ಗಳು(Airtel New Recharge Plan) :

  1. ಏರ್‌ಟೆಲ್‌ನ 109 ರೂ. ಗಳ ಪ್ಲಾನ್‌
    ಏರ್‌ಟೆಲ್‌ ಪರಿಚಯಿಸಿದ ಹೊಸ ಪ್ಲಾನ್‌ಗಳಲ್ಲಿ ಇದೇ ಅತಿ ಕಡಿಮೆ ಬೆಲೆಯ ಪ್ಲಾನ್‌ ಅಗಿದೆ. ಈಗಾಗಲೇ ಇರುವ 99 ರೂಪಾಯಿಗಳ ಪ್ಲಾನ್‌ಗಿಂತ 109 ರೂಪಾಯಿಗಳ ಪ್ಲಾನ್‌ ಉತ್ತಮವಾಗಿದೆ. ಈ ಪ್ಲಾನ್‌ 30 ದಿನಗಳ ವ್ಯಾಲಿಡಿಟಿ ಮತ್ತು 200 MB ಡಾಟಾ ಒಳಗೊಂಡಿದೆ. ಇದಲ್ಲದೆ ವೈಯ್ಸ್‌ ಕಾಲ್‌ಗಳಿಗೆ ಪ್ರತಿ ಸೆಕಂಡಿಗೆ 2.5 ಪೈಸೆ ಮತ್ತು ಲೋಕಲ್‌ SMS ಗೆ 1 ರೂ ಹಾಗೂ STD SMS ಗೆ 1.44 ರೂ ನಿಗದಿಪಡಿಸಿದೆ.
  2. ಏರ್‌ಟೆಲ್‌ನ 111 ರೂ. ಗಳ ಪ್ಲಾನ್‌
    ಏರ್‌ಟೆಲ್‌ ನ 111 ರೂ.ಗಳ ರಿಚಾರ್ಜ್‌ ಪ್ಲಾನ್‌ 99 ರೂ. ಗಳ ಟಾಕ್‌ಟೈಮ್‌, 200 MB ಡೇಟಾ, ಒಂದು ತಿಂಗಳ ವ್ಯಾಲಿಡಿಟಿ ಹೊಂದಿದೆ. ಉಳಿದ ಪ್ರಯೋಜನಗಳು 109 ರೂ. ಗಳ ಪ್ಲಾನ್‌ ನಂತೆಯೇ ಇರುತ್ತದೆ.
  3. ಏರ್‌ಟೆಲ್‌ನ 128 ರೂ. ಗಳ ಪ್ಲಾನ್‌
    ಏರ್‌ಟೆಲ್‌ ಮೊತ್ತೊಂದು ರೇಟ್‌ ಕಟರ್‌ ಯೋಜನೆ ಎಂದರೆ 128 ರೂ. ಗಳ ಪ್ಲಾನ್‌ ಆಗಿದೆ. ಇದು 30 ದಿನಗಳ ವ್ಯಾಲಿಡಿಟಿ ನೀಡುತ್ತಿದೆ. ಈ ಯೋಜನೆಯ ಬಳಕೆದಾರರಿಗೆ ಕರೆಗಳಿಗೆ ಪ್ರತಿ ಸೆಕೆಂಡಿಗೆ 2.5 ಪೈಸೆ, ವೀಡಿಯೊ ಕರೆಗಳಿಗೆ ಪ್ರತಿ ಸೆಕೆಂಡಿಗೆ 5 ರೂ ಮತ್ತು ಹೆಚ್ಚುವರಿ ಡಾಟಾ ಬಳಕೆಗೆ 50 ಪೈಸೆ ದರ ನಿಗಿದಿಸಿದೆ.
  4. ಏರ್‌ಟೆಲ್‌ನ 131 ರೂ. ಗಳ ಪ್ಲಾನ್‌
    ಈ ಯೊಜನೆಯು ಏರ್‌ಟೆಲ್‌ ಪರಿಚಯಿಸಿದೆ ಕೊನೆಯ ರಿಚಾರ್ಜ್‌ ಪ್ಲಾನ್‌ ಆಗಿದೆ. ಇದು 1 ತಿಂಗಳ ವ್ಯಾಲಿಡಿಟಿ ಯನ್ನು ಹೊಂದಿದೆ. ಈ ಯೋಜನೆಯು ಚಂದಾದಾರರಿಗೆ ಸ್ಥಳೀಯ ಮತ್ತು STD ಕರೆಗಳಿಗೆ ಪ್ರತಿ ಸೆಕೆಂಡಿಗೆ 2.5 ಪೈಸೆ, ರಾಷ್ಟ್ರೀಯ ವೀಡಿಯೊ ಕರೆಗಳಿಗೆ ಪ್ರತಿ ಸೆಕೆಂಡಿಗೆ 5 ಮತ್ತು ಹೆಚ್ಚವರಿ ಡಾಟಾ ಬಳಕೆಗೆ 50 ಪೈಸೆ ಆಗಿದೆ. ಈ ಪ್ಲಾನ್‌ನಲ್ಲಿ ಸ್ಥಳೀಯ SMS ಗೆ 1 ಮತ್ತು ರಾಷ್ಟ್ರೀಯ SMS ಗೆ 1.5 ರೂ ನಿಗದಿಪಡಿಸಿದೆ.

ಇದನ್ನೂ ಓದಿ : Tata Motors : ಟಾಟಾ ಕಾರುಗಳ ಮೇಲೆ ಭಾರಿ ಡಿಸ್ಕಾಂಟ್‌ ! ಯಾವ ಕಾರುಗಳಿಗೆ ಎಷ್ಟು ಡಿಸ್ಕೌಂಟ್‌ ಸಿಗುತ್ತಿವೆ ಗೊತ್ತಾ?

ಇದನ್ನೂ ಓದಿ : Post Office Schemes : ಪೋಸ್ಟ್‌ ಆಫೀಸ್‌ ನಲ್ಲಿ ಸಣ್ಣ ಉಳಿತಾಯ ಮಾಡಿ, ಹೆಚ್ಚಿನ ಲಾಭ ಪಡೆಯಿರಿ!!

(Airtel launched four new rate cutter plans)

Comments are closed.