cut down valuable trees : ಸರ್ಕಾರಿ ಅಧಿಕಾರಿಗಳಿಂದಲೇ ಬೆಲೆಬಾಳುವ ಮರಗಳಿಗೆ ಕೊಡಲಿಯೇಟು: ಪ್ರಕರಣ ಮುಚ್ಚಿಹಾಕಲು ಮಾಸ್ಟರ್​ಪ್ಲಾನ್​

ಮಂಗಳೂರು : cut down valuable trees : ಸರ್ಕಾರಿ ಸೊತ್ತುಗಳನ್ನು ಜವಬ್ದಾರಿಯುತವಾಗಿ ಕಾಪಡೋದು ಅಧಿಕಾರಿಗಳ ಕರ್ತವ್ಯ. ಆದ್ರೆ ಕಡಲ ನಗರಿ ಮಂಗಳೂರಿನಲ್ಲಿ ಸರ್ಕಾರಿ ಅಧಿಕಾರಿಗಳೆ ನಿಯಮ ಮೀರಿರೋದು ಗೊತ್ತಾಗಿದೆ. ನಗರ ಹೊರವಲಯದ ಕೋಣಾಜೆ ಅಸೈಗೋಳಿಯಲ್ಲಿರುವ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ 7ನೇ ಬೆಟಾಲಿಯನ್ ನಲ್ಲಿ ಲಕ್ಷಾಂತರ ರೂ ಬೆಲೆ ಬಾಳುವ ಮರಗಳಿಗೆ ಕೊಡಲಿಯೇಟು ನೀಡಿ ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಕೆ.ಎಸ್.ಆರ್.ಪಿ 7ನೇ ಬೆಟಾಲಿಯನ್ ನ ಪ್ರವೇಶ ದ್ವಾರದಿಂದ ಕ್ಯಾಂಟೀನ್ ಗೆ ತೆರಳುವ ಹಾದಿಯಲ್ಲಿನ ಮರಗಳನ್ನು ಕಡಿಯಲಾಗಿದೆ. ಹಲಸಿನ ಮರ, ಸಾಗುವಾನಿ, ಅಕೇಶಿಯಾ ಸೇರಿದಂತೆ ಒಟ್ಟು 10 ಕ್ಕೂ ಅಧಿಕ ಮರಗಳನ್ನು ಕಡಿದು ಮಾರಾಟ ಮಾಡಲಾಗಿದೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಬುದ್ದಿವಂತ ಅಧಿಕಾರಿಗಳು ಪ್ರಕರಣ ಮುಚ್ಚಿ ಹಾಕಲು ಮರದ ಬುಡವನ್ನೇ ಕಿತ್ತು ಹಾಕಿ ಮಣ್ಣು ಮುಚ್ಚಿದ್ದಾರೆ‌. ಯಾರಿಗೂ ಇದು ಗೊತ್ತಾಗಬಾರದು ಎಂದು ಕುರುಹು ಇದ್ದ ಜಾಗದಲ್ಲಿ ಕಲ್ಲು, ಮಣ್ಣು, ತ್ಯಾಜ್ಯ ರಾಶಿ ಹಾಕಿಸಿದ್ದಾರೆ.

ನಿಯಮಗಳ ಪ್ರಕಾರ ಮರಗಳನ್ನು ಕಡಿಯೋದಕ್ಕೆ ಅರಣ್ಯ ಇಲಾಖೆಯ ಅನುಮತಿಯನ್ನು ಪಡೆದುಕೊಳ್ಳಬೇಕು. ಆದ್ರೆ ಇಲ್ಲಿ ಆ ನಿಯಮಗಳು ಪಾಲನೆಯಾದಂತೆ ಕಂಡು ಬಂದಿಲ್ಲ. ಈ ವಿಚಾರ ಸುದ್ದಿಯಾಗುತ್ತಿದ್ದಂತೆ ಕೋಟೆಕಾರು ಉಪವಲಯ ಅರಣ್ಯಾಧಿಕಾರಿ ಮಹಾಬಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಗಳನ್ನು ಕಡಿದಿರುವ ಬಗ್ಗೆ ವರದಿಯನ್ನು ತಯಾರಿಸಿ ವಲಯ ಅರಣ್ಯಾಧಿಕಾರಿ ಪ್ರಶಾಂತ್ ಪೈ ಅವರ ಕೈಗೆ ನೀಡಿದ್ದಾರೆ. ಆದ್ರೆ ವರದಿ ನೀಡಿ ಮೂರು‌ ದಿನಗಳಾಗುತ್ತ ಬಂದರು ಪ್ರಶಾಂತ್ ಪೈ ಘಟನಾ ಸ್ಥಳಕ್ಕೆ ಭೇಟಿ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ.

ಇನ್ನು ಕೋಣಾಜೆ ಅಸೈಗೋಳಿಯ ಪ್ರಸ್ತುತ ಕಮಾಡೆಂಟ್ ಬಿ.ಎಂ ಪ್ರಸಾದ್ ಬೆಂಗಳೂರಿಗೆ ತೆರಳಿದ್ದಾರೆ. ಹೀಗಾಗಿ ಹಾಸನದ ಕಮಾಡೆಂಡ್ ಯುವ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಆದ್ರೆ ಅವರು ಯಾರು ಕೊಟ್ಟ ಸೂಚನೆ ಮೇರೆಗೆ ಬಂದಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ಒಟ್ಟಿನಲ್ಲಿ ಸರ್ಕಾರಿ ಅಧಿಕಾರಿಗಳೆ ಸರ್ಕಾರದ ನಿಯಮವನ್ನು ಗಾಳಿಗೆ ತೂರಿದ್ದರೆ ಅದು‌ ಖಂಡನಾರ್ಹ. ಹೀಗಾಗಿ‌ ಅರಣ್ಯ ಇಲಾಖೆ ಅಧಿಕಾರಿಗಳು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕಾಗಿದೆ.

ಇದನ್ನು ಓದಿ : Maruga Mutt : ಡಾ.ಶಿವಮೂರ್ತಿ ಮುರುಘಾ ಶರಣರಿಗೆ ಮತ್ತಷ್ಟು ಸಂಕಷ್ಟ : ಬಂಧನ ಭೀತಿಯಲ್ಲಿ ಸ್ವಾಮೀಜಿ

ಇದನ್ನೂ ಓದಿ : Miss Diva Universe 2022 : ಕರ್ನಾಟಕದ ದಿವಿತಾ ರೈ ಮುಡಿಗೇರಿದ ಮಿಸ್​ ದಿವಾ ಯೂನಿವರ್ಸ್​ 2022 ಕಿರೀಟ

Government officials cut down valuable trees

Comments are closed.