Shilpa Halli Mane Rooties : ಈ ಹೆಣ್ಣು ಅಬಲೆಯಲ್ಲ ಸಬಲೆ

“And, when you want something, all the universe conspires in helping you to achieve it.”ಎಂದು Paulo Coelho ಎಂಬ ಕಾದಂಬರಿಕಾರ The Alchemist ಎಂಬ ಕಾದಂಬರಿಯಲ್ಲಿ ಈ ಮಾತನ್ನು ಹೇಳುತ್ತಾನೆ. ನಾವು ಜೀವನದಲ್ಲಿ ಎನನ್ನಾದರೂ ಬಯಸಿದಾಗ ಇಡೀ ಪ್ರಪಂಚವು ಆ ಸಾಧನೆಗಾಗಿ ಒಳಸಂಚನ್ನು ಮಾಡುತ್ತದೆ ಎಂಬುದು ಇದರ ತಾತ್ಪರ್ಯ. ಮನುಷ್ಯನಿಗೆ ಕಷ್ಟಗಳು ಯಾವ ಯಾವ ರೂಪದಲ್ಲಿ ಬರುತ್ತವೂ ಅದು ಗೊತ್ತಾಗುವುದಿಲ್ಲ. ಕಷ್ಟಗಳು ಬಂದಾಗ ಕುಗ್ಗದೆ ಜೀವನ ಎದುರಿಸಬೇಕಾಗಿರುವುದು ಮನುಷ್ಯ ಸಹಜ ಗುಣ. ಆದರೆ ಇಂತಹ ಕಷ್ಟಗಳು ಎಲ್ಲರಿಗೂ ಸರ್ವೇಸಾಮಾನ್ಯ. ಕೆಲವರು ಕಷ್ಟಗಳಿಗೆ ಹೆದರಿ ಜೀವನ ಅಂತ್ಯಗೊಳಿಸಿ ಕೊಂಡರೆ ಇನ್ನು ಕೆಲವರು ಅದನ್ನೆ ಛಲವಾಗಿ ತೆಗೆದುಕೊಂಡು ಸಾಧನೆಯ ಹಾದಿ ಹಿಡಿಯುತ್ತಾರೆ. ಇಂತಹ ಸಾಧನೆಯ ವಿಷಯದಲ್ಲಿ ಲಿಂಗತಾರತಮ್ಯ ಸಾಧ್ಯವಿಲ್ಲ. ಅದು ಗಂಡಾಗಿರಲಿ ಅಥವಾ ಹೆಣ್ಣಾಗಿರಲಿ. ಮನುಷ್ಯ ಸಾಧಿಸುವುದಕ್ಕೆ ಓದಗುವ ಸಂದರ್ಭ ಎಂದುಕೊಂಡರೆ ಒಳ್ಳೆಯದು. ಜೀವನದಲ್ಲಿ ಅನಿರೀಕ್ಷಿತವಾಗಿ ಬಂದು ಒದಗಿದ ಕಷ್ಟವನ್ನು ಮೆಟ್ಟಿ ನಿಂತು ಸಾಧಿಸಿ ನಾನು ಅಬಲೆಯಲ್ಲ ಸಬಲೆ ಎಂದು ತೋರಿಸಿ ಕೊಟ್ಟವಳು ಈ ಹೆಣ್ಣು. ಯಾರು ಈ ಹೆಣ್ಣು ಎಂದರೆ ಅವರ ಹೆಸರು ಶಿಲ್ಪ. ಮಂಗಳೂರಿನ ‘ಹಳ್ಳಿಮನೆ ರೊಟ್ಟಿಸ್’ ( Shilpa Halli Mane Rooties ) ಎಂಬ ಮೊಬೈಲ್ ಕ್ಯಾಂಟೀನ್‌ನ ಒಡತಿ. ಇದು ಇರುವುದು ನಗರದ ಮಣ್ಣುಗುಡ್ಡೆ ಬೀದಿ ಬದಿಯಲ್ಲಿ. ಇಲ್ಲಿ ಸಂಜೆಯಾಗುತಿದ್ದ ಹಾಗೆ ಬೈಕು ಕಾರುಗಳಲ್ಲಿ ಬರುವ ಗ್ರಾಹಕರು ಬಿಸಿ-ಬಿಸಿ ರೊಟ್ಟಿಗಾಗಿ ಗಂಟೆ ಗಟ್ಟಲೆ ಕಾಯುತ್ತಾರೆ.

ಯಾರು ಈ ಶಿಲ್ಪ?
ಶಿಲ್ಪ ಮೂಲತಃ ಹಾಸನ ಜಿಲ್ಲೆಯವರು. ೨೦೦೫ರಲ್ಲಿ ರಾಜಶೇಖರ್ ಎಂಬುವವರನ್ನು ವಿವಾಹವಾದ ನಂತರ ಮಂಗಳೂರಿನಲ್ಲಿ ಬಂದು ನೆಲೆಸಿದರು. ಬಳ್ಳಾರಿ ಮೂಲದ ಗಣಿಗಾರಿಕೆ ಕಂಪನಿಯೊಂದಕ್ಕೆ ರಾಜಶೇಕರ್ ಟ್ರಾನ್ಸ್ಪೋರ್ಟ್ ವ್ಯವಹಾರ ನಡೆಸುತ್ತಿದ್ದರು. ಸುಖ ಸಂಸಾರಕ್ಕೆ ನೂರೆಂಟು ತಾಪತ್ರಯ ಎನ್ನುವಂತೆ ಸಂತೋಷದಿಂದ ಇದ್ದ ಸಂಸಾರಕ್ಕೆ 2008ರಲ್ಲಿ ಸಿಡಿಲು ಬಡಿಯುವಂತಹ ಸುದ್ದಿಯೊಂದು ಬಂದಿತು. ಶಿಲ್ಪ ಅವರ ಪತಿ ಬೆಂಗಳೂರಿನಿಂದ ತನಗೆ ಯಾವುದೋ ದುಡ್ಡು ಬರುವುದಿದೆ ಅದನ್ನು ತರಲು ಬೆಂಗಳೂರಿಗೆ ಹೋಗಿಬರುವೆ ಎಂದು ಹೋದವರು ಈ ಕ್ಷಣದ ವರೆವಿಗೂ ಅವರ ಸುಳಿವಿಲ್ಲ. ಬದುಕಿರುವರೊ ಸತ್ತಿರುವರೊ ನಿಗೂಡವಾದ ವಿಷಯವಾಗಿ ಇಂದಿಗೂ ಉಳಿದಿದೆ. ಆರಂಭದಲ್ಲಿ ಇಂದು ಅಥವಾ ನಾಳೆ ಬರುವರು ಎಂದು ಕಾದು ಕುಳಿತಿದ್ದ ಶಿಲ್ಪಾರವರಿಗೆ ಯಾವ ಸುದ್ದಿಯೂ ಬರಲಿಲ್ಲ. ಕೈಯಲ್ಲಿದ್ದ ಹಣವೂ ಖರ್ಚಾಯಿತು. ಬೆರೆಡೆ ಕೆಲಸಕ್ಕೆ ಸೇರಿದರೂ ಮನೆ ನಿರ್ವಹಣೆ ತುಂಬಾ ಕಷ್ಟವಾಯಿತು. ಹೀಗೆ ಕುಳಿತರೆ ಸಾಧ್ಯವಿಲ್ಲವೆಂದು ನಿರ್ಧರಿಸಿ ಸ್ವಂತ ಉದ್ಯೋಗ ಪ್ರಾರಂಭಿಸುವ ಆಲೋಚನೆ ಹೊಳೆಯಿತು. ನಂತರ ಸ್ವ-ಉದ್ಯೋಗಕ್ಕಾಗಿ ಬ್ಯಾಂಕುಗಳಿಗೆ ಅಲೆದರೂ ಸಾಲ ಸಿಗಲಿಲ್ಲ. ನಂತರ ಮಗನ ವಿದ್ಯಾಬ್ಯಾಸಕ್ಕೆ ಇಟ್ಟಿದ್ದ ಒಂದು ಲಕ್ಷ ರೂಪಾಯಿಯಲ್ಲಿ ಮೊಬೈಲ್ ಕ್ಯಾಂಟೀನ್ ಪ್ರಾರಂಭಿಸಿದರು. ಇವರ ಶ್ರಮವನ್ನು ಕಂಡು ಆನಂದ್ ಮಹಿಂದ್ರ ಅವರು ಒಂದು ಟ್ವೀಟ್ ಮಾಡಿದ್ದರು. ಅದರಂತೆ ಅವರಿಗೆ ಮಹಿಂದ್ರ ಪಿಕ್ ಅಪ್ ಅನ್ನು ಕೂಡ ಕೊಟ್ಟಿದ್ದಾರೆ.

ಸಿಗುವ ಆಹಾರ ಎಂಥದ್ದು?
ಶಿಲ್ಪಾರವರು ತುಂಬಾ ರುಚಿಕಟ್ಟಾಗಿ ಅಡುಗೆ ಮಾಡುತ್ತಿದ್ದವರು. ಅದೆ ಅವರಿಗೆ ವರದಾನವಾಯಿತು. ಮೊಬೈಲ್ ಕ್ಯಾಂಟೀನ್ ಪ್ರಾರಂಭಿಸಲು ಅದೇ ಪ್ರೇರಣೆಯಾಯಿತು. ಈ ಕ್ಯಾಂಟೀನ್‌ನಲ್ಲಿ ಜೋಳ, ಅಕ್ಕಿ ರೊಟ್ಟಿ, ರಾಗಿ ರೊಟ್ಟಿ, ತಟ್ಟೆ ಇಡ್ಲಿ, ಬಿಸಿಬೇಳೆ ಬಾತ್ ಮತ್ತು ವಾರಕ್ಕೆರೆಡು ಬಾರಿ ರಾಗಿ ಮುದ್ದೆ ಊಟ ಸಿಗುತ್ತದೆ. ರೊಟ್ಟಿ ಜೊತೆಗೆ ಖಡಕ್ ಚಟ್ನಿ, ಹುರಿಗಡಲೆ ಚಟ್ನಿ, ಸೊಪ್ಪಿನ ಸಾರು ಜೊತೆಗೆ ಚಿಕನ್ ಗ್ರೀನ್ ಮಸಾಲ ಸಹ ದೊರೆಯುತ್ತದೆ. ಈ ಮೊಬೈಲ್ ಕ್ಯಾಂಟೀನ್ ಸಂಜೆ ೪ರಿಂದ ರಾತ್ರಿ ೧೦ರವರೆಗೆ ತೆರೆದಿರುತ್ತದೆ. ಡಾಕ್ಟರ್‌ಗಳು, ವಿದ್ಯಾರ್ಥಿಗಳು ಮತ್ತು ಐಟಿ ವೃತ್ತಿಪರರು ಅತೀ ಹೆಚ್ಚಿನ ಗ್ರಾಹಕರುಗಳು ಇಲ್ಲಿ ಭೋಜನ ಸವೀಯುತ್ತಾರೆ.

“ಆರೋಗ್ಯಕರ ರಸ್ತೆ ಆಹಾರ ಪರಿಕಲ್ಪನೆಯನ್ನ ಜನ ಹೊಂದಿರುತ್ತಾರೆ. ಹಾಗಾಗಿ ನಾವು ಜನರ ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ಆಹಾರದಲ್ಲಿ ಯಾವುದೇ ರುಚಿಕರ ಪದಾರ್ಥಗಳನ್ನು ಸೇರಿಸದೆ ಮನೆಯಲ್ಲೆ ಎಲ್ಲಾ ಪದಾರ್ಥಗಳನ್ನು ತಯಾರಿಸುತ್ತೇವೆ. ಹಾಗಾಗಿ ಇಲ್ಲಿಗೆ ಬರುವ ಗ್ರಾಹಕರು ಮನೆ ಊಟ ಸವಿದಂತಹ ಅನುಭವವಾಗುತ್ತದೆ” ಎನ್ನುತ್ತಾರೆ ಶಿಲ್ಪ. ಈಗ ಅವರ ಆರ್ಥಿಕ ಪರಿಸ್ಥಿತಿ ಸುದ್ದಾರಿಸಿದ್ದು. ತಮ್ಮ ಜೀವನವನ್ನು ಸ್ವಾವಲಂಬನೆಗೊಳಿಸಿಕೊAಡಿದ್ದಾರೆ. ಇವರ ಜೊತೆ ತಮ್ಮನಾದ ಚಿರಂಜೀವಿ ಸಹ ಕೈ ಜೊಡಿಸಿದ್ದು ಆತನಿಗೊಂದು ಕ್ಯಾಂಟೀನ್ ಮಾಡಿಕೊಡುವ ಯೋಜನೆಯಲ್ಲಿದ್ದಾರೆ. ಇವರ ಈ ಸಾಧನೆಗೆ ಹಲವಾರು ಸಂಘ ಸಂಸ್ಥೆಗಳು ಗೌರವಿಸಿವೆ. ಅಷ್ಟೇ ಅಲ್ಲದೆ ಆಹಾರ ಪ್ರೀಯರು ಇವರ ಕ್ಯಾಂಟೀನ್‌ಗೆ ಭೇಟಿ ಕೊಟ್ಟು ಅಲ್ಲಿಯ ಊಟದ ರುಚಿಯನ್ನು ಸವಿದು ಜೊತೆಗೆ ಅದರ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಊಟ್ಟದ ರುಚಿಯನ್ನು ಕೊಂಡಾಡಿದ್ದಾರೆ. ಬದುಕಿನಲ್ಲಿ ಬರವಸೆ ಇದ್ದರೆ ಭವ್ಯ ಭವಿಷ್ಯವನ್ನು ರೂಪಿಸುವ ದಾರಿ ಅದಾಗೆ ಕಾಣಿಸುತ್ತದೆ. ಜೀವನದಲ್ಲಿ ಉತ್ಸಾಹವಿದ್ದರೆ ಕನಸನ್ನು ನನಸಾಗಿಸುವ ಬಾಗಿಲು ತಾನಾಗೆ ತೆರೆದುಕೊಳ್ಳುತ್ತದೆ ಎಂಬುದು ಶಿಲ್ಪ ರವರ ಜೀವನದಿಂದ ಕಂಡುಕೊAಡ ಸತ್ಯ.


ಇದನ್ನೂ ಓದಿ: Beetroot Juice Benefits: ಬಿಟ್ರುಟ್ ಜ್ಯೂಸ್ ಕುಡಿಯಿರಿ; ಯಕೃತ್ತಿನ ಕಾಯಿಲೆಗಳಿಗೆ ಗುಡ್ ಬೈ ಹೇಳಿ


ಇದನ್ನೂ ಓದಿ: Vastu Tips: ಮನಿ ಪ್ಲಾಂಟ್​ಗಳನ್ನು ನೆಡುವ ಸಂದರ್ಭದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ


Halli Mane Rooties: Mangalur’s Popular Food Truck

Comments are closed.