Kollur Bus Accident : ಕೊಲ್ಲೂರಿನಲ್ಲಿ ಬಸ್‌ ಪಲ್ಟಿ : 20 ಕ್ಕೂ ಅಧಿಕ ಮಂದಿಗೆ ಗಾಯ

ಕುಂದಾಪುರ : ಪ್ರಸಿದ್ದ ಪುಣ್ಯಕ್ಷೇತ್ರ ಕೊಲ್ಲೂರಿಗೆ ಪ್ರಯಾಣಿಸುತ್ತಿದ್ದ ಯಾತ್ರಾರ್ಥಿಗಳ ಬಸ್‌ ಪಲ್ಟಿಯಾಗಿ ಬಸ್ಸಿನಲ್ಲಿದ್ದ (Kollur Bus Accident) ಸುಮಾರು 20 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಬಳಿಯ ಓಣ್ಕಣ್‌ ಮೋರಿ ತಿರುವಿನಲ್ಲಿ ನಡೆದಿದೆ.

ಕೋಲಾರದಿಂದ ಭಕ್ತರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸುತ್ತಿದ್ದ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ವೇಗವಾಗಿ ಚಲಿಸುತ್ತಿದ್ದ ಬಸ್‌ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 20 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಿ.ವಿ.ಶಂಕರ ರೆಡ್ಡಿ, ಪತ್ನಿ ರೆಡ್ಡಿಯಮ್ಮ, ಪಾರ್ವತಮ್ಮ, ಭಾಗ್ಯಮ್ಮ, ಶೀನಪ್ಪ, ಮಂಜುಳಮ್ಮ, ಬಿಎಸ್.ರಾಮಕೃಷ್ಣ, ಸರಸ್ವತಮ್ಮ, ವೆಂಕಟರಮಣಪ್ಪ, ಬಿ.ಕೆ.ಶ್ರೀನಿವಾಸ್‌, ಪಾರ್ವತಮ್ಮ, ತ್ರಿವೇಣಿ, ವೆಂಕಟಲಕ್ಷ್ಮೀ, ವೆಂಕಟರಾಮ, ಅರುಣ, ರಾಮಕ್ಕ, ಶ್ರೀನಿವಾಸ್‌ ಸೇರಿದಂತೆ ಒಟ್ಟು 20 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಚಾಲಕನ ನಿರ್ಲಕ್ಷ್ಯದಿಂದಲೇ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಭೇಟಿ ನೀಡಿರುವ ಕೊಲ್ಲೂರು ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

ಮೊಬೈಲ್​ ಬಳಕೆ ಮಾಡಿದ್ದಕ್ಕೆ ಪುತ್ರನನ್ನೇ ಕೊಂದ ತಂದೆ

ಮಕ್ಕಳು ಸರಿಯಾಗಿ ಓದಿಲ್ಲ ಅಂದರೆ ಪೋಷಕರಿಗೆ ಕೋಪ ಬರುವುದು ಸಾಮಾನ್ಯ. ಈಗಂತೂ ಆನ್​ಲೈನ್​ ತರಗತಿಗಳ ಹೆಸರಿನಲ್ಲಿ ಮಕ್ಕಳ ಮೊಬೈಲ್​ ಬಳಕೆ ಕೂಡ ಹೆಚ್ಚಾಗಿದೆ.ಹೀಗಾಗಿ ಕೆಲ ಮಕ್ಕಳು ಓದಿಗಿಂತ ಹೆಚ್ಚು ಮೊಬೈಲ್​ ಬಳಕೆಯನ್ನೇ ಹೆಚ್ಚಾಗಿ ಮಾಡುತ್ತಿದ್ದಾರೆ. ಇದರಿಂದ ಕೋಪಗೊಂಡ ಪೋಷಕರು ಮಕ್ಕಳಿಗೆ ಪೆಟ್ಟು ನೀಡುವುದುಂಟು. ಆದರೆ ಇಲ್ಲೊಬ್ಬ ತಂದೆ ಪುತ್ರ ಮೊಬೈಲ್​ ಬಳಕೆ ಮಾಡಿದ್ದಕ್ಕೆ ಆಕ್ರೋಶಗೊಂಡು ಆತನನ್ನು ಕೊಂದೇ ಹಾಕಿದ್ದಾನೆ.

ದೆಹಲಿಯ ಖಾನ್​ಪುರ ಪ್ರದೇಶದಲ್ಲಿ ಇಂತಹದ್ದೊಂದು ಬೆಚ್ಚಿಬೀಳಿಸುವ ಘಟನೆಯೊಂದು ವರದಿಯಾಗಿದೆ. 27 ವರ್ಷದ ವ್ಯಕ್ತಿಯೊಬ್ಬ ತನ್ನ ಐದು ವರ್ಷದ ಮಗನಿಗೆ ಕೋಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ಆದಿತ್ಯ ಪಾಂಡೆ ಎಂಬ ಹೆಸರಿನ ಆರೋಪಿಯು ತನ್ನ ಪುತ್ರ ಜ್ಞಾನ್​ ಪಾಂಡೆ ಅಲಿಯಾಸ್​ ಉತ್ಕರ್ಷ್​ ಎಂಬಾತ ಮೊಬೈಲ್​ ಬಳಕೆ ಮಾಡುತ್ತಿದ್ದಾನೆ ಎಂದು ಕೋಪಗೊಂಡಿದ್ದ. ಪುತ್ರ ಅಧ್ಯಯನದ ಕಡೆಗೆ ಗಮನ ನೀಡುತ್ತಿಲ್ಲವೆಂದು ಆತನನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ಪುತ್ರನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅಲ್ಲಿ ಬಾಲಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ. ಕೂಡಲೇ ಆಸ್ಪತ್ರೆಯ ಸಿಬ್ಬಂದಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾಲಕನ ಮೆಡಿಕಲ್​ ರಿಪೋರ್ಟ್​ನಲ್ಲಿ ಆತನ ತಾಯಿ ರಾತ್ರಿ 10 ಗಂಟೆ ಸುಮಾರಿಗೆ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದಾಗಿ ತಿಳಿದುಬಂದಿದೆ. ಆಸ್ಪತ್ರೆಗೆ ಬರುವ ವೇಳೆಯಲ್ಲಿ ಬಾಲಕ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದನು. ಹಾಗೂ ಆತನ ಕುತ್ತಿಗೆಯ ಮೇಲೆ ಗಾಯದ ಕಲೆಗಳು ಇದ್ದವು ಎನ್ನಲಾಗಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಡಿಸಿಪಿ ಬೆನಿತಾ ಮೇರಿ, ವೈದ್ಯರು ನೀಡಿರುವ ಮಾಹಿತಿಯ ಪ್ರಕಾರ ಪೋಷಕರು ಬಾಲಕನಿಗೆ ಹೇಗೆ ಗಾಯವಾಗಿದೆ ಎಂಬುದರ ಬಗ್ಗೆ ಆಸ್ಪತ್ರೆಗೆ ದಾಖಲಾಗುವ ವೇಳೆಯಲ್ಲಿ ಯಾವುದೇ ಮಾಹಿತಿ ನೀಡಿರಲಿಲ್ಲ. ಪೋಷಕರನ್ನು ಪ್ರಶ್ನೆ ಮಾಡಿದ ವೇಳೆಯಲ್ಲಿಯೂ ಅವರಿಂದ ಸ್ಪಷ್ಟ ಉತ್ತರ ನಮಗೆ ದೊರಕಿರಲಿಲ್ಲ. ಆದರೆ ಬಾಲಕನ ದೇಹವನ್ನು ಪರೀಕ್ಷೆ ಮಾಡಿದಾಗ ಆತನ ಕೈ, ಕಾಲು ಹಾಗೂ ಕುತ್ತಿಗೆಯ ಬಲವಾದ ಏಟು ಬಿದ್ದಿದೆ ಎಂದು ತಿಳಿದುಬಂದಿದೆ ಎಂದು ಹೇಳಿದರು.

ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಚೌಬೇಯಪುರ ಎಂಬಲ್ಲಿ ತಾಯಿಯೊಬ್ಬಳು ತನ್ನ ಅಪ್ರಾಪ್ತ ಬಾಲಕಿಯನ್ನು ಕೊಲೆ ಮಾಡಿದ್ದಾಳೆ. ಆಕೆಗೆ ಬೇರೆ ಜಾತಿಗೆ ಸೇರಿದ ಸ್ಥಳೀಯನೊಂದಿಗೆ ಸಂಬಂಧವಿದ್ದು ಆಕೆ ಗರ್ಭಿಣಿಯಾಗಿದ್ದಳು. ಇದರಿಂದ ಕೋಪಗೊಂಡಿದ್ದ ಸಹೋದರ ಈ ಅಪರಾಧ ಎಸಗುವಂತೆ ತಾಯಿಗೆ ಕುಮ್ಮಕ್ಕು ನೀಡಿದ್ದ ಎನ್ನಲಾಗಿದೆ. ಪ್ರಕರಣ ಸಂಬಂಧ ಬಾಲಕಿಯ ಪ್ರಿಯತಮ ಹಾಗೂ ತಾಯಿ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ : ಕೊರೊನಾರ್ಭಟಕ್ಕೆ 3 ಜಿಲ್ಲೆಗಳಲ್ಲಿ ಶಾಲೆ ಬಂದ್‌ : ಉಡುಪಿ, ದ.ಕ., ಮಂಡ್ಯದಲ್ಲೂ ಶಾಲೆ ಮುಚ್ಚುವ ಸಾಧ್ಯತೆ

ಇದನ್ನೂ ಓದಿ : ಮೇಕೆದಾಟು ಪಾದಯಾತ್ರೆ ವಿರುದ್ದ ಸರಕಾರಕ್ಕೆ ಹೈಕೋರ್ಟ್‌ ಚಾಟಿ : ಕೆಪಿಸಿಸಿಗೆ ಶೋಕಾಸ್‌ ನೋಟಿಸ್‌ ಜಾರಿ

(Kollur Bus Accident 20 devotees injured)

Comments are closed.