Punjab Police : ಭದ್ರತಾ ಲೋಪದ ಕುರಿತಂತೆ ರಹಸ್ಯ ಕಾರ್ಯಾಚರಣೆಯಲ್ಲಿ ಸ್ಫೋಟಕ ಮಾಹಿತಿ ಬಯಲು

Punjab Police :ಜನವರಿ ಐದರಂದು ಪ್ರಧಾನಿ ನರೇಂದ್ರ ಮೋದಿ ಹುಸೇನಿವಾಲಾದಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಲು ಹಾಗೂ ಪಂಜಾಬ್​ನ ಫಿರೋಜ್​ಪುರದಲ್ಲಿರುವ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಪ್ರಧಾನಿ ನರೇಂದ್ರ ಮೋದಿ ತೆರಳುತ್ತಿದ್ದ ವೇಳೆಯಲ್ಲಿ ಅವರ ಬೆಂಗಾವಲು ಪಡೆ ವಾಹನವನ್ನು ಸುಮಾರು 20 ನಿಮಿಷಗಳ ಕಾಲ ಫ್ಲೈಓವರ್​ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು ತಡೆ ಹಿಡಿದಿದ್ದರು.

ಪಂಜಾಬ್​ನಲ್ಲಿ ನಡೆದ ಈ ಭದ್ರತಾ ಉಲ್ಲಂಘನೆಯು ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕಾಂಗ್ರೆಸ್​ ನೇತೃತ್ವದ ಪಂಜಾಬ್​ ಸರ್ಕಾರವು ಪ್ರಧಾನಿ ಮೋದಿಯನ್ನು ಅಪಾಯಕ್ಕೆ ಸಿಲುಕಿಸಿದೆ ಎಂದು ಬಿಜೆಪಿಯು ದೂಷಿಸಿದೆ. ಆದರೆ ಕಾಂಗ್ರೆಸ್​ ಸರ್ಕಾರವು ಪ್ರಧಾನಿ ಭೇಟಿ ವೇಳೆಯಲ್ಲಿ ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ಸಮರ್ಥನೆ ನೀಡುತ್ತಲೇ ಬಂದಿದೆ.

ಈ ಘಟನೆಯು ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ನಿವೃತ್ತ ನ್ಯಾಯಮೂರ್ತಿ ಮಲ್ಹೋತ್ರಾ ನೇತೃತ್ವದಲ್ಲಿ ಪ್ರಕರಣದ ತನಿಖೆ ಕೂಡ ಆರಂಭವಾಗಿದೆ.
ಈ ಎಲ್ಲದರ ನಡುವೆ ಪಂಜಾಬ್​ನಲ್ಲಿ ಅಂದು ನಿಜವಾಗಿಯೂ ಏನಾಗಿತ್ತು ಎಂಬ ಪ್ರಶ್ನೆ ದೇಶದ ನಾಗರಿಕರಲ್ಲಿ ಮನೆ ಮಾಡಿದೆ. ರಾಷ್ಟ್ರೀಯ ಮಾಧ್ಯಮವೊಂದು ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಪಂಜಾಬ್​ನಲ್ಲಿ ನಡೆದ ಭದ್ರತಾ ಲೋಪದ ಬಗ್ಗೆ ಕೆಲ ಸ್ಫೋಟಕ ಮಾಹಿತಿಗಳು ಲಭ್ಯವಾಗಿದೆ. ಪ್ರಧಾನಿ ಮೋದಿಯ ರ್ಯಾಲಿಗೆ ಬಿಜೆಪಿ ಕಾರ್ಯಕರ್ತರು ಬರುವುದನ್ನು ತಪ್ಪಿಸಲು ಜನದಟ್ಟಣೆ ಇರುವ ಸ್ಥಳಗಳಲ್ಲಿ ಪ್ರತಿಭಟನಾಕಾರರು ರಸ್ತೆ ನಡೆಸಲು ಪ್ಲಾನ್​ ಮಾಡಿದ್ದರು. ಈ ಸಂಬಂಧ ಜನವರಿ 2ರಂದು ಹೆಚ್ಚುವರಿ ಡೈರೆಕ್ಟರ್​ ಜನರಲ್​ಗೆ ವರದಿಯನ್ನು ಸಲ್ಲಿಸಲಾಗಿದೆ ಎಂದು ಪೊಲೀಸರೊಬ್ಬರು ಮಾಹಿತಿ ನೀಡಿದ್ದಾರೆ.


ಜನವರಿ 2ನೇ ತಾರೀಖಿನ ವರದಿಯ ಬಳಿಕವು ಹಿರಿಯ ಪೊಲೀಸ್​ ಅಧಿಕಾರಿಗಳಿಗೆ ಪ್ರತಿಭಟನಾಕಾರರ ಪ್ಲಾನ್​ ಏನೆಲ್ಲ ಇತ್ತು ಎಂಬುದರ ಬಗ್ಗೆ ಕ್ಷಣ ಕ್ಷಣದ ಮಾಹಿತಿ ಲಭ್ಯವಾಗುತ್ತಲೇ ಇತ್ತು. ಪ್ರತಿಭಟನಾಕಾರರು ಧರಣಿಗೆ ಮುಂದಾಗಿದ್ದರು ಇದನ್ನು ಪೊಲೀಸರು ತಡೆಯಲು ಹೋದರೆ ಅವರು ರಸ್ತೆ ತಡೆ ಮಾಡುತ್ತಿದ್ದರು ಎಂದು ಹಿರಿಯ ಪೊಲೀಸ್​ ಅಧಿಕಾರಿಗಳಿಗೆ ನಾವು ಮೊದಲೆ ಮಾಹಿತಿ ನೀಡಿದ್ದೆವು ಎಂದು ಹೇಳಿದ್ದಾರೆ.

Ahead of PM Modi’s visit, Punjab Police knew about protesting farmers but didn’t act | India Today investigation

ಇದನ್ನು ಓದಿ : Bangalore Lockdown : ಬೆಂಗಳೂರಿನಲ್ಲಿ ಕರೋನಾ ರೌದ್ರ ನರ್ತನ : ಸೋಂಕಿನ ಪ್ರಮಾಣ ನಿಯಂತ್ರಿಸಲು ಅನಿವಾರ್ಯವಾಗುತ್ತಾ ಲಾಕ್ ಡೌನ್ ?

ಇದನ್ನೂ ಓದಿ : Bombay High Court : ಕೊರೊನಾ ಲಸಿಕೆ ಪಡೆಯದವರಿಗೆ ತಾರತಮ್ಯ ಮಾಡುವಂತಿಲ್ಲ : ಬಾಂಬೆ ಹೈಕೋರ್ಟ್

Comments are closed.