Kota Amrutheshwari Temple : ಸಂತಾನ ಭಾಗ್ಯ ಕರುಣಿಸುವ ಅಮೃತೇಶ್ವರಿ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ

(Kota Amrutheshwari Temple)ಉಡುಪಿ :ಅಮೃತೇಶ್ವರೀ ದೇವಾಲಯದಲ್ಲಿ ನಡೆಯುವ ಜಾತ್ರೋತ್ಸವಕ್ಕೆ ದಿನ ನಿಗದಿಪಡಿಸಲಾಗಿದೆ. ಜಾತ್ರೋತ್ಸವ ದಿನದಂದು ದ್ವಾರದಿಂದ ಹಿಡಿದು ದೇವಾಲಯದವರೆಗೂ ಜಗಮಗಿಸುವ ಬೆಳಕಿನಿಂದ ಕಂಗೊಳಿಸಲು ಅಮೃತೇಶ್ವರೀ ದೇವಾಲಯ ಸಜ್ಜಾಗಿದೆ. ಅಮೃತೇಶ್ವರೀ ದೇವಿಯ ಜಾತ್ರಾ ಮಹೋತ್ಸವವು ಸತತ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನೆರವೇರಲಿದ್ದು, ದಿನಾಂಕ 9-1-2023 ರಿಂದ 11-1-2023 ವರೆಗೆ ಅದ್ಧೂರಿಯಾಗಿ ಜಾತ್ರಾ ಮಹೋತ್ಸವ ನೆರವೇರುತ್ತದೆ.

(Kota Amrutheshwari Temple)ಮೂರು ದಿನಗಳ ಕಾಲ ನಡೆಯಲಿರುವ ಜಾತ್ರಾ ಮಹೋತ್ಸವದ ಪೂಜಾ ಕೈಂಕರ್ಯಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ:

ದಿನಾಂಕ 9-1-2023 ಸೋಮವಾರದಂದು ಬೆಳಗ್ಗೆಯಿಂದಲೇ ಪ್ರಾರ್ಥನಾ ಫಲನ್ಯಾಸ ಪೂರ್ವಕ ಸಾಮೂಹಿಕ ಪ್ರಾರ್ಥನೆ, ಪಂಚ ವಿಂಶತಿ ದ್ರವ್ಯಕಲಶ ಪೂರ್ವಕ ಕಲಾತತ್ವ ಹೋಮ ಹಾಗೂ ನವಕ ಪ್ರಧಾನ ಕಲಾಧಿವಾಸ ಹೋಮ ನೇರವೆರಲಿದೆ.

ದಿನಾಂಕ 10-1-2023 ರ ಮಂಗಳವಾರದಂದು ಮಧ್ಯಾಹ್ನ 12:30 ಕ್ಕೆ ಅಮೃತೇಶ್ವರೀ ಗಣವಾದ ಬೊಬ್ಬರ್ಯ ದೇವರಿಗೆ ಹಾಲಿಟ್ಟು ಸೇವೆ ನಡೆಯಲಿದ್ದು, ರಾತ್ರಿ 7 ಗಂಟೆಯಿಂದ ಪಂಚಗವ್ಯ ಪೂಜೆ , ನಾಗದೇವರ ಹಾಲಿಟ್ಟು ಸೇವೆ, ರಾತ್ರಿ ಗೆಂಡಸೇವೆ ಹಾಗೂ ದೇವರ ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಸೇವೆ ವಿಜೃಂಭಣೆಯಿಂದ ನಡೆಯಲಿದೆ.

ದಿನಾಂಕ 11-1-2023 ಬುಧವಾರದಂದು ಬೆಳಿಗ್ಗೆಯಿಂದಲೆ ಬಲಿಸೇವೆ , ಅದ್ದೂರಿಯಾಗಿ ಸಿಂಗಾರಗೊಂಡಿರುವ ಹಲವು ಮಕ್ಕಳ ತಾಯಿ ಅಮೃತೇಶ್ವರಿ ದೇವಿಯ ದರ್ಶನ ಸೇವೆ, ಹಾಗೂ ತುಲಭಾರ ಸೇವೆ ನಡೆಯಲಿದ್ದು, ಮಧ್ಯಾಹ್ನ ಅನ್ನಸಂತರ್ಪಣೆ ಸೇವೆ ನಡೆಯುತ್ತದೆ. ಇನ್ನು ಇದೇ ದಿನದ ರಾತ್ರಿ ಕರಾವಳಿಯ ಪ್ರಸಿದ್ದ ಕಲೆಯಾದ ಯಕ್ಷಗಾನ ಸೇವೆ ಅಮೃತೇಶ್ವರೀ ಕೃಪಾಪೋಷಿತ ಯಕ್ಷಗಾನ ಮಂಡಳಿ ಕೋಟ ಮೇಳದವರಿಂದ ನೆರವೆರುತ್ತದೆ.

ಈ ದೇವಾಲಯದ ವಿಶೇಷವೆಂದರೆ ಲಿಂಗಾಕೃತಿ ಕಪ್ಪು ಕಲ್ಲುಗಳು. ಈ ಕಲ್ಲುಗಳನ್ನು ಸ್ಪರ್ಶ ಮಾಡಿದರೆ ಮಕ್ಕಳಿಲ್ಲದವರಿಗೆ ಮಕ್ಕಳಾಗುತ್ತದೆ ಎಂಬುದು ಜನರ ನಂಬಿಕೆ. ಇತ್ತೀಚೆಗೆ ಮತ್ತೆ ಕರೋನಾ ಹರಡುತ್ತಿರುವ ಕಾರಣ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ನೀವೂ ಕೂಡ ನಿಮ್ಮ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಮಾಸ್ಕ್ ಧರಿಸಿ ಜಾತ್ರೆಯಲ್ಲಿ ಪಾಲ್ಗೊಳ್ಳಿ.

ಇದನ್ನೂ ಓದಿ:Mudugallu keshavanatheshvara: ಕುಗ್ರಾಮದ ನಡುವೆ ವಿರಾಜಮಾನನಾಗಿರುವ ಲಯಕರ್ತ ಕೇಶವನಾಥೇಶ್ವರ

ಇದನ್ನೂ ಓದಿ:BenneKudru Sri Kulamahastri: ಮೊಗವೀರ ಸಮಾಜದ ಆರಾಧ್ಯ ದೇವಿ ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮ

ಸೂಚನೆ :
1-1-2023 ರಿಂದ ಗೆಂಡಸೇವೆ ಹಾಗೂ ತುಲಾಭಾರ ಸೇವೆಯ ಚೀಟಿಯನ್ನು ದೇವಸ್ಥಾನದ ಕಛೇರಿಯಲ್ಲಿ ನೀಡಲಾಗುತ್ತದೆ. ಗೆಂಡಸೇವೆ ಹಾಗೂ ತುಲಭಾರ ಸೇವೆಗೆ ಬೇಕಾಗುವ ಸ್ವತ್ತುಗಳನ್ನು ದೇವಸ್ಥಾನದಲ್ಲೇ ನೀಡಲಾಗುತ್ತದೆ.

Kota Amrutheshwari Temple Jatra Mahotsav at Amriteshwari Temple, which bestows the fortune of children

Comments are closed.