Mysuru accident: ಪ್ರಧಾನಿ ಮೋದಿ ಸೋದರನ ಕಾರು ಅಪಘಾತ: ಮೂವರಿಗೆ ಗಾಯ

ಮೈಸೂರು: (Mysuru accident) ಪ್ರಧಾನಿ ಮೋದಿ ಸೋದರ ಪ್ರಹ್ಲಾದ್‌ ಮೋದಿ ಅವರ ಕಾರು ಡಿವೈಡರ್‌ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೋದಿ ಸಹೋದರ, ಮಗ ಹಾಗೂ ಸೊಸೆಗೆ ಗಾಯಗಳಾಗಿರುವ ಘಟನೆ ಮೈಸೂರು ಹೊರವಲಯದ ಕಡೆಕೋಳಿ ಬಳಿಯಲ್ಲಿ ನಡೆದಿದೆ.

ತನ್ನ ಮಗ ಹಾಗೂ ಸೊಸೆಯೊಂದಿಗೆ ಬೆಂಗಳೂರಿನಿಂದ ಬಂಡೀಪುರಕ್ಕೆ ತೆರಳುವ ಮಾರ್ಗಮಧ್ಯೆ ಅಪಘಾತ (Mysuru accident) ಸಂಭವಿಸಿದ್ದು, ಪ್ರಹ್ಲಾದ್‌ ಮೋದಿ ಅವರಿಗೆ ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಪ್ರಾಣಾಪಯದಿಂದ ಮೋದಿ ಅವರ ಸಹೋದರ ಪಾರಾಗಿದ್ದಾರೆ. ಮಗ ಹಾಗೂ ಸೊಸೆಗೆ ಕೂಡ ಘಟನೆಯಲ್ಲಿ ಗಾಯಗಳಾಗಿದ್ದು, ಕಾರಿನ ಮುಂಬಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಅಪಘಾತ ಸಂಭವಿಸಿದ ಸಂದರ್ಭ ಕಾರಿನಲ್ಲಿದ್ದ ಏರ್‌ ಬ್ಯಾಗ್‌ ಓಪನ್‌ ಆದ ಕಾರಣ ಯಾವುದೇ ಪ್ರಾಣಹಾನಿಯಾಗಿಲ್ಲ.

ಗಾಯಗೊಂಡ ಮೂವರನ್ನು ಸದ್ಯ ಮೈಸೂರಿನ ಜೇಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆ ಮೈಸೂರು ಎಸ್‌ ಪಿ ಮತ್ತು ಡಿವೈಎಸ್‌ ಪಿ ಕೂಡ ಸ್ಥಳಕ್ಕೆ ಬೇಟಿ ನೀಡಿದ್ದು, ಘಟನೆಗೆ ನಿಖರ ಕಾರಣಗಳೇನು ಎಂಬುದನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : Puri Jagannath Temple : ಪುರಿ ಜಗನ್ನಾಥ ದೇವಸ್ಥಾನದಲ್ಲಿ ಕಾಲ್ತುಳಿತ : 6 ವಿದ್ಯಾರ್ಥಿನಿಯರಿಗೆ ಗಾಯ

ಇದನ್ನೂ ಓದಿ : Korba crime news: ರಾತ್ರಿ ಊಟ ಕೊಡಲಿಲ್ಲವೆಂದು ಪತ್ನಿಯನ್ನೇ ಕೊಂದ ಪತಿ

ಇದನ್ನೂ ಓದಿ : ಫಾರ್ಮಾ ಲ್ಯಾಬ್‌ ಕಂಪನಿಯಲ್ಲಿ ಬೆಂಕಿ ಅವಘಡ: ನಾಲ್ವರು ಸಾವು

ಇದನ್ನೂ ಓದಿ : Sushant Singh death case: ಸುಶಾಂತ್ ಸಿಂಗ್ ರದ್ದು ಆತ್ಮಹತ್ಯೆಯಲ್ಲ, ಕೊಲೆ ಎಂದ ಆಸ್ಪತ್ರೆ ಸಿಬ್ಬಂದಿ; ಅಂದು ಅಲ್ಲಿ ನಡೆದಿದ್ದೇ ಬೇರೆ ಹೊರಬಿದ್ದ ಸುದ್ದಿಯೇ ಬೇರೆ ಅಂತೆ..!

ಇದನ್ನೂ ಓದಿ : Dehli Fire incident: ಬಹುಮಹಡಿ ಪಾರ್ಕಿಂಗ್ ನಲ್ಲಿ ಅಗ್ನಿ ಅವಘಡ: 21 ಕಾರುಗಳು ಬೆಂಕಿಗೆ ಆಹುತಿ

ಇದನ್ನೂ ಓದಿ : Tunisha suicide case: ತುನಿಶಾ ಶರ್ಮಾರನ್ನು ಅತಿಯಾಗಿ ಕಾಡುತ್ತಿತ್ತು ‘ಆ’ ಒಂದು ನೋವು; ಆತ್ಮಹತ್ಯೆಗೆ ಅದೇ ಕಾರಣ ಎಂದ ಪೊಲೀಸರು..!

(Mysuru accident) Prime Minister Modi’s brother Prahlad Modi’s car collided with a divider and injured his brother, son and daughter-in-law.

Comments are closed.