Brown Sugar Health Tips:ಕಂದು ಸಕ್ಕರೆಯ ಟೀ ಎಂದಾದ್ರು ಕುಡಿದಿದ್ರಾ ?

(Brown Sugar Health Tips)ಕೆಲವರು ಚಹಾದಲ್ಲಿ ಅತಿ ಹೆಚ್ಚು ಸಕ್ಕರೆ ಹಾಕಿ ಕುಡಿಯಲು ಬಯಸುತ್ತಾರೆ . ಬಿಳಿ ಸಕ್ಕರೆಯನ್ನು ಸೇವಿಸುವುದು ಆರೋಗ್ಯಕ್ಕೆ ಅಷ್ಟು ಉತ್ತಮವಲ್ಲ. ದೇಹದಲ್ಲಿ ಸಕ್ಕರೆ ಅಂಶ ಹೆಚ್ಚು ಮಾಡುವುದರ ಜೊತೆಗೆ ಬೊಜ್ಜು ಕೂಡ ಹೆಚ್ಚಾಗುತ್ತದೆ. ಕೆಲವು ಮಕ್ಕಳು ಮನೆಯಲ್ಲಿದ್ದರೆ ಪದೇ ಪದೇ ಸಕ್ಕರೆಯನ್ನು ತಿನ್ನುತ್ತಾರೆ. ಬಿಳಿ ಸಕ್ಕರೆ ಆರೋಗ್ಯಕ್ಕೆ ಹಾನಿ ಮಾಡುವುದರಿಂದ ಮಕ್ಕಳು ಇದನ್ನು ತಿಂದರೆ ಆರೋಗ್ಯ ಕೆಡಬಹುದು ಹಾಗಾಗಿ ಬಿಳಿ ಸಕ್ಕರೆ ಬದಲು ಕಂದು ಸಕ್ಕರೆ ಬಳಕೆ ಮಾಡಿ ಇದರಿಂದ ಹಲವು ಆರೋಗ್ಯದ ಪ್ರಯೋಜನವನ್ನು ಪಡೆಯಬಹುದು. ಇದರ ಮಾಹಿತಿಯ ಕುರಿತು ತಿಳಿದುಕೊಳ್ಳಿ.

(Brown Sugar Health Tips)ಜೀರ್ಣಾಂಗ ವ್ಯವಸ್ಥೆ ಬಲವಾಗುತ್ತದೆ
ಚಹಾ,ಕಾಫಿ ಮತ್ತು ಸಿಹಿತಿಂಡಿಗಳನ್ನು ಮಾಡುವ ಸಂದರ್ಭದಲ್ಲಿ ಕಂದು ಸಕ್ಕರೆ ಬಳಕೆ ಮಾಡಿದರೆ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಬಲವಾಗುವಂತೆ ಮಾಡುತ್ತದೆ. ಪ್ರತಿದಿನ ಹಾಲಿನಲ್ಲಿ ಕಂದು ಸಕ್ಕರೆ ಬಳಸುವುದರಿಂದ ಆರೋಗ್ಯವನ್ನು ಉತ್ತಮವಾಗಿಡಲು ಸಹಾಯ ಮಾಡುತ್ತದೆ.

ಹಲ್ಲು ಮತ್ತು ಮೂಳೆಯ ಆರೋಗ್ಯ ಕಾಪಾಡುತ್ತದೆ
ಕಂದು ಸಕ್ಕರೆಯಲ್ಲಿ ಪೊಟ್ಯಾಸಿಯಮ್ ಅಂಶ ಹೇರಳವಾಗಿ ಹೊಂದಿರುವುದರಿಂದ ಹಲ್ಲು ಮತ್ತು ಮೂಳೆಯ ಆರೋಗ್ಯವನ್ನು ಕಾಪಾಡುತ್ತದೆ. ಬಿಳಿ ಸಕ್ಕರೆ ತಿನ್ನುವುದರಿಂದ ಹಲ್ಲು ಬೇಗ ಕೆಡುತ್ತದೆ. ಹಾಗಾಗಿ ಕಂದು ಸಕ್ಕರೆ ಬಳಕೆ ಮಾಡಿದರೆ ಹಲ್ಲು ಹಾಳಾಗದಂತೆ ನೋಡಿಕೊಳ್ಳುತ್ತದೆ. ಬಿಳಿ ಸಕ್ಕರೆ ತಿನ್ನುವುದರಿಂದ ನಿಮ್ಮ ಮೂಳೆ ದುರ್ಭಲವಾಗಿ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಕಂದು ಸಕ್ಕರೆ ತಿನ್ನುವುದರಿಂದ ಮೂಳೆಯ ಆರೋಗ್ಯ ಕಾಪಾಡುತ್ತದೆ.

ಕೊಲೆಸ್ಟ್ರಾಲ್‌ ಅಂಶ ಕಡಿಮೆ ಆಗುತ್ತದೆ
ಕಂದು ಸಕ್ಕರೆ ಬಳಕೆ ಮಾಡುವುದರಿಂದ ಇದರಲ್ಲಿರುವ ಕ್ಯಾಲೋರಿ ಅಂಶವು ಕಡಿಮೆಯಿರುವುದರಿಂದ ನಿಮ್ಮ ಬೊಜ್ಜು ಹೆಚ್ಚಾಗಲು ಬಿಡುವುದಿಲ್ಲ. ಆದ್ದರಿಂದ ನೀವು ಮನೆಯಲ್ಲಿ ಸಿಹಿ ತಿಂಡಿ ಮಾಡಲು ಈ ಕಂದು ಸಕ್ಕರೆ ಬಳಕೆ ಮಾಡಬಹುದು. ಚಹಾ ಮತ್ತು ಕಾಫಿ ಗೂ ಕೂಡ ಕಂದು ಸಕ್ಕರೆ ಬಳಕೆ ಮಾಡಿ. ಬಿಳಿ ಸಕ್ಕರೆ ತಿಂದರೆ ನಿಮ್ಮ ತೂಕ ಹೆಚ್ಚಾಗಬಹುದು ಎಂಬ ಬಯ ಎಲ್ಲರಲ್ಲೂ ಇರುತ್ತದೆ ಹಾಗಾಗಿ ಕಂದು ಸಕ್ಕರೆ ಬಳಕೆ ಮಾಡಿ . ಕಂದು ಸಕ್ಕರೆ ನಿಮ್ಮ ಆರೋಗ್ಯವನ್ನು ಹೆಚ್ಚಿಸುವುದಲ್ಲದೆ , ದೇಹದ ಕೊಲೆಸ್ಟಾಲ್‌ ಅಂಶ ಹೆಚ್ಚಾಗದಂತೆ ಕಾರ್ಯ ನಿರ್ವಹಿಸುತ್ತದೆ.

ಇದನ್ನೂ ಓದಿ:Hot or Cold Water Bath In Winter:ಚಳಗಾಲದಲ್ಲಿ ಬಿಸಿ ನೀರಿನಿಂದ ಸ್ನಾನ ಮಾಡುವುದು ಒಳಿತೋ, ಕೆಡಕೋ?

ಇದನ್ನೂ ಓದಿ:Beware Pizza Buyers:ಪಿಜ್ಝಾ ತಿನ್ನುವವರೇ ಹುಷಾರ್ ! ನಿಮ್ಮನ್ನು ಕಾಡಬಹುದು ಈ ಗಂಭೀರ ಸಮಸ್ಯೆ

ಮಧುಮೇಹ ನಿಯಂತ್ರಣದಲ್ಲಿರುತ್ತದೆ
ಮಧುಮೇಹ ಇರುವವರು ಸಕ್ಕರೆ ಅಂಶ ಇರುವ ಪದಾರ್ಥವನ್ನು ಹೆಚ್ಚು ಸೇವನೆ ಮಾಡುವಂತಿಲ್ಲ ಹಾಗಾಗಿ ಚಹಾ , ಸಿಹಿ ತಿಂಡಿಯನ್ನು ಮಾಡುವಾಗ ಕಂದು ಸಕ್ಕರೆ ಬಳಕೆ ಮಾಡಿದರೆ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬಹುದು. ಬಿಳಿ ಸಕ್ಕರೆಗಿಂತ ಕಂದು ಸಕ್ಕರೆ ಹೆಚ್ಚು ಆರೋಗ್ಯಕರ ಮತ್ತು ರುಚಿಕರ. ಇದರಲ್ಲಿ ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಕಬ್ಬಿಣದಲ್ಲಿ ಹೇರಳವಾಗಿರುವುದರಿಂದ ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ.

Brown Sugar Health Tips brown sugar tea drunk?

Comments are closed.