PUB ATTACK : ಮಂಗಳೂರಲ್ಲಿ ಪಬ್‌ ಮೇಲೆ ಪೊಲೀಸರ ದಾಳಿ

ಮಂಗಳೂರು : ತಡರಾತ್ರಿಯ ವರೆಗೂ ಧ್ವನಿವರ್ಧಕ ಬಳಸಿ ಕಿರಿಕಿರಿಯನ್ನುಂಟು ಮಾಡುವುದರ ಜೊತೆಗೆ ಕುಡಿದ ಮತ್ತಲ್ಲಿ ಪಬ್‌ನಿಂದ ಹೊರ ಬಂದು ಗ್ರಾಹಕರು ಕಿರಿಕಿರಿಯನ್ನುಂಟು ಮಾಡುತ್ತಿದ್ದಾರೆ ಅನ್ನೋ ದೂರಿನ ಮೇರೆಗೆ ಮಂಗಳೂರು ನಗರದ ಎಂಜಿ ರಸ್ತೆಯಲ್ಲಿರುವ ಪಬ್‌ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

Car toppled into canal: four killed on the spot

ಸಿಸಿಬಿ ಇನ್ಸ್ಪೆಕ್ಟರ್‌ ಮಹೇಶ್‌ ಪ್ರಸಾದ್‌ ಹಾಗೂ ಬರ್ಕೆ ಠಾಣೆಯ ಇನ್ಸ್ಪೆಕ್ಟರ್‌ ಜ್ಯೋತಿರ್ಲಿಂಗ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ. ನಿಗದಿತ ಅವಧಿಯ ವರೆಗೆ ಮಾತ್ರವೇ ಪಬ್‌ ತೆರೆಯಲು ರಾಜ್ಯ ಸರಕಾರ ಅವಕಾಶವನ್ನು ನೀಡಿತ್ತು. ಆದರೆ ಎಮ್‌ಜಿ ರಸ್ತೆಯಲ್ಲಿರುವ ಪಬ್‌ನಲ್ಲಿ ಅವಧಿಗೆ ಮೀರಿ ಪಬ್‌ ಕಾರ್ಯನಿರ್ವಹಿಸುತ್ತಿತ್ತು.

ಇನ್ನು ಪಬ್‌ನಿಂದ ಹೊರಗೆ ಬರುವವರು ಅಶ್ಲೀಲವಾಗಿ ವರ್ತಿಸುತ್ತಿದ್ದರು ಎಂದು ಸಾರ್ವಜನಿಕರಿಂದ ದೂರ ಬಂದ ಹಿನ್ನೆಲೆಯಲ್ಲಿ ದಾಳಿಯನ್ನು ನಡೆಸಲಾಗಿದೆ. ನಗರದ ಬಹುತೇಕ ಪಬ್‌ ಹಾಗೂ ಬಾರ್‌ ಆಂಡ್‌ ರೆಸ್ಟೋರೆಂಟ್‌ಗಳ ವಿರುದ್ದ ದೂರುಗಳು ಕೇಳಿಬಂದಿದ್ದು, ಈ ಕುರಿತು ಕ್ರಮಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ್‌ ತಿಳಿಸಿದ್ದಾರೆ.

ಇದನ್ನೂ ಓದಿ : ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಪ್ರಕರಣ : ವಕೀಲ ರಾಜೇಶ್‌ ಭಟ್‌ ಅಮಾನತ್ತು, ಮೂವರು ಅರೆಸ್ಟ್‌

ಇದನ್ನೂ ಓದಿ : ಪತ್ನಿಯನ್ನೇ ಮಾರಾಟ ಮಾಡಿ ಮೊಬೈಲ್ ಖರೀದಿಸಿದ ಪತಿ !

Police attack Mangalore MG Road pub

Comments are closed.