Devaramane Hills : ಇದು ಪ್ರವಾಸಿಗರ ಸ್ವರ್ಗ; ಬ್ಯೂಟಿ ಆಫ್ ದೇವರಮನೆ

Devaramane Hills : ಕಾಫಿನಾಡು ಚಿಕ್ಕಮಗಳೂರು ಪ್ರವಾಸಿಗರ ನೆಚ್ಚಿನ ತಾಣ. ಸಾಹಸಿಗಳ ಹಾಟ್ ಸ್ಪಾಟ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ವರ್ಷಪೂರ್ತಿ ಒಂದಿಲ್ಲೊಂದು ಕಾರಣದಿಂದ ಪ್ರವಾಸಿಗರನ್ನ ಕೈಬೀಸಿ ಕರೆಯೋ ಮಲೆನಾಡಿನ ಸೊಬಗನ್ನ ಸವಿಯೋದೇ ಒಂದು ಅದ್ಭುತ ಘಳಿಗೆ. ಅದ್ರಲ್ಲೂ ಸದಾ ಹಚ್ಚಹಸಿರಿನಿಂದ ಕಂಗೊಳಿಸೋ ಬೆಟ್ಟಗುಡ್ಡಗಳಲ್ಲಿ ಟ್ರಕ್ಕಿಂಗ್ ಹೋಗೋದಂದ್ರೆನೇ ಮತ್ತಷ್ಟು ರೋಮಾಂಚನ.

ಇಲ್ಲಿ ಮೋಡಗಳು ಕಣ್ಣಾಮುಚ್ಚಾಲೆ ಆಡ್ತಾವೆ. ಚುಮು ಚುಮು ಬೀಸೋ ತಂಗಾಳಿ ಮನಸಿಗೆ ಹಿತವನ್ನ ನೀಡುತ್ತೆ. ದೂರದಲ್ಲಿ ಕಾಣೋ ಝರಿಗಳು ಕಣ್ಣಿಗೆ ಹಬ್ಬದೂಟವನ್ನ ಉಣ ಬಡಿಸುತ್ತದೆ. ದೇವರೇ ಸೃಷ್ಟಿ ಮಾಡಿದಂತಿರೋ ಈ ಸುಂದರ ಲೋಕದ ಹೆಸರೇ ದೇವರಮನೆ. ಭೂ ಲೋಕದ ಸ್ವರ್ಗದಂತಿರೋ ಈ ಅದ್ಬುತ ತಾಣವೇ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ದೇವರ ಮನೆ.

ಸಮುದ್ರಮಟ್ಟದಿಂದ 2000 ಅಡಿ ಎತ್ತರದಲ್ಲಿರುವ ದೇವರಮನೆ ಗುಡ್ಡ ಪ್ರಕೃತಿಯ ಸೌಂದರ್ಯವನ್ನೆಲ್ಲಾ ತಾನೇ ಹಿಡಿದುಕೊಂಡಂತೆ ಭಾಸವಾಗುತ್ತೆ. ಗುಡ್ಡದ ತುದಿಯಲ್ಲಿ ನಿಂತು ಸುತ್ತಲೂ ಕಣ್ಣು ಹಾಯಿಸಿದ್ರೆ ವಾಹ್. ಅದ್ಭುತ.. ಅನ್ನೋ ಉದ್ಗಾರ.. ಯೆಸ್.. ದೇವರಮನೆಯ ಅಂದ ಚೆಂದಕ್ಕೆ ಮನಸೋಲದವರೇ ಇಲ್ಲ. ಟ್ರಕ್ಕಿಂಗ್ ಪ್ರಿಯರಿಗಂತೂ ಹೇಳಿ ಮಾಡಿಸಿದ ತಾಣ. ಪ್ರವಾಸಿಗರು, ಚಾರಣ ಪ್ರಿಯರು ಆಗ್ಗಿಂದಾಗ್ಗೆ ಬಂದು ಇಲ್ಲಿನ ಪ್ರಕೃತಿ ಸೌಂದರ್ಯದಲ್ಲಿ ರಮಿಸಿ ಹೋಗ್ತಾರೆ. ದೇವರಮನೆ ಗ್ರಾಮದ ಐತಿಹಾಸಿಕ ಕಾಲಭೈರೇಶ್ವರ ದೇವಾಲಯದ ದರ್ಶನ ಪಡೆದ ಪ್ರವಾಸಿಗರು ಇಪ್ಪತ್ತರಿಂದ ಇಪ್ಪತೈದು ಕಿ.ಮೀ. ದೂರ ಟ್ರಕ್ಕಿಂಗ್ ಮಾಡಿ ಗುಡ್ಡವನ್ನೇರುತ್ತಾರೆ. ಮೈ ಕೊರೈಸುವ ಚಳಿಯಲಿ, ಮಂಜಿನ ಮಧ್ಯೆದಲ್ಲಿ ಸಾಗೋ ಪಯಣ ನಿಜಕ್ಕೂ ರೋಮಾಂಚನ.

ಇನ್ನೂ ಕರಾವಳಿ, ಸಕಲೇಶಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶವನ್ನ ದೇವರಮನೆ ಗುಡ್ಡದಲ್ಲೇ ನಿಂತು ವೀಕ್ಷಿಸಬಹುದು. ಇಲ್ಲಿ ವಾರದ ಎಲ್ಲ ದಿನವೂ ಚಾರಣ ಪ್ರಿಯರು ಬರ್ತಾರೆ. ಬೆಟ್ಟ- ಗುಡ್ಡಗಳನ್ನ ಹತ್ತಿ, ಕಾಡು-ಮೇಡು ಅಲೆದು ಟ್ರಕ್ಕಿಂಗ್ ನಡೆಸುತ್ತಾ ಸಖತ್ ಎಂಜಾಯ್ ಮಾಡ್ತಾರೆ. ಇನ್ನು ಇಲ್ಲಿಗೆ ಟ್ರಕಿಂಗ್ ಬರೋರು ಮಲೆನಾಡಿನ ಸೌಂದರ್ಯವನ್ನ ಹಾಡಿ, ಹೊಗಳಿ, ಕಣ್ತುಂಬಿಕೊಂಡು ಹೋಗ್ತಾರೆ. ದಾರಿಮಧ್ಯದ ಸುತ್ತಮುತ್ತಲಿರೋ ಹಚ್ಚಹಸಿರಿನ ಬೆಟ್ಟ- ಗುಡ್ಡದ ಸೌಂದರ್ಯವನ್ನ ಸವಿಯುತ್ತಾ ಕಾಂಕ್ರೀಟ್ ಕಾಡಿನಿಂದ ಬರೋ ಸಾವಿರಾರು ಪ್ರವಾಸಿಗರು ಈ ಹಸಿರು ಕಾನನದಿಂದ ಒಂದಿಷ್ಟು ರಿಲ್ಯಾಕ್ಸ್ ಆಗ್ತಿದ್ದಾರೆ. ಗುಡ್ಡದ ಮೇಲೇರಿ ಸೆಲ್ಫಿಗೆ ಫೋಸ್ ನೀಡುತ್ತಾ, ಕುಣಿದು ಕುಪ್ಪಳಿಸೋ ಪ್ರವಾಸಿಗರ ಸಂತಸಕ್ಕೆ ಪಾರವೇ ಇರಲ್ಲ.

ವರ್ಷದ ಮೂನ್ನೂರೈವತ್ತು ದಿನವೂ ಇಲ್ಲಿಗೆ ಪ್ರವಾಸಿಗರು ಆಗಮಿಸಿ ರಮಣೀಯ ದೃಶ್ಯವನ್ನ ಕಣ್ತುಂಬಿಕೊಳ್ಳುತ್ತಾರೆ. ಸದ್ಯ ಮುಂಗಾರು ಮಳೆಯ ಸಿಂಚನದಿಂದ ದೇವರಮನೆಯ ಗಿರಿ ಶಿಖರಗಳು ಮತ್ತಷ್ಟು ರಂಗು ಪಡೆದಿದ್ದು, ಇಲ್ಲಿ ಮಂಜಿನಾಟವನ್ನ ನೋಡಲು ಎರಡು ಕಣ್ಣು ಸಾಲದು. ಒಟ್ಟಿನಲ್ಲಿ ಸೌಂದರ್ಯವನ್ನೇ ಹೊದ್ದು ಮಲಗಿರೋ ದೇವರಮನೆ ಗುಡ್ಡವನ್ನ ವೀಕ್ಷಿಸಲು ದಿನಂಪ್ರತಿ ಸಾವಿರಾರು ಮಂದಿ ಪ್ರವಾಸಿಗರು ಇತ್ತ ಹೆಜ್ಜೆ ಹಾಕುತ್ತಲೇ ಇದ್ದಾರೆ. ಈ ಮನಮೋಹಕ ದೃಶ್ಯವನ್ನ ನೀವು ಎಂಜಾಯ್ ಮಾಡ್ಬೇಕಾ. ಹಾಗಿದ್ರೆ ಮತ್ಯಾಕ್ ತಡ. ಹೋಗಿ ಎಂಜಾಯ್ ಮಾಡಿ.

ಇದನ್ನೂ ಓದಿ : Tourist Spots in Mysore : ಮೈಸೂರು ದಸರಾ ನೋಡ್ಲಿಕ್ಕೆ ಹೋಗ್ತಾ ಇದ್ರೆ ಈ ಸ್ಥಳಗಳನ್ನು ನೋಡ್ಕೊಂಡು ಬನ್ನಿ

ಇದನ್ನೂ ಓದಿ : Beautiful Train Journeys : ಜೀವನದಲ್ಲಿ ಒಮ್ಮೆಯಾದರೂ ಈ 5 ಸುಂದರ ರೈಲು ಪ್ರಯಾಣಗಳನ್ನು ಮಾಡಿ

https://youtu.be/5LkV2xW11NA

Karnataka Best tourist Place Devaramane Hills in Mudigere Near Chikkamgalur

Comments are closed.