Mangaluru Auto Blast: ಚಲಿಸುತ್ತಿದ್ದ ಆಟೋ ಸ್ಫೋಟ ಅನಿರೀಕ್ಷಿತವಲ್ಲ,ಇದೋಂದು ಭಯೋತ್ಪಾದಕ ಕೃತ್ಯ: ಡಿಜಿಪಿ ಪ್ರವೀಣ್‌ ಸೂದ್‌

ಮಂಗಳೂರು: (Mangaluru Auto Blast) ಚಲಿಸುತ್ತಿದ್ದ ಆಟೋದಲ್ಲಿ ಸಂಭವಿಸಿದ ನಿಗೂಢ ಸ್ಫೋಟ ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿದೆ. ಇದರ ಬೆನ್ನಲ್ಲೇ ಡಿಜಿಪಿ ಪ್ರವೀಣ್‌ ಸೂದ್‌ ಅವರು ಹೇಳಿಕೆಯೊಂದನ್ನು ನೀಡಿದ್ದಾರೆ. ಮಂಗಳೂರಿನಲ್ಲಿ ಚಲಿಸುತ್ತಿದ್ದ ಆಟೋ ಸ್ಫೋಟ ಅನಿರೀಕ್ಷಿತವಲ್ಲ, ಇದೊಂದು ಭಯೋತ್ಪಾದಕ ಕೃತ್ಯ ಎಂದಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಪ್ರವೀಣ್ ಸೂದ್, ಮಂಗಳೂರು ನಗರದ ನಾಗುರಿಯಲ್ಲಿ ನಡೆದಿರುವ ಸ್ಫೋಟವು(Mangaluru Auto Blast) ಆಕಸ್ಮಿಕವಲ್ಲ. ನಗರಕ್ಕೆ ಗಂಭೀರ ಹಾನಿಯನ್ನುಂಟುಮಾಡುವ ಉದ್ದೇಶದಿಂದ ಈ ಕೃತ್ಯವನ್ನು ಎಸಗಲಾಗಿದೆ. ಇದೊಂದು ಭಯೋತ್ಪಾದಕ ಕೃತ್ಯ. ಈ ಕೃತ್ಯದ ಕುರಿತಾಗಿ ಕರ್ನಾಟಕ ರಾಜ್ಯ ಪೊಲೀಸರು ಕೇಂದ್ರೀಯ ಸಂಸ್ಥೆಗಳೊಂದಿಗೆ ಆಳವಾಗಿ ತನಿಖೆ ನಡೆಸುತ್ತಿದ್ದಾರೆ ಎಂದಿದ್ದಾರೆ.

ಶನಿವಾರ ಚಲಿಸುತ್ತಿದ್ದ ಆಟೋರಿಕ್ಷಾ ಸ್ಫೋಟಗೊಂಡಿದ್ದು, ಬೆಂಕಿ ಮತ್ತು ದಟ್ಟವಾದ ಹೊಗೆ ಉಂಟಾಗಿದ್ದು, ಚಾಲಕ ಮತ್ತು ಪ್ರಯಾಣಿಕ ಇಬ್ಬರಿಗೂ ಸುಟ್ಟ ಗಾಯಗಳಾಗಿವೆ. ಆಟೋ ಚಾಲಕನ ಹೇಳಿಕೆಯ ಪ್ರಕಾರ, ಪ್ರಯಾಣಿಕನ ಬ್ಯಾಗ್‌ನಲ್ಲಿ ಏನೋ ಬೆಂಕಿ ಕಾಣಿಸಿಕೊಂಡು ನಂತರ ವಾಹನಕ್ಕೆ ವ್ಯಾಪಿಸಿದೆ. ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಕಟ್ಟಡದ ಬಳಿ ನಿಂತಿದ್ದ ಆಟೋರಿಕ್ಷಾ ಸ್ಫೋಟಗೊಂಡಿದ್ದು, ಈ ದೃಶ್ಯಾವಳಿಗಳು ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ಘಟನೆಯ ಹಿಂದಿನ ಕಾರಣಗಳನ್ನು ಕಂಡುಹಿಡಿಯಲು ವಿಧಿ ವಿಜ್ಞಾನ ಪ್ರಯೋಗಾಲಯದ ತಂಡವು ಸ್ಥಳಕ್ಕೆ ಧಾವಿಸಿದ್ದು, ಸ್ಫೋಟಕ್ಕೆ ಕಾರಣವಾದ ಅನೇಕ ಅನುಮಾನಸ್ಪದ ವಸ್ತುಗಳು ಕಾಣಿಸಿಕೊಂಡಿದ್ದವು. ಅನುಮಾನಸ್ಪದ ವಸ್ತುಗಳು ಪತ್ತೆಯಾದ ಹಿನ್ನಲೆಯಲ್ಲಿ ತನಿಖೆ ತೀವ್ರಗೊಂಡಿದ್ದು, ಇದೀಗ ಡಿಜಿಪಿ ಪ್ರವೀಣ್‌ ಸೂದ್‌ ಅವರು ಪ್ರಕರಣದ ಕುರಿತಾಗಿ ಇದೊಂದು ಭಯೋತ್ಪಾದಕ ಕೃತ್ಯ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಆಟೋ ನಿಗೂಢ ಸ್ಪೋಟ ಪ್ರಕರಣ : ಮಂಗಳೂರಿಗೆ NIA ತಂಡ, ಸ್ಪೋಟಕ್ಕಿದ್ಯಾ ಉಗ್ರರ ನಂಟು

ಇದನ್ನೂ ಓದಿ : Auto Explosion: ಚಲಿಸುತ್ತಿದ್ದ ಆಟೋ ನಿಗೂಢ ಸ್ಫೋಟ: ಅನುಮಾನಾಸ್ಪದ ವಸ್ತುಗಳು ಪತ್ತೆ

ಇದೀಗ, ಸ್ಫೋಟವು ಆಕಸ್ಮಿಕವಲ್ಲ, ಗಂಭೀರ ಹಾನಿಯನ್ನುಂಟುಮಾಡುವ ಉದ್ದೇಶದಿಂದ ಈ ಕೃತ್ಯವನ್ನು ನಡೆಸಲಾಗಿದೆ. ಉದ್ದೇಶಪೂರ್ವಕವಾಗಿ ಹಾನಿಯುಂಟು ಮಾಡುವ ಉಪಾಯ ಇದಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಸದ್ಯ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳದಿಂದ ಸ್ಫೋಟವಾದ ಸ್ಥಳದಲ್ಲಿ ಇನ್ನಷ್ಟು ತನಿಖೆ ಮುಂದುವರೆದಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳ ತಂಡವು ಕರಾವಳಿ ಕರ್ನಾಟಕದ ಮಂಗಳೂರಿಗೆ ಧಾವಿಸಿದ್ದು, ಇನ್ನಷ್ಟು ತನಿಖೆಯ ವಿವರಗಳು ಹೊರಬೀಳಲಿವೆ.

ಉನ್ನತ ಮಟ್ಟದ ತನಿಖೆಗೆ ಆದೇಶ

ಪ್ರಯಾಣಿಕರೊಬ್ಬರು ಸಾಗುತ್ತಿದ್ದ ಆಟೋದಲ್ಲಿ ಸ್ಫೋಟಗೊಂಡ ಕುಕ್ಕರ್‌ನಲ್ಲಿ ಅನುಮಾನಾಸ್ಪದ ಸ್ಫೋಟಕ ವಸ್ತುವನ್ನು ರಾಜ್ಯ ಪೊಲೀಸರು ಪತ್ತೆ ಮಾಡಿದ ಕಾರಣ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಅವರು ಸ್ಫೋಟದ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಕುಕ್ಕರ್‌ನ ಒಳಗಿನಿಂದ ನಾಲ್ಕು ಬ್ಯಾಟರಿಗಳು ಮತ್ತು ಸರ್ಕ್ಯೂಟ್ ವೈರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಯಾಣಿಕನ ಬಳಿ ನಕಲಿ ಐಡಿ

ಸ್ಫೋಟದಲ್ಲಿ ಅರ್ಧದಷ್ಟು ಸುಟ್ಟ ಗಾಯಗಳಾಗಿರುವ ಪ್ರಯಾಣಿಕನನ್ನು ತನಿಖಾಧಿಕಾರಿಗಳು ಪ್ರೇಮ್ ರಾಜ್ ಕಾನೋಗಿ ಎಂದು ಆಟೋದಲ್ಲಿ ಸಿಕ್ಕಿರುವ ಅವರ ಗುರುತಿನ ಚೀಟಿಯ ಮೂಲಕ ಗುರುತಿಸಿದ್ದು, ಇದೀಗ ಐಡಿ ಕಾರ್ಡ್ ನಕಲಿ ಎಂದು ಸಾಭಿತಾಗಿದೆ.

(Mangaluru Auto Blast) The investigation into the mysterious explosion in a moving auto is intensifying. After this DGP Praveen Sood gave a statement. He said that the explosion of a moving car in Mangalore was not unexpected, it was a terrorist act

Comments are closed.