ಆಟೋ ನಿಗೂಢ ಸ್ಪೋಟ ಪ್ರಕರಣ : ಮಂಗಳೂರಿಗೆ NIA ತಂಡ, ಸ್ಪೋಟಕ್ಕಿದ್ಯಾ ಉಗ್ರರ ನಂಟು

ಮಂಗಳೂರು : ಆಟೋ ನಿಗೂಢ ಸ್ಪೋಟ ಪ್ರಕರಣ ( Mangaluru autorickshaw blast) ದಿನಕ್ಕೊಂದು ಚುರುಕುಗೊಳಿಸುತ್ತಿದೆ. ಸ್ಪೋಟದ ಸ್ಥಳದಲ್ಲಿ ಕಂಕನಾಡಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈಗಾಗಲೇ ಕೇಂದ್ರ ತನಿಖಾ ಸಂಸ್ಥೆಗಳಾದ RAW ಮತ್ತು IB ಈಗಾಗಲೇ ಮಾಹಿತಿಯನ್ನು ಕಲೆ ಹಾಕಿದೆ. ಇನ್ನೊಂದೆಡೆಯಲ್ಲಿ ಎನ್ಐಎ ಅಧಿಕಾರಿಗಳ ತಂಡ ಈಗಾಗಲೇ ಮಂಗಳೂರಿಗೆ ಆಗಮಿಸಿದ್ದು, ತನಿಖೆಯನ್ನು ಆರಂಭಿಸಿದೆ.

ಮಂಗಳೂರು ಹೊರವಲಯದ ನಾಗುರಿಯಲ್ಲಿ ನಡೆದಿದ್ದ ಆಟೋ ಸ್ಪೋಟ ಪ್ರಕರಣದ ಹಿಂದೆ ಇದೀಗ ಉಗ್ರರ ಕರಿನೆರಳು ಇದ್ಯಾ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ. ಸ್ಪೋಟಗೊಂಡ ಆಟೋದಲ್ಲಿ ಈಗಾಗಲೇ ಕುಕ್ಕರ್, ಬ್ಯಾಟರಿ, ಟೈಮರ್ ಪತ್ತೆಯಾಗಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಮಂಗಳೂರು ನಗರದಲ್ಲಿ ಬಾಂಬ್ ತಯಾರಿ ನಡೆಯುತ್ತಿದ್ಯಾ ಅನ್ನೋ ಅನುಮಾನ ವ್ಯಕ್ತವಾಗಿದ್ದು, ಬಾಂಬ್ ತಯಾರಿಸಿ ಬೇರೆಡೆಗೆ ಸ್ಥಳಾಂತರಿಸುವ ಕೃತ್ಯವನ್ನು ನಡೆಸಲಾಗುತ್ತಿತ್ತಾ ಅನ್ನೋ ಬಗ್ಗೆಯೂ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಘಟನಾ ಸ್ಥಳದಲ್ಲಿ ಈಗಾಗಲೇ ಕಂಕನಾಡಿ ಠಾಣೆಯ ಪೊಲೀಸರು ಮಹಜರು ಕಾರ್ಯವನ್ನು ನಡೆಸುತ್ತಿದ್ದಾರೆ. ರಿಕ್ಷಾ ಸ್ಪೋಟಗೊಂಡಿರುವ ಸ್ಥಳದಲ್ಲಿರುವ ಸಿಸಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸುವ ಕಾರ್ಯವನ್ನು ಪೊಲೀಸರು ಮಾಡುತ್ತಿದ್ದಾರೆ. ಅದ್ರಲ್ಲೂ ನಾಗುರಿ ಸಮೀಪದಲ್ಲಿರುವ ಸಿಸಿ ಕ್ಯಾಮರಾದಲ್ಲಿ ಆಟೋದಲ್ಲಿ ನಿಗೂಢ ಸ್ಪೋಟಗೊಳ್ಳುವ ದೃಶ್ಯಾವಳಿ ಸೆರೆಯಾಗಿದೆ. ಮಂಗಳೂರು ಪೊಲೀಸರು ಆಟೋ, ಘಟನಾ ಸ್ಥಳದಲ್ಲಿನ ಪ್ರತಿಯೊಂದು ಮಾಹಿತಿಯನ್ನು ಕಲೆ ಹಾಕುವ ಕಾರ್ಯವನ್ನು ಮಾಡುತ್ತಿದ್ದಾರೆ.

mangaluru Autorickshaw blast : ಸ್ಪೋಟದ ಮಾಹಿತಿ ಪಡೆದ RAW ಮತ್ತು IB

ಕರಾವಳಿ ಭಾಗದಲ್ಲಿ ನಡೆದಿರುವ ನಿಗೂಢ ಸ್ಪೋಟ ಪ್ರಕರಣದ ಹಿಂದೆ ಉಗ್ರರ ಕೈವಾಡ ಇದೆಯಾ ಅನ್ನೋ ನಿಟ್ಟಿನಲ್ಲಿ ಈಗಾಗಲೇ ರಾಷ್ಟ್ರೀಯ ತನಿಖಾ ಸಂಸ್ಥೆಗಳಾದ RAW, IB ಈಗಾಗಲೇ ಮಂಗಳೂರು ಪೊಲೀಸರಿಂದ ಮಾಹಿತಿಯನ್ನು ಪಡೆದುಕೊಂಡಿವೆ. ಇನ್ನೊಂದೆಡೆಯಲ್ಲಿ ರಾಷ್ಟ್ರೀಯ ತನಿಖಾ ದಳದ ನಾಲ್ವರು ಅಧಿಕಾರಿಗಳ ತಂಡ ಈಗಾಗಲೇ ಮಂಗಳೂರಿಗೆ ಆಗಮಿಸಿದ್ದು, ತನಿಖೆಯನ್ನು ಚುರುಕುಗೊಳಿಸಿದೆ.

ಮಂಗಳೂರು ಸ್ಪೋಟ, ಕೊಯಮತ್ತೂರು ಸ್ಪೋಟಕ್ಕೂ ಸಾಮ್ಯತೆ !
ಇನ್ನು ಕೊಯಮತ್ತೂರಿನಲ್ಲಿ ನಡೆದಿದ್ದ ಕಾರು ಸ್ಪೋಟ ಪ್ರಕರಣಕ್ಕೂ ಮಂಗಳೂರಿನಲ್ಲಿ ನಡೆದಿರುವ ಆಟೋ ಸ್ಪೋಟ ಪ್ರಕರಣಕ್ಕೂ ಸಾಮ್ಯತೆಯಿದೆ. ಕೊಯಮತ್ತೂರಿನಲ್ಲಿ ನಡೆದ ಸ್ಪೋಟದ ಮಾದರಿಯಲ್ಲೇ ಮಂಗಳೂರಿನಲ್ಲಿಯೂ ಸ್ಪೋಟ ನಡೆದಿದ್ಯಾ ಅನ್ನೋ ಕುರಿತು ಪೊಲೀಸರು ತನಿಖೆಯನ್ನು ಚುರುಕುಗೊಳಿಸುತ್ತಿದ್ದಾರೆ. ಇದೊಂದು ಅನಿರೀಕ್ಷಿತ ಸ್ಪೋಟವಲ್ಲ, ಬದಲಾಗಿ ಉದ್ದೇಶ ಪೂರ್ವಕ ಸ್ಪೋಟ ಅನ್ನೋ ಕುರಿತು ಖುದ್ದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ.

ಮಂಗಳೂರಲ್ಲಿ ತಯಾರಾಗುತ್ತಿದ್ಯಾ ಬಾಂಬ್ ?
ಕರಾವಳಿಯಲ್ಲಿ ಈ ಹಿಂದೆಯೂ ಉಗ್ರ ಚಟುವಟಿಕೆಗಳು ನಡೆದಿದೆ. ಭಟ್ಕಳ ಸಹೋದರೂ ಕೂಡ ಮಂಗಳೂರನ್ನೇ ತಮ್ಮ ಅಡಗುತಾಣವನ್ನಾಗಿ ಮಾಡಿಕೊಂಡಿದ್ದರು. ಇದೀಗ ಆಟೋ ಸ್ಪೋಟ ಪ್ರಕರಣದ ಬೆನ್ನಲ್ಲೇ ಉಗ್ರರು ಮಂಗಳೂರಲ್ಲಿ ನೆಲೆ ಕಂಡುಕೊಂಡಿದ್ದಾರಾ ಅನ್ನೋ ಬಗ್ಗೆಯೂ ಅನುಮಾನ ವ್ಯಕ್ತವಾಗುತ್ತಿದೆ. ಆಟೋದಲ್ಲಿ ಬಾಂಬ್ ತಯಾರಿಕೆಗೆ ಬೇಕಾದ ವಸ್ತುಗಳು ಲಭ್ಯವಾಗಿರುವ ಹಿನ್ನೆಲೆಯಲ್ಲಿ ಇದೊಂದು ವ್ಯವಸ್ಥಿತ ಕೃತ್ಯ ಅನ್ನೋ ಅನುಮಾನ ಮೂಡುತ್ತಿದೆ. ಮಂಗಳೂರಲ್ಲಿ ಸದ್ದಿಲ್ಲದೇ ಬಾಂಬ್ ತಯಾರಿ ನಡೆಯುತ್ತಿದ್ಯಾ, ಮಂಗಳೂರಲ್ಲಿ ಸ್ಪೋಟಕ್ಕೆ ಉಗ್ರರು ಸಂಚು ಹಾಕಿದ್ದಾರಾ ಅನ್ನೋ ಹಿನ್ನೆಲೆಯಲ್ಲಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : Auto Explosion: ಚಲಿಸುತ್ತಿದ್ದ ಆಟೋ ನಿಗೂಢ ಸ್ಫೋಟ: ಅನುಮಾನಾಸ್ಪದ ವಸ್ತುಗಳು ಪತ್ತೆ

ಇದನ್ನೂ ಓದಿ :  ಶಬರಿಮಲೆ ಯಾತ್ರಾರ್ಥಿಗಳ ಬಸ್‌ ಪಲ್ಟಿ: 18 ಮಂದಿಗೆ ಗಾಯ

Mangaluru autorickshaw blast NIA team to Mangalore, bomb blast linked to terrorists

Comments are closed.