Hotel Owner Committed Suicide : ರಾಡಿಸನ್‌ ಬ್ಲೂ ಹೋಟೆಲ್‌ ಮಾಲೀಕ ಆತ್ಮಹತ್ಯೆ

ನವದೆಹಲಿ : ಗಾಜಿಯಾಬಾದ್‌ನಲ್ಲಿ ರಾಡಿಸನ್‌ ಬ್ಲೂ ಹೋಟೆಲ್‌ ಮಾಲಿಕ ಆತ್ಮಹತ್ಯೆ (Hotel Owner Committed Suicide) ಮಾಡಿಕೊಂಡಿದ್ದಾರೆ. ಗಾಜಿಯಾಬಾದ್‌ನ ಕೌಶಂಬಿಯಲ್ಲಿರುವ ರಾಡಿಸನ್ ಬ್ಲೂ ಹೋಟೆಲ್‌ನ ಮಾಲೀಕ ಕಾಮನ್‌ವೆಲ್ತ್ ಗೇಮ್ಸ್ (ಸಿಡಬ್ಲ್ಯೂಜಿ) ಗ್ರಾಮದ ಪೂರ್ವ ದೆಹಲಿಯ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಹೋಟೆಲ್‌ ಮಾಲೀಕ ಮೃತ ಅಮಿತ್ ಜೈನ್ ಎಂದು ಗುರುತಿಸಲಾಗಿದ್ದು, ಆತನ ಫ್ಲಾಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತದೇಹ ಅಥವಾ ಘಟನೆ ನಡೆದ ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಪಿಸಿಆರ್ ಕರೆ ಮೂಲಕ ಮಂಡವಾಲಿ ಪೊಲೀಸ್ ಠಾಣೆಯ ಪೊಲೀಸರು ಆತ್ಮಹತ್ಯೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತನಿಖೆಯ ಸಮಯದಲ್ಲಿ, ಶ್ರೀ ಜೈನ್ ಅವರು ನೋಯ್ಡಾದ ಹೊಸ ಮನೆಯಲ್ಲಿ ಉಪಹಾರ ಸೇವಿಸಿದ ನಂತರ ಸಿಡಬ್ಲ್ಯೂಜಿ ಹಳ್ಳಿಯಲ್ಲಿರುವ ಅವರ ಮನೆಗೆ ಬೆಳಿಗ್ಗೆ ಬಂದಿದ್ದರು ಎಂದು ತಿಳಿದುಬಂದಿದೆ. ಶ್ರೀ ಜೈನ್ ತಮ್ಮ ಕುಟುಂಬದೊಂದಿಗೆ ನೋಯ್ಡಾಕ್ಕೆ ಶಿಫ್ಟ್ ಆಗಲು ಯೋಜಿಸುತ್ತಿದ್ದರು. ಘಟನೆಗೂ ಮುನ್ನ ಮೃತ ಅಮಿತ್‌ ಜೈನ್ ತನ್ನ ಸಹೋದರ ಕರಣ್‌ನನ್ನು ಘಾಜಿಯಾಬಾದ್‌ನಲ್ಲಿರುವ ತನ್ನ ಕಚೇರಿಗೆ ಇಳಿಸಿದ್ದಾರೆ. ನಂತರ ಅವರು ಒಬ್ಬನೇ ಸಿಡಬ್ಲ್ಯೂಜಿಗೆ ತೆರಳಿದ್ದಾರೆ.

ಇದನ್ನೂ ಓದಿ : Auto Explosion: ಚಲಿಸುತ್ತಿದ್ದ ಆಟೋ ನಿಗೂಢ ಸ್ಫೋಟ: ಅನುಮಾನಾಸ್ಪದ ವಸ್ತುಗಳು ಪತ್ತೆ

ಇದನ್ನೂ ಓದಿ : Breaking News : ಮಂಗಳೂರಲ್ಲಿ ಚಲಿಸುತ್ತಿದ್ದ ಆಟೋದಲ್ಲಿ ನಿಗೂಢ ಸ್ಪೋಟ

ಇದನ್ನೂ ಓದಿ : Bus overtuns in Kerala: ಶಬರಿಮಲೆ ಯಾತ್ರಾರ್ಥಿಗಳ ಬಸ್‌ ಪಲ್ಟಿ: 18 ಮಂದಿಗೆ ಗಾಯ

ಅಮಿತ್‌ ಜೈನ್ ಅವರ ಮಗ ಸಿಡಬ್ಲ್ಯೂಜಿ ಫ್ಲಾಟ್‌ಗೆ ತನ್ನ ಡ್ರೈವರ್‌ನೊಂದಿಗೆ ಕೆಲವು ವಸ್ತುಗಳನ್ನು ತೆಗೆದುಕೊಳ್ಳಲು ಹೋಗಿದ್ದಾಗ, ತಂದೆಯು ನೇಣು ಹಾಕಿಕೊಂಡಿರುವುದನ್ನು ನೋಡಿರುತ್ತಾನೆ. ತಕ್ಷಣವೇ ತಂದೆಯನ್ನು ಮ್ಯಾಕ್ಸ್ ಪಟ್ಪರ್‌ಗಂಜ್‌ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಸ್ಪತ್ರೆಯ ವೈದ್ಯರು ಅವರು ಮರಣ ಹೊಂದಿದ್ದಾರೆ ಎಂದು ಹೇಳಿದರು. ಯಾವುದೇ ಅವ್ಯವಹಾರದ ಆರೋಪಗಳು ಇನ್ನೂ ಬೆಳಕಿಗೆ ಬಂದಿರುವುದಿಲ್ಲ, ಹಾಗಾಗಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು, ತನಿಖೆಯನ್ನು ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

The owner of Radisson Blu Hotel committed suicide

Comments are closed.