Mangaluru high alert: ಮಂಗಳೂರಿನಲ್ಲಿ ನ್ಯೂ ಇಯರ್‌ ಗೆ ಕಟ್ಟುನಿಟ್ಟಿನ ಕ್ರಮ: ಎನ್‌ ಶಶಿಕುಮಾರ್

ಮಂಗಳೂರು: (Mangaluru high alert) ಹೊಸ ವರ್ಷಕ್ಕೆ ಇನ್ನೂ ಕೆಲವೇ ಗಂಟೆಗಳು ಬಾಕಿ ಉಳಿದಿದ್ದು, ಹೊಸ ವರ್ಷಾಚರಣೆಗೆ ಜನತೆ ಕಾತರದಿಂದ ಕಾಯುತ್ತಿದ್ದಾರೆ. ಅದರೆ ಹೊಸ ವರ್ಷಕ್ಕೆ ಕೊರೊನಾ ತಡೆಯೊಡ್ಡಿದ್ದು, ಮಂಗಳೂರಿನಲ್ಲಿ ಹೊಸ ವರ್ಷ ಸಂಭ್ರಮಾಚರಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಕೊರೊನಾ ಆತಂಕದ ಬೆನ್ನಲ್ಲೇ ಹೊಸ ವರ್ಷಾಚರಣೆಗೆ ಕಾಲಿಟ್ಟಿದ್ದು ಎಲ್ಲೆಡೆ ನ್ಯೂ ಇಯರ್‌ ಸೆಲಬ್ರೇಷನ್‌ ಗೆ ಜನರು ಕಾತರದಿಂದ ಕಾಯುತ್ತಿದ್ದಾರೆ. ಇನ್ನೇನು ಕೆಲವೇ ಗಂಟೆಗಳು ಉಳಿದಿವೆ. ಈ ಮಧ್ಯೆ ಮಂಗಳೂರಿನಲ್ಲಿ ಹೊಸ ವರ್ಷದ ಆಚರಣೆಗೆ ಕಟ್ಟು ನಿಟ್ಟಿನ ಕ್ರಮ(Mangaluru high alert)ಗಳನ್ನು ಕೈಗೊಳ್ಳಲಾಗಿದೆ. ಮಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ.

ಹೊಸ ವರ್ಷದ ಆಚರಣೆಗೆ ಪೊಲೀಸ್‌ ಆಯುಕ್ತರಲ್ಲಿ ಅನುಮತಿಯನ್ನು ಪಡೆದುಕೊಂಡೇ ಆಚರಣೆ ನಡೆಸಬೇಕು. ಅನುಮತಿ ಇಲ್ಲದೇ ಯಾವುದೇ ಆಚರಣೆ ನಡೆಸುವಂತಿಲ್ಲ ಎಂದು ಮಂಗಳೂರು ಪೊಲೀಸ್‌ ಆಯುಕ್ತ ಶಶಿಕುಮಾರ್‌ ತಿಳಿಸಿದ್ದಾರೆ. ಸಂಭ್ರಮಾಚರಣೆಯಲ್ಲಿ ರಾತ್ರಿ 10 ಗಂಟೆಯವರೆಗೆ ಮಾತ್ರ ಧ್ವನಿವರ್ಧಕಗಳನ್ನು ಬಳಸಲು ಅವಕಾಶವಿದೆ. ರಾತ್ರಿ 12:30 ರ ವೆರೆಗ ಮಾತ್ರ ಪಾರ್ಟಿಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿದೆ. ಅದಾದ ಬಳಿಕ ಯಾರಿಗೂ ರಸ್ತೆಯಲ್ಲಿ ಓಡಾಡಲು, ಸಂಭ್ರಮಾಚರಣೆ ಮುಂದುವರಿಸಲು ಅವಕಾಶಗಳಿಲ್ಲ. ರಾತ್ರಿ 12:30 ಅಷ್ಟರಲ್ಲಿ ಎಲ್ಲವೂ ಸ್ಥಗಿತಗೊಂಡಿರಬೇಕು. ಎಲ್ಲವೂ ಕ್ಲೋಸ್‌ ಅಗಿದ್ದಾಗ ರಸ್ತೆಯಲ್ಲಿ ಯಾರು ಓಡಾಡುವಂತಿಲ್ಲ ಎಂದು ಶಶಿಕುಮಾರ್‌ ಖಡಖ್‌ ಆಗಿ ಆದೇಶ ಹೊಡಿಸಿದ್ದಾರೆ.

ಸಂಭ್ರಮಾಚರಣೆಯ ವೇಳೆ, ಅದಕ್ಕೂ ಮೊದಲು ಅಥವಾ ಸಂಭ್ರಮಾಚರಣೆಯ ನಂತರ ಬೈಕ್‌ ನಲ್ಲಿ ಮೂರು ಜನ ಪ್ರಯಾಣಿಸುವಂತಿಲ್ಲ ಹಾಗೂ ಕುಡಿದು ಯಾವುದೇ ವಾಹನವನ್ನು ಚಲಾಯಿಸುವಂತಿಲ್ಲ. ಸಂಭ್ರಮಾಚರಣೆಯ ವೇಳೆ ಯಾವುದೇ ಅಹಿತಕರ ಘಟನೆ ನಡೆದಲ್ಲಿ ಕೂಡಲೇ ಘಟನೆಗೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಸಂಭ್ರಮಾಚರಣೆಗಳು ನಡೆಯುವ ಪ್ರದೇಶಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮಂಗಳೂರಿನ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಮೂವತ್ತೆರಡು ಚೆಕ್‌ ಪೋಸ್ಟ್‌ ಗಳನ್ನು ಸ್ಥಾಪಿಸಲಾಗಿದೆ. ರಾತ್ರಿ 10 ಗಂಟೆಯೊಳಗೆ ಧ್ವನಿವರ್ಧಕಗಳನ್ನು ಬಂದ್‌ ಮಾಡಿ 12:30 ರ ಹೊತ್ತಿಗೆ ಸಂಭ್ರಮಾಚರಣೆ ಸೇರಿದಂತೆ ಎಲ್ಲಾ ರಸ್ತೆಗಳಲ್ಲಿ ಓಡಾಟ ಬಂದ್‌ ಅಗಬೇಕು ಎಂದು ಪೊಲೀಸ್‌ ಆಯುಕ್ತ ಶಶಿಕುಮಾರ್‌ ಖಡಕ್‌ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಈ ವೇಳೆ ಯಾರಾದರೂ ತೊಂದರೆ ನೀಡಿದ್ದಲ್ಲಿ ಕೂಡಲೇ 112 ಕ್ಕೆ ಕರೆ ಮಾಡುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ : Google Doodle: ಗೂಗಲ್‌ ಡೂಡಲ್‌ ಮುಖಪುಟದಲ್ಲಿ ಹೊಸ ವರ್ಷಕ್ಕೆ ಹೊಸ ಆಕರ್ಷಣೆ

Corona has stopped the New Year and strict measures have been taken to prevent any untoward incident during the New Year celebrations in Mangalore.

Comments are closed.