Rishabh Pant Rohit Sharma : ರಿಷಭ್ ಚೇತರಿಕೆಗೆ ಪಾಕ್ ಕ್ರಿಕೆಟಿಗರ ಹಾರೈಕೆ, ಇತ್ತ ಒಂದೇ ಒಂದು ಶಬ್ದ ಮಾತಾಡದ ರೋಹಿತ್; ಮಾನವೀಯತೆ ಮರೆತರಾ ಹಿಟ್‌ಮ್ಯಾನ್?

ಬೆಂಗಳೂರು: ಡೆಡ್ಲಿ ಕಾರು ಆಕ್ಸಿಡೆಂಟ್’ನಲ್ಲಿ ಗಂಭೀರವಾಗಿ ಗಾಯಗೊಂಡಿರುವ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ ಡೆಹ್ರಾಡೂನ್’ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ (Rishabh Pant car accident). ರಿಷಬ್ ಪಂತ್ ಅವರ ಶೀಘ್ರ ಚೇತರಿಕೆಗೆ ಇಡೀ ಕ್ರಿಕೆಟ್ ಜಗತ್ತೇ ಹಾರೈಸುತ್ತಿದೆ. ಹಾಲಿ ಕ್ರಿಕೆಟಿಗರು ಮಾಜಿ ಕ್ರಿಕೆಟಿಗರೆಲ್ಲಾ ರಿಷಬ್ ಪಂತ್ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಟ್ವೀಟ್ (Rishabh Pant Rohit Sharma) ಮಾಡಿದ್ದಾರೆ.

ಭಾರತವಷ್ಟೇ ಅಲ್ಲದೇ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್..ಅಷ್ಟೇ ಅಲ್ಲ ಪಾಕಿಸ್ತಾನದ ಕ್ರಿಕೆಟಿಗರೂ ಪಂತ್ ಚೇತರಿಕೆಗೆ ಹಾರೈಸಿದ್ದಾರೆ. ಆದರೆ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಇಲ್ಲಿಯವರೆಗೆ ಒಂದೇ ಒಂದು ಟ್ವೀಟ್ ಮಾಡಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ರೋಹಿತ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.ರನ್ ಮಷಿನ್ ವಿರಾಟ್ ಕೊಹ್ಲಿ, ಕನ್ನಡಿಗ ಕೆ.ಎಲ್ ರಾಹುಲ್ ಸಹಿತ ಟೀಮ್ ಇಂಡಿಯಾ ಆಟಗಾರರೆಲ್ಲಾ ರಿಷಭ್ ಪಂತ್ ಚೇತರಿಕೆಗೆ ಹಾರೈಸಿ ಟ್ವೀಟ್ ಮಾಡಿದ್ದಾರೆ. ಥಾಯ್ಲೆಂಡ್ ಪ್ರವಾಸದಲ್ಲಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೂಡ ಟ್ವೀಟ್ ಮಾಡಿದ್ದಾರೆ.

ಭಾರತ ತಂಡದ ಬಹುತೇಕ ಆಟಗಾರರು ತಮ್ಮ ಸಹ ಆಟಗಾರನಿಗೆ ಎದುರಾಗಿರುವ ಸಂಕಷ್ಟದ ಬಗ್ಗೆ ಮರುಕ ವ್ಯಕ್ತಪಡಿಸಿದ್ದಾರೆ. ಆದರೆ ಅಚ್ಚರಿ ಎಂಬಂತೆ ನಾಯಕ ರೋಹಿತ್ ಶರ್ಮಾ ಒಂದೇ ಒಂದು ಶಬ್ದ ಮಾತಾಡಿಲ್ಲ. ಕನಿಷ್ಠ ಒಂದು ಸಾಲಿನ ಟ್ವೀಟ್ ಕೂಡ ಮಾಡಿಲ್ಲ. ಇದರ ವಿರುದ್ಧ ಆಕ್ರೋಶ ಹೊರ ಹಾಕಿರುವ ಕ್ರಿಕೆಟ್ ಅಭಿಮಾನಿಯೊಬ್ಬ “ಗಾಡ್ ಆಫ್ ಕ್ರಿಕೆಟ್ ವಿರಾಟ್ ಕೊಹ್ಲಿ, ರಿಷಬ್ ಪಂತ್ ಚೇತರಿಕೆಗೆ ಶುಭ ಹಾರೈಸಿದ್ದಾರೆ. ಆದರೆ ನಾಚಿಕೆಯಿಲ್ಲದ ರೋಹಿತ್ ಶರ್ಮಾ ರಜಾ ಮಜಾದಲ್ಲಿ ನಿರತನಾಗಿದ್ದು, ಪೋಟೋಗಳನ್ನು ಇನ್’ಸ್ಟಾಗ್ರಾಂನದಲ್ಲಿ ಪೋಸ್ಟ್ ಮಾಡುತ್ತಿದ್ದಾನೆ” ಎಂದು ಟ್ವೀಟ್ ಮಾಡಿದ್ದಾನೆ.

https://twitter.com/ExposeMSDfan/status/1608875381616185346?s=20&t=aS1ZT2kiChsxHqCMbNvAEw

ಕ್ರಿಕೆಟ್ ಅಭಿಮಾನಿಗಳು ಎತ್ತಿರುವ ಈ ಪ್ರಶ್ನೆಯಲ್ಲಿ ಅರ್ಥವಿದೆ. ತನ್ನದೇ ತಂಡದ ಆಟಗಾರನೊಬ್ಬ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಸಂದರ್ಭದಲ್ಲಿ ತಂಡದ ನಾಯಕನಾದನು ಕನಿಷ್ಠ ಒಂದು ಟ್ವೀಟ್ ಕೂಡ ಮಾಡಿಲ್ಲ. ಹಾಗಾದ್ರೆ ರೋಹಿತ್ ಶರ್ಮಾ ಮಾನವೀಯತೆ ಮರೆತು ಬಿಟ್ಟರಾ.? ನಮ್ಮ ದೇಶದ ಆಟಗಾರನೊಬ್ಬನ ಮೇಲೆ ಪಾಕಿಸ್ತಾನದ ಆಟಗಾರರಿಗೆ ಇರುವ ಕಾಳಜಿ ನಮ್ಮ ತಂಡದ ನಾಯಕನಿಗೆ ಇಲ್ಲವಾಯಿತೇ?

ರಿಷಭ್ ಪಂತ್ ಅವರ ಶೀಘ್ರ ಚೇತರಿಕೆಗೆ ಪಾಕಿಸ್ತಾನ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಮೊಹಮ್ಮದ್ ರಿಜ್ವಾನ್, ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ, ಮಾಜಿ ನಾಯಕರಾದ ಶೋಯೆಬ್ ಮಲಿಕ್, ಮೊಹಮ್ಮದ್ ಹಫೀಜ್, ಮಾಜಿ ಕ್ರಿಕೆಟಿಗ ಡ್ಯಾನೀಶ್ ಕನೇರಿಯಾ ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ.

25 ವರ್ಷದ ರಿಷಭ್ ಪಂತ್ ಶುಕ್ರವಾರ ಬೆಳಗ್ಗೆ ಐದೂವರೆಗೆ ದೆಹಲಿ-ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯ ರೂರ್ಕಿಯ ನರ್ಸನ್ ಬಳಿಯಿರುವ ಹಮ್ಜದ್’ಪುರ ಸಮೀಪ ರಸ್ತೆ ಅಫಘಾತಕ್ಕೊಳಗಾಗಿದ್ದರು. ಪಂತ್ ಚಲಾಯಿಸುತ್ತಿದ್ದ ಮರ್ಸಿಡಿಸ್ ಬೆಂಜ್ ಕಾರು ರಸ್ತೆ ಡಿವೈಡರ್’ಗೆ ಡಿಕ್ಕಿ ಹೊಡೆದಿತ್ತು. ಹೈಸ್ಪೀಡ್’ನಲ್ಲಿದ್ದ ಕಾರು ಡಿವೈಡರ್’ಗೆ ಬಂದಪ್ಪಳಿಸಿದ ಪರಿಣಾಮ ಕಾರು ಚಲಾಯಿಸುತ್ತಿದ್ದ ರಿಷಬ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದರು.

ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ರಿಷಭ್ ಪಂತ್ ಅತ್ಯಂತ ವೇಗವಾಗಿ ಕಾರು ಚಲಾಯಿಸುತ್ತಿದ್ದರು. ಬೆಳ್ಳಂಬೆಳಗ್ಗೆ ಡೆಹ್ರಾಡೂನ್’ನಲ್ಲಿ ತಾಯಿ ಮತ್ತು ತಂಗಿಯನ್ನು ಭೇಟಿಯಾಗಲು ದೆಹಲಿಯಿಂದ ಡೆಹ್ರಾಡೂನ್’ಗೆ ಹೊರಟಿದ್ದ ರಿಷಭ್ ಪಂತ್, ಸ್ವತಃ ತಾವೇ ಕಾರು ಚಲಾಯಿಸುತ್ತಿದ್ದರು. ಮುಂಜಾನೆಯಾಗಿದ್ದ ಕಾರಣ ನಿದ್ದೆಯ ಮಂಪರಿನಲ್ಲಿದ್ದ ಪಂತ್ ಎಚ್ಚರ ತಪ್ಪಿದ ಕಾರಣ ಕಾರು ಡಿವೈಡರ್’ಗೆ ಅಪ್ಪಳಿಸಿತ್ತು.

ಅಪಘಾತ ನಡೆದ ಕೂಡಲೇ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ರಿಷಭ್ ಪಂತ್ ಸುಟ್ಟು ಕರಕಲಾಗುವ ಮೊದಲೇ ಹರ್ಯಾಣದ ಟ್ರಕ್ ಡ್ರೈವರ್ ಒಬ್ಬರು ಪಂತ್ ಅವರನ್ನು ಕಾರಿನಿಂದ ಹೊರಗೆಳೆದು ಪ್ರಾಣ ಉಳಿಸಿದ್ದರು. ಪಂತ್ ಜೀವ ಉಳಿಸಿದ ಆ ಡ್ರೈವರ್ ಹೆಸರು ಸುಶೀಲ್ ಕುಮಾರ್. ಪಂತ್ ಅವರನ್ನು ಉರಿಯುತ್ತಿದ್ದ ಕಾರಿನಿಂದ ಹೊರಗೆಳೆದ ಸುಶೀಲ್ ಕುಮಾರ್, ಪಂತ್ ದೇಹಕ್ಕೆ ಬೆಡ್ ಶೀಟ್ ಸುತ್ತಿ ಬೆಂಕಿ ಆರಿಸಿದ್ದಾರೆ. ನಂತರ ಆಂಬ್ಯುಲೆನ್ಸ್’ಗೆ ಕರೆ ಮಾಡಿ ಆಸ್ಪತ್ರೆಗೆ ಸೇರಿಸಿದ್ದರು.

ರಿಷಭ್ ಪಂತ್ ಅವರ ಮೆದುಳು ಮತ್ತು ಬೆನ್ನು ಹುರಿಯ MRI ಸ್ಕ್ಯಾನ್ ನಡೆದಿದ್ದು, ನಾರ್ಮಲ್ ರಿಸಲ್ಟ್ ಬಂದಿದ್ದು ಯಾವುದೇ ಅಪಾಯ ಕಂಡು ಬಂದಿಲ್ಲ. ಅಪಘಾತದಲ್ಲಿ ರಿಷಭ್ ಪಂತ್ ಅವರ ಮುಖದ ಮೇಲೆ ಸೀಳಿದ ಗಾಯಗಳಾಗಿದ್ದು, ಪ್ಲಾಸ್ಟಿಕ್ ಸರ್ಜರಿ ನಡೆಯಲಿದೆ. ಡೆಹ್ರಾಡೂನ್’ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಿಷಭ್ ಪಂತ್ ಅವರನ್ನು ಇಂದು ದೆಹಲಿಗೆ ಏರ್ ಲಿಫ್ಟ್ ಮಾಡುವ ಸಾಧ್ಯತೆಯಿದೆ.

ಇದನ್ನೂ ಓದಿ : Rishabh Pant is out of danger: ಮೆದುಳು, ಬೆನ್ನು ಹುರಿ ಸೇಫ್, ರಿಷಭ್ ಪಂತ್ ಔಟ್ ಆಫ್ ಡೇಂಜರ್ : ಇಂದು ನಿರ್ಧಾರವಾಗಲಿದೆ ಕ್ರಿಕೆಟ್ ಭವಿಷ್ಯ

ಇದನ್ನೂ ಓದಿ : Rishabh Pant car accident : ಉರಿಯುತ್ತಿದ್ದ ಕಾರಿನಿಂದ ರಿಷಭ್ ಪಂತ್‌ನನ್ನು ಹೊರಗೆಳೆದು ಪ್ರಾಣ ಉಳಿಸಿದ್ದು ಬಸ್ ಡ್ರೈವರ್

ಇದನ್ನೂ ಓದಿ : Ranji trophy 2023 Updates : ಫಾಲೋ ಆನ್ ಹೇರಿದರೂ ಗೋವಾ ವಿರುದ್ಧ ಸಿಗದ ಜಯ, 3ನೇ ಸ್ಥಾನಕ್ಕೆ ಕುಸಿದ ಕರ್ನಾಟಕ

ಮೆದುಳು ಮತ್ತು ಬೆನ್ನು ಹುರಿಗೆ (brain and spinal cord) ಯಾವುದೇ ಹಾನಿಯಾಗದೇ ಇರುವುದು ರಿಷಭ್ ಪಂತ್ ಮತ್ತು ಅವರ ಅಭಿಮಾನಿಗಳಿಗೆ ಶುಭ ಸುದ್ದಿ. ಆದರೆ ಪಂತ್ ಅವರ ಕ್ರಿಕೆಟ್ ಭವಿಷ್ಯ ನಿರ್ಧಾರವಾಗಲಿರೋದು ಶನಿವಾರ. ಅಪಘಾತದಲ್ಲಿ ಪಂತ್ ಅವರ ಮೊಣಕಾಲು ಮತ್ತು ಪಾದಗಳಿಗೆ ಗಾಯವಾಗಿದ್ದು, ಇದರ MRI ಸ್ಕ್ಯಾನ್ ಇಂದು ನಡೆಯಲಿದೆ.

Rishabh Pant Rohit Sharma: Wish of Pakistani cricketers for Rishabh’s recovery, Rohit did not speak a single word; Humanity Forgotten Hitman?

Comments are closed.