ಸಿನಿರಂಗದಲ್ಲಿ 6 ವರ್ಷ ಪೂರೈಸಿದ ರಶ್ಮಿಕಾ ಮಂದಣ್ಣ : ಸಂತಸದ ನಡುವೆ “ಕಿರಿಕ್‌ ಪಾರ್ಟಿ” ಸಿನಿಮಾ ಮರೆತ್ರಾ ?

ನಟಿ ರಶ್ಮಿಕಾ ಮಂದಣ್ಣ ಸಿನಿರಂಗದಲ್ಲಿ 6 ವರ್ಷ ಪೂರೈಸಿದ್ದಾರೆ. ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ಮೊದಲ ಸಿನಿಮಾ ‘ಕಿರಿಕ್ ಪಾರ್ಟಿ’ (Kirik Party) ಬಿಡುಗಡೆಯಾಗಿ ಆಗಿ 6 ವರ್ಷ ಕಳೆದಿದೆ. ಈ ಕುರಿತು ಕಿರಿಕ್ ಬೆಡಗಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿದ್ದು, ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.

2016ರಲ್ಲಿ ರಿಷಬ್ ಶೆಟ್ಟಿ ನಿರ್ದೇಶನದ ‘ಕಿರಿಕ್ ಪಾರ್ಟಿ’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಮೊದಲು ಬಣ್ಣ ಹಚ್ಚಿದ್ದಾರೆ. ಆ ಸಿನಿಮಾದಲ್ಲಿ ಸಾನ್ವಿ ಆಗಿ ಪ್ರೇಕ್ಷಕರ ಗಮನ ಸೆಳೆದಿದ್ದರು. ರಕ್ಷಿತ್ ಶೆಟ್ಟಿ ಜೋಡಿಯಾಗಿ ಕೇವಲ ಅರ್ಧ ಸಿನಿಮಾ ಮಾತ್ರ ಕಾಣಿಸಿಕೊಂಡಿದ್ದ ಚೆಲುವೆ ಸಿನಿಪ್ರೇಕ್ಷಕರಿಗೆ ಸಖತ್ ಮೋಡಿ ಮಾಡಿದ್ದರು. ನಂತರ ಪುನೀತ್ ರಾಜ್‌ಕುಮಾರ್ ಜೊತೆ ‘ಅಂಜನಿಪುತ್ರ’ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿದ್ದರು. ಮರುವರ್ಷವೇ ‘ಚಲೋ’ ಸಿನಿಮಾ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು. ಅದೇ ವರ್ಷ ಬಂದ ‘ಗೀತಾ ಗೋವಿಂದಂ’ ತೆಲುಗು ಸಿನಿಮಾದಿಂದ ರಶ್ಮಿಕಾ ಮಂದಣ್ಣ ನಿಜಕ್ಕೂ ಅದೃಷ್ಟ ಖುಲಾಯಿಸಿತ್ತು.

ವಿಜಯ್ ದೇವರಕೊಂಡ ಜೊತೆ ನಟಿಸಿದ ‘ಗೀತಾ ಗೋವಿಂದಂ’ ಸಿನಿಮಾ ಸೂಪರ್ ಹಿಟ್ ನಂತರ ಸಾಲು ಸಾಲು ಅವಕಾಶಗಳು ಇವರನ್ನು ಹುಡುಕಿ ಬಂದವೆ. ನಂತರ ರಶ್ಮಿಕಾ ಏಕ್‌ದಮ್ ಸಿನಿಮಾ ಮೂಲಕ ಬಾಲಿವುಡ್‌ಗೂ ಕಾಲಿಟ್ಟರು. ಹಾಗಾಗಿ ಇವರು ನ್ಯಾಷನಲ್ ಕ್ರಶ್ ಪಟ್ಟಕ್ಕೇರಿದ್ದ ಕನ್ನಡ ನಟಿ ಆಗಿದ್ದಾರೆ. ಅಷ್ಟೇ ಅಲ್ಲದೇ ಬಿಗ್‌ ಬಿ ಅಮಿತಾಬ್ ಬಚ್ಚನ್ ಮಗಳ ಪಾತ್ರದಲ್ಲಿ ನಟಿಸಿದರು. ಈ ಕಡೆ ಸೌತ್‌ನಲ್ಲಿ ದಳಪತಿ ವಿಜಯ್, ಅಲ್ಲು ಅರ್ಜುನ್‌ರಂತಹ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡು ಸಕ್ಸಸ್ ಕಂಡರು.

ಇದೀಗ ನಟಿ ರಶ್ಮಿಕಾ ಮಂದಣ್ಣ ಅಭಿನಯದ ‘ವಾರೀಸು’ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಅಷ್ಟೇ ಅಲ್ಲದೇ ಬಾಲಿವುಡ್‌ನಲ್ಲಿ ‘ಅನಿಮಲ್’, ತೆಲುಗಿನಲ್ಲಿ ‘ಪುಷ್ಪ’-2 ಚಿತ್ರೀಕರಣ ನಡೀತಿದೆ. ಇದರರೊಂದಿಗೆ ನಟಿ ರಶ್ಮಿಕಾ ಅವರನ್ನು ಮತ್ತಷ್ಟು ಅವಕಾಶಗಳು ಅರಸಿ ಬರುತ್ತಿದೆ. ಆದರೆ ನಟಿ ರಶ್ಮಿಕಾ ಮಂದಣ್ಣ ತಮ್ಮ ಹೇಳಿಕೆಗಳಿಂದ ಸಾಕಷ್ಟು ಬಾರಿ ಸಂಕಷ್ಟ ಎದುರಿಸಿದ್ದಾರೆ. ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗಿದ್ದರು. ಸದ್ಯ ಸಿನಿರಂಗದಲ್ಲಿ 6 ವರ್ಷ ಪೂರೈಸಿದ್ದಾರೆ. ಈ ಸಂತಸವನ್ನು ಹಂಚಿಕೊಂಡಿದ್ದಾರೆ.

ಆದರೆ ಮೊದಲು ನಟಿಸಿದ ‘ಕಿರಿಕ್ ಪಾರ್ಟಿ’ ಸಿನಿಮಾ ಬಗ್ಗೆ ಮಾತನಾಡದೇ ಇರುವುದು ಆಕೆಯ ಪೋಸ್ಟ್‌ನಲ್ಲಿ ಕಾಣುತ್ತಿದ್ದು, ಇದು ಮತ್ತೆ ಟ್ರೋಲ್‌ ಗುರಿ ಆಗುವ ಲಕ್ಷಣ ಕಾಣುತ್ತಿದೆ. ಇತ್ತೀಚೆಗೆ ‘ಅಂಜನಿಪುತ್ರ’ ಸಿನಿಮಾ 5 ವರ್ಷ ಪೂರೈಸಿದಾಗ ಸಿನಿಮಾ ಬಗ್ಗೆ ಮಾತನಾಡಿದ್ದರು. ಅಪ್ಪು ಬಗ್ಗೆ ಟ್ವೀಟ್ ಮಾಡಿದ್ದರು. ಆದರೆ ಇದೀಗ ತಾನು ಸಿನಿರಂಗದಲ್ಲಿ 6 ವರ್ಷ ಪೂರೈಸಿದ್ದೇನೆ ಅಂತ ಮಾತ್ರ ಬರೆದುಕೊಂಡಿರುವುದು ಕೆಲವರ ಬೇಸರಕ್ಕೆ ಕಾರಣವಾಗಿದೆ.

ಇದನ್ನೂ ಓದಿ : Yash upcoming Film: ಜ.8ರಂದು ಸಿಹಿಸುದ್ದಿ ಕೊಡ್ತಾರಂತೆ ನಟ ಯಶ್; ಅಭಿಮಾನಿಗಳಿಗೆ ಸಿಗಲಿದ್ಯಾ ಮುಂದಿನ ಸಿನಿಮಾದ ಸುಳಿವು..?

ಇದನ್ನೂ ಓದಿ : Shah Rukh Khan Pathaan Movie : ಶಾರುಖ್‌ ಕೈಯಲ್ಲಿ ಬಾಲಿವುಡ್‌ ಭವಿಷ್ಯ : ಪಠಾಣ್‌ಗೆ ಜರ್ಮನಿಯಲ್ಲಿ ಸಖತ್‌ ರೆಸ್ಪಾನ್ಸ್

ಇದನ್ನೂ ಓದಿ : Sandalwood New Heroines : 2022ರಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಗೆಲುವು ಸಾಧಿಸಿದ ಹೊಸ ನಟಿ ಮಣಿಯರು

ಕೆಲ ದಿನಗಳ ಹಿಂದೆ ಸಂದರ್ಶನದಲ್ಲಿ ‘ಪರಂವ ಸ್ಟುಡಿಯೋ’ ಹೆಸರು ಹೇಳಲು ರಶ್ಮಿಕಾ ಇದೇ ರೀತಿ ಹಿಂದೇಟು ಹಾಕಿದ್ದರು. ಇದಕ್ಕೆ ಸಾಕಷ್ಟು ಅಸಮಾಧಾನ ವ್ಯಕ್ತವಾಗಿತ್ತು. ರಶ್ಮಿಕಾಗೆ ಅವ್ರದ್ದೇ ಸ್ಟೈಲ್‌ನಲ್ಲಿ ರಿಷಬ್ ಶೆಟ್ಟಿ ಸರಿಯಾಗಿ ತಿರುಗೇಟು ನೀಡಿದ್ದರು. ಒಟ್ಟಿನಲ್ಲಿ ರಶ್ಮಿಕಾ ಸಿನಿರಂಗದಲ್ಲಿ 6 ವರ್ಷ ಪೂರೈಸಿರುವುದಕ್ಕೆ ಅಭಿಮಾನಿಗಳಿಂದ ಅಭಿನಂದನೆ ವ್ಯಕ್ತವಾಗುತ್ತಿದೆ.

Rashmika Mandanna, who completed 6 years in cinema: Did you forget the movie “Kirik Party” amidst all the happiness?

Comments are closed.