Mangaluru stab case: ಜಲೀಲ್‌ ಹತ್ಯೆ ಪ್ರಕರಣ: ಮಂಗಳೂರಿನಲ್ಲಿ ಸೆಕ್ಷನ್‌ 144, ಮದ್ಯ ನಿಷೇಧ ವಿಸ್ತರಣೆ

ಮಂಗಳೂರು: (Mangaluru stab case) ಬಸವರಾಜ ಬೊಮ್ಮಾಯಿ ನೇತೃತ್ವದ ಕರ್ನಾಟಕ ಸರ್ಕಾರವು ಸಿಆರ್‌ಪಿಸಿಯ ಸೆಕ್ಷನ್ 144 ರ ಅಡಿಯಲ್ಲಿ ಮಂಗಳೂರಿನಲ್ಲಿ ನಡೆದ ಜಲೀಲ್‌ ಎನ್ನುವಾತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಪ್ರದೇಶಗಳಲ್ಲಿ ಮದ್ಯ ನಿಷೇಧ ಮತ್ತು ನಿಷೇಧಾಜ್ಞೆಗಳನ್ನು ಹೊರಡಿಸಲಾಗಿತ್ತು. ಇದೀಗ ನಿಷೇಧಾಜ್ಞೆ ಹಾಗೂ ಮಧ್ಯ ನಿಷೇಧವನ್ನು ಡಿಸೆಂಬರ್ 29 ರವರೆಗೆ ವಿಸ್ತರಿಣೆ ಮಾಡಲಾಗಿದೆ.

ಮಂಗಳೂರು (Mangaluru stab case) ನಗರ ಪೊಲೀಸ್‌ ಆಯುಕ್ತರು ಮುಂಜಾಗೃತಾ ಕ್ರಮವಾಗಿ ಡಿಸೆಂಬರ್‌ 25 ಬೆಳಿಗ್ಗೆ ಆರು ಗಂಟೆಯಿಂದ ಡಿಸೆಂಬರ್‌ 27 ರ ಹತ್ತು ಗಂಟೆಯವೆರೆಗೆ ನಿಷೇಧಾಜ್ಞೆ ಹಾಗೂ ಮದ್ಯ ನಿಷೇಧವನ್ನು ಜಾರಿ ಮಾಡಲಾಗಿತ್ತು. ಇದೀಗ ಸುರತ್ಕಲ್, ಬಜ್ಪೆ, ಕಾವೂರು ಮತ್ತು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ. ಮದ್ಯ ಮಾರಾಟದ ಮೇಲಿನ ನಿಷೇಧವನ್ನು ಡಿಸೆಂಬರ್ 29 ರಂದು ಬೆಳಿಗ್ಗೆ 10.00 ರವರೆಗೆ ವಿಸ್ತರಿಸಲಾಗಿದೆ.

ಶನಿವಾರ ರಾತ್ರಿ ಮಂಗಳೂರಿನ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾಟಿಪಳ್ಯದಲ್ಲಿ 45 ವರ್ಷದ ಜಲೀಲ್‌ ಎಂಬ ವ್ಯಕ್ತಿಯೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ಜಲೀಲ್ ತನ್ನ ಅಂಗಡಿಯಲ್ಲಿದ್ದಾಗ ಇಬ್ಬರು ವ್ಯಕ್ತಿಗಳು ಆತನ ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು. ತಕ್ಷಣ ಜಲೀಲ್‌ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರು.

ಇದನ್ನೂ ಓದಿ : Lover Murder: ಛತ್ತೀಸ್ ಗಢದಲ್ಲೊಂದು ಭೀಕರ ಹತ್ಯೆ; ಪ್ರಿಯತಮೆಯ ಬಾಯಿ ಕಟ್ಟಿ, ಸ್ಕ್ರೂ ಡ್ರೈವರ್ ನಿಂದ 51 ಬಾರಿ ಇರಿದು ಕೊಂದ ಪ್ರೇಮಿ..

(Mangaluru stab case) The Karnataka government led by Basavaraja Bommai had issued liquor ban and prohibitory orders in some areas in connection with the murder case of Jalil in Mangaluru under Section 144 of CrPC. Now the Prohibition Order and Central Prohibition have been extended till December 29.

Comments are closed.