Manipal drug case: ಝೋಮೆಟೋದಲ್ಲಿ ಊಟ ಆರ್ಡ್‌ರ್‌ ಮಾಡಿದ್ರೆ ರಾತ್ರೋರಾತ್ರಿ ಬರ್ತಾ ಇತ್ತು ಡ್ರಗ್ಸ್‌

ಉಡುಪಿ: (Manipal drug case) ಕಳೆದ ಕೆಲವು ಸಮಯಗಳ ಹಿಂದೆ ಡ್ರಗ್ಸ್‌ ವಿಚಾರದಲ್ಲಿ ಸುದ್ದಿಯಾಗಿದ್ದ ಮಣಿಪಾಲದ ಪ್ರತಿಷ್ಠಿತ ಕಾಲೇಜು ಇದೀಗ ಮತ್ತೆ ಡ್ರಗ್ಸ್‌ ಜಾಲದಲ್ಲಿ ಸಿಲುಕಿದ್ದ 42 ವಿದ್ಯಾರ್ಥಿಗಳನ್ನು ಅಮಾನತು ಮಾಡಿದೆ. ವೈದ್ಯಕೀಯ ಶಿಕ್ಷಣದಲ್ಲಿ ದೇಶ ವಿದೇಶಗಳಲ್ಲಿ ಗುರುತಿಸಿಕೊಂಡಿರುವ ಮಣಿಪಾಲದಲ್ಲಿ ಇದೀಗ ಪೊಲೀಸ್‌ ಇಲಾಖೆ ಡ್ರಗ್ಸ್‌ ವಿರುದ್ದ ಸಮರ ಸಾರುತ್ತಿದೆ.

ಮಣಿಪಾಲ ದೇಶ ವಿದೇಶದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಹೆಸರು ಮಾಡಿದೆ. ಈ ಕಾರಣಕ್ಕೆ ಹೊರ ರಾಜ್ಯ ದೇಶದಿಂದಲೂ ಇಲ್ಲಿಗೆ ಶಿಕ್ಷಣಕ್ಕೆಂದು ವಿದ್ಯಾರ್ಥಿಗಳು ಬರುತ್ತಾರೆ. ಬಹುತೇಕ ಹೊರಗಡೆಯಿಂದ ಬರುತ್ತಿರುವ ವಿದ್ಯಾರ್ಥಿಗಳು ಡ್ರಗ್ಸ್‌ ಪ್ರಕರಣದಲ್ಲಿ ಭಾಗಿಯಾಗುತ್ತಿರುವುದು ಇತ್ತೀಚೆಗೆ ಗಮನಕ್ಕೆ ಬಂದಿದೆ. ಕಳೆದ ಎರಡು ಮೂರು ತಿಂಗಳಲ್ಲಿ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹೆ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿತ್ತು. ಇದಲ್ಲದೇ ಮಣಿಪಾಲ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ಡ್ರಗ್ಸ್‌ ಪ್ರಕರಣದಲ್ಲಿ ಭಾಗಿಯಾದ ಹಲವು ವೈದ್ಯಕೀಯ ವಿದ್ಯಾರ್ಥಿಗಳನ್ನು ಹಾಗೂ ವೈದ್ಯರನ್ನು ಅಮಾನತುಗೊಳಿಸಲಾಗಿತ್ತು.

ಹೀಗಾಗಿ ವಿದ್ಯಾಸಂಸ್ಥೆಯು ಪೊಲೀಸ್‌ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಇಲಾಖೆ ಮನವಿ ಮಾಡಿತ್ತು. ಈ ಹಿನ್ನಲೆಯಲ್ಲಿ ಡ್ರಗ್ಸ್‌ ಪ್ರಕರಣದಲ್ಲಿ ಭಾಗಿಯಾದ 42 ವಿದ್ಯಾರ್ಥಿಗಳನ್ನು ಒಂದು ತಿಂಗಳ ಕಾಲ ಅಮಾನತು ಮಾಡಲಾಗಿದೆ. ಇನ್ನೂ ಇಲ್ಲಿ ಡ್ರಗ್ಸ್‌ ಪೆಡ್ಲಿಂಗ್‌ ವಿಚಾರದಲ್ಲಿ ಅನೇಕ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.

ಝೋಮೆಟೋದಲ್ಲಿ ಊಟ ಆರ್ಡ್‌ರ್‌ ಮಾಡಿದ್ರೆ ಬರ್ತಾ ಇತ್ತು ಡ್ರಗ್ಸ್‌
ಹೌದು..ಜೊಮೋಟೋದಲ್ಲಿ ಊಟ ಆರ್ಡರ್‌ ಮಾಡಿದರೆ ಅದರ ಜೊತೆಗೆ ಡ್ರಗ್ಸ್‌ ಕೂಡ ಬರುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಓರ್ವ ಡೆಲಿವರಿ ಬಾಯ್‌ ನನ್ನು ಬಂಧಿಸಿದ್ದಾರೆ. ಸ್ಮಾರ್ಟ್‌ ವಾಚ್‌ನ ಪೌಚ್‌ ಬಾಕ್ಸ್‌ ಒಳಗೆ ಎಲ್‌ ಎಸ್‌ ಡ ಪೇಪರ್‌ , ಡ್ರಗ್ಸ್‌ ಸಾಗಾಟ ಮಾಡಲಾಗುತ್ತಿತ್ತು.

ಇದನ್ನೂ ಓದಿ : Car-bike accident: ಬೈಕ್‌ಗೆ ಏಸ್‌ಯುವಿ ಕಾರು ಢಿಕ್ಕಿ: 4 ಮಂದಿ ಸಾವು, ಇಬ್ಬರಿಗೆ ಗಾಯ

ಇನ್ನೂ ಡ್ರಗ್ಸ್‌ ವಿಚಾರವಾಗಿ ರೈಡ್‌ ಮಾಡಲು ಹೋದ ಪೊಲೀಸರಿಗೆ ಸಿಕ್ಕಿದ್ದು ರಾಶಿ ರಾಶಿ ಕಾಂಡೋಮ್‌. ಯುವಕ ಯುವತಿಯರು ಡ್ರಗ್ಸ್‌ ಸೇವಿಸಿ, ನಂತರ ಲೈಂಗಿಕ ಕ್ರೀಯೆ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಮಂಗಳೂರು, ಕೇರಳ, ಗೋವಾ ಹೀಗೆ ಕೆಲವು ಕಡೆಗಳಿಂದ ಮಾಣಿಪಾಲ್‌ ಗೆ ಡ್ರಗ್ಸ್‌ ಸಪ್ಲೈ ಆಗುತ್ತಿದ್ದದ್ದು ತನಿಖೆ ವೇಳೆ ಬಯಲಾಗಿದೆ. ಇದಲ್ಲದೇ ವಾರದ ಕೊನೆಯಲ್ಲಿ ವಿದ್ಯಾರ್ಥಿಗಳೇ ಗೋವಾಗೆ ಹೋಗಿ ಡ್ರಗ್ಸ್‌ ತರುತ್ತಿದ್ದರು ಎಂಬ ಮಾಹಿತಿ ಕೂಡ ಬಯಲಾಗಿದೆ.

Manipal drug case: If you order food on Zomato, drugs will be delivered overnight

Comments are closed.