Mobile cremation begins: ಕುಂದಾಪುರದಲ್ಲಿ ಮೊದಲ ಸಂಚಾರಿ ಚಿತಾಗಾರ ಆರಂಭ

ಕುಂದಾಪುರ: (Mobile cremation begins) ಮುದೂರು ಗ್ರಾಮೀಣ ಭಾಗದ ಜನರ ಶವ ಸಂಸ್ಕಾರದ ಸಮಸ್ಯೆಗಳನ್ನು ಪರಿಹರಿಸಲು ನಿರ್ಧರಿಸಿದ ಮುದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು, ಕರ್ನಾಟಕದ ಮೊದಲ ಸಂಚಾರಿ ಚಿತಾಗಾರವನ್ನು ಉಡುಪಿ ಜಿಲ್ಲೆಯ ಕುಂದಾಪುರದ ಮುದೂರಿನಲ್ಲಿ ಆರಂಭಿಸಿರುವುದಾಗಿ ಸಂಘದ ಅಧ್ಯಕ್ಷ ವಿಜಯ ಶಾಸ್ತ್ರಿ ಹಾಗೂ ಸಿಇಒ ಪ್ರಭಾಕರ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುದೂರು ಗ್ರಾಮದಲ್ಲಿ ಸರಿಸುಮಾರು ಆರುನೂರು ಮನೆಗಳಿದ್ದು, ಈ ಮನೆಗಳಲ್ಲಿ ಯಾರಾದರೂ ಮೃತಪಟ್ಟರೆ ಅವರ ಪಾರ್ಥೀವ ಶರೀರವನ್ನು ಕುಂದಾಪುರದ ಸ್ಮಶಾನಕ್ಕೆ ಕೊಂಡೊಯ್ಯಬೇಕಿದೆ. ಇದು ಮುದೂರಿನಿಂದ ಸರಿಸುಮಾರು ನಲವತ್ತು ಕಿ.ಮೀ. ಇದ್ದು, ಗ್ರಾಮಸ್ಥರಿಗೆ ಇದು ಸಂಕಟವಾಗಿತ್ತು.

ಗ್ರಾಮಸ್ಥರ ಸಂಕಟವನ್ನು ಅರ್ಥೈಸಿಕೊಂಡ ಮುದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಕೇರಳದ ಸಂಸ್ಥೆಯೊಂದರಿಂದ 5.8 ಲಕ್ಷ ರೂಪಾಯಿ ವೆಚ್ಚದ ಮೊಬೈಲ್‌ ಸ್ಮಶಾನವನ್ನು ಖರೀದಿಸಿದ್ದು, ಎರಡು ಗಂಟೆಯೊಳಗೆ ಮೃತದೇಹಗಳು ಸುಟ್ಟು ಬೂದಿಯಾಗುತ್ತವೆ. ಇದರಲ್ಲಿ ಹತ್ತು ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್‌ ಬಳಸಿ ಮೃತದೇಹವನ್ನು ಸುಡಲಾಗುತ್ತದೆ. ವಿನಂತಿಯ ಮೇರೆಗೆ ಮೃತರ ಮನೆಗೆ ವಾಹನವನ್ನು ಕಳುಹಿಸಿಕೊಡಲಾಗುತ್ತಿದ್ದು, ಮೃತದೇಹವನ್ನು ಸುಡಲು ಸಹಾಯಕಾರಿಯಾಗಿದೆ.

ಇನ್ನೂ ಈ ಸೇವೆಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಸ್ಮಶಾನದೊಳಗೆ ಪಾರ್ಥೀವ ಶರೀರವನ್ನು ಇಡುವ ಮೂಲಕ ಮಾಡಬೇಕಾದ ಎಲ್ಲಾ ಸಾಂಪ್ರದಾಯಿಕ ಆಚರಣೆಗಳನ್ನು ಕೈಗೊಳ್ಳಬಹುದು. ಮೃತದೇಹವನ್ನು ಸುಡುವಾಗ ಯಾವುದೇ ಹೊಗೆ ಅಥವಾ ದುರ್ವಾಸನೆ ಹೊರಹೊಮ್ಮುವುದಿಲ್ಲ. ಬದಲಾಗಿ ಅಧಿಕ ಒತ್ತಡದ ಎಲ್‌ಪಿಜಿ ಸಿಲಿಂಡರ್‌ನಿಂದ ಒತ್ತಡಕ್ಕೊಳಗಾದ ಗಾಳಿಯೂ ದೇಹವನ್ನು ಸುಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : Construction of a new chariot: 400 ವರ್ಷಗಳ ಬಳಿಕ ಕೊಲ್ಲೂರು ಮೂಕಾಂಬಿಕಾ ಸನ್ನಿಧಿಗೆ ಹೊಸ ರಥ ನಿರ್ಮಾಣ

ಇದನ್ನೂ ಓದಿ : ದಾರಿ ತಪ್ಪಿಸಿದ ಮಾರ್ಗಸೂಚಿ : ಮಣಿಪಾಲದಲ್ಲೊಂದು ದಾರಿ ತಪ್ಪಿಸುವ ಬೋರ್ಡ್

ಇದನ್ನೂ ಓದಿ : Drunk and Drive: ಉಡುಪಿಯಲ್ಲಿ ಕುಡಿದ ಮತ್ತಿನಲ್ಲಿ ಟೆಂಪೋ ಚಲಾಯಿಸಿದ ಚಾಲಕ: ಬೈಕ್ ಸವಾರನಿಂದ ಕಪಾಳಮೋಕ್ಷ

ಉಕ್ಕಿನಿಂದ ತಯಾರಿಸ್ಪಟ್ಟ ಈ ಮೊಬೈಲ್‌ ಸ್ಮಶಾನವು ಆರು ಟಡಿ ಉದ್ದವಿದ್ದು, ಇದನ್ನು ಯಾರ ಮನೆ ಬಾಗಿಲಿಗೆ ಬೇಕಾದರೂ ಟ್ರಕ್‌ ನಲ್ಲಿ ಸಾಗಿಸಬಹುದು.

Mobile cremation begins: First mobile cremation begins in Kundapur

Comments are closed.