Murder-5 arrested: ತಂದೆ, ಸಹೋದರನಿಂದಲೇ ಮೆಡಿಕಲ್‌ ವಿದ್ಯಾರ್ಥಿನಿಯ ಕೊಲೆ: ಐವರು ಅರೆಸ್ಟ್‌

ನಾಂದೇಡ್:‌ (Murder-5 arrested) 22 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ತಂದೆ, ಸಹೋದರ ಮತ್ತು ಇತರ ಮೂವರು ಪುರುಷ ಸಂಬಂಧಿಕರು ಕತ್ತು ಹಿಸುಕಿ ಕೊಂದು ಸುಟ್ಟು ಹಾಕಿರುವ ಘಟನೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ನಡೆದಿದೆ. ಶುಭಾಂಗಿ ಜೋಗದಂದ್ (22 ವರ್ಷ) ಮೃತ ವಿದ್ಯಾರ್ಥಿನಿ.

ಸಂತ್ರಸ್ತ ಮಹಿಳೆ ಬ್ಯಾಚುಲರ್ ಆಫ್ ಹೋಮಿಯೋಪತಿಕ್ ಮೆಡಿಸಿನ್ ಮತ್ತು ಸರ್ಜರಿ (ಬಿಎಚ್‌ಎಂಎಸ್) ವಿಭಾಗದಲ್ಲಿ ಮೂರನೇ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಮನೆಯವರು ಆಕೆಯ ಮದುವೆಯನ್ನು ನಿಶ್ಚಯಿಸಿದ್ದರು. ಆದರೆ, ಆಕೆ ತನ್ನ ಗ್ರಾಮದ ಮತ್ತೊಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದು, ಈ ವಿಚಾರವನ್ನು ಮನೆಯವರು ಮದುವೆಯಾಗಲು ಆಯ್ಕೆ ಮಾಡಿದ ವ್ಯಕ್ತಿಗೆ ತಿಳಿಸಿದ್ದಾಳೆ. ಇದರಿಂದಾಗಿ ಸಂತ್ರಸ್ತೆಯ ಕುಟುಂಬದವರು ಅಸಮಾಧಾನಗೊಂಡಿದ್ದರು.

ಅಸಾಮಾಧಾನಗೊಂಡಿದ್ದ ಸಂತ್ರಸ್ತೆಯ ತಂದೆ ಹಾಗೂ ಸಹೋದರ, ಚಿಕ್ಕಪ್ಪ ಮತ್ತು ಸೋದರಸಂಬಂಧಿಗಳು ಅವಳನ್ನು ರಾತ್ರೋರಾತ್ರಿ ಜಮೀನಿಗೆ ಕರೆದೊಯ್ದಿದ್ದಾರೆ. ಅಲ್ಲಿ ಆಕೆಯ ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಉಸಿರುಗಟ್ಟಿಸಿ ಕೊಂದಿದ್ದಾರೆ. ನಂತರ ಸಾಕ್ಷ್ಯವನ್ನು ನಾಶ ಪಡಿಸಲು ಮೃತದೇಹಕ್ಕೆ ಬೆಂಕಿ ಹಚ್ಚಿ ಸುಟ್ಟು ಆಕೆಯ ಅವಶೇಷಗಳನ್ನು ನದಿಯಲ್ಲಿ ಎಸೆದಿದ್ದಾರೆ.

ಮುಂಬೈನಿಂದ ಸುಮಾರು 600 ಕಿಮೀ ದೂರದಲ್ಲಿರುವ ಲಿಂಬಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಪಿಂಪ್ರಿ ಮಹಿಪಾಲ್ ಗ್ರಾಮದಲ್ಲಿ ಈ ಕೃತ್ಯ ನಡೆದಿದ್ದು, ಹತ್ಯೆಗೆ ಸಂಬಂಧಿಸಿದಂತೆ ಮೃತ ಮಹಿಳೆಯ ತಂದೆ, ಸಹೋದರ, ಚಿಕ್ಕಪ್ಪ ಸೇರಿದಂತೆ ಐವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದೀಗ ಆರೋಪಿಗಳನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಬಂಧಿಸಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : Building Collapses In Chennai: ಚೆನ್ನೈನಲ್ಲಿ ಕಟ್ಟಡ ಕುಸಿತ: ಓರ್ವ ಮಹಿಳೆ ಸಾವು

ಚೆನ್ನೈನಲ್ಲಿ ಕಟ್ಟಡ ಕುಸಿತ: ಓರ್ವ ಮಹಿಳೆ ಸಾವು

ಚೆನ್ನೈ: ಹಳೆಯ ಕಟ್ಟಡವೊಂದು ಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಇನ್ನೋರ್ವ ಮಹಿಳೆ ಗಾಯಗೊಂಡಿರುವ ಘಟನೆ ಚೆನ್ನೈನ ಅಣ್ಣಾಸಲೈನಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಪ್ರಿಯಾ ಎಂದು ಗುರುತಿಸಲಾಗಿದೆ. ಚೆನ್ನೈನ ಜೆಮಿನಿ ಬ್ರಿಡ್ಜ್ ಬಳಿ ಕ್ರೀಮ್ಸ್ ರಸ್ತೆ ಮತ್ತು ಅಣ್ಣಾಸಲೈಗೆ ಹೋಗುವ ರಸ್ತೆಯಲ್ಲಿ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ : 3 year old boy death: ಪತಿ ಪತ್ನಿಯ ಜಗಳಕ್ಕೆ ಬಲಿಯಾಯ್ತು 3 ವರ್ಷದ ಕಂದ

ಇದನ್ನೂ ಓದಿ : Auto driver murder: ಚಾಕುವಿನಿಂದ ಇರಿದು ಆಟೋ ಚಾಲಕನ ಕೊಲೆಗೈದ ಪ್ರಯಾಣಿಕರು

Murder-5 arrested: Murder of medical student by father, brother: Five arrested

Comments are closed.