School bus accident ಉಡುಪಿ: ಶಾಲಾ ಬಸ್‌ ಚಾಲಕನಿಗೆ ಬಸ್‌ ಚಾಲನೆ ವೇಳೆ ಹೃದಯಾಘಾತ : ಚಾಲಕನ ಸಮಯ ಪ್ರಜ್ಷೆಯಿಂದ ವಿದ್ಯಾರ್ಥಿಗಳು ಪಾರು

ramavara School bus accident ಉಡುಪಿ : ಶಾಲಾ ಬಸ್‌ ಚಾಲನೆ ಮಾಡುತ್ತಿದ್ದ ವೇಳೆಯಲ್ಲಿ ಚಾಲಕನಿಗೆ ಹೃದಯಾಘಾತ ವಾಗಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳು ಅಪಾಯದಿಂದ ಪಾರಾದ ಘಟನೆ ಉಡುಪಿ ನಗರದ ಪೆರಂಪಳ್ಳಿಯಲ್ಲಿ ನಡೆದಿದೆ.

Bramavara School bus accident ಉಡುಪಿ : ಶಾಲಾ ಬಸ್‌ ಚಾಲನೆ ಮಾಡುತ್ತಿದ್ದ ವೇಳೆಯಲ್ಲಿ ಚಾಲಕನಿಗೆ ಹೃದಯಾಘಾತ ವಾಗಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳು ಅಪಾಯದಿಂದ ಪಾರಾದ ಘಟನೆ ಉಡುಪಿ ನಗರದ ಪೆರಂಪಳ್ಳಿಯಲ್ಲಿ ನಡೆದಿದೆ. ಚಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

udupi news Bramavara little rock indian school bus driver alwin heart attack School bus accident Students safe
Image Credit to Original Source

ಆಲ್ವಿನ್‌ ಎಂಬವರೇ ಹೃದಯಾಘಾತಕ್ಕೆ ಒಳಗಾದ ಬಸ್‌ ಚಾಲಕ. ಬ್ರಹ್ಮಾವರದ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯಿಂದ 66 ಮಕ್ಕಳನ್ನು ಹತ್ತಿಸಿಕೊಂಡು ಶಾಲೆಯಿಂದ ಹೊರಟ್ಟಿದ್ದ ಬಸ್‌ ಪೆರಂಪಳ್ಳಿಗೆ ಬರುತ್ತಿದ್ದ ವೇಳೆಯಲ್ಲಿ ಚಾಲಕ ಆಲ್ವಿನ್‌ ಅವರಿಗೆ ಹೃದಯಾಘಾತವಾಗಿದೆ. ಬಸ್‌ ಚಾಲಕ ಆಲ್ವಿನ್‌ ತನಗೆ ಹೃದಯಾಘಾತ ಆಗುತ್ತಿದ್ದಂತೆಯೇ ಕೂಡಲೇ ಬಸ್ಸನ್ನು ರಸ್ತೆಯ ಪಕ್ಕಕ್ಕೆ ನಿಲ್ಲಿಸಿದ್ದಾನೆ.

ಇದನ್ನೂ ಓದಿ : ರಾಜ್ಯ ಸರ್ಕಾರ, ಬಿಬಿಎಂಪಿಯ ಮತ್ತೊಂದು ಎಡವಟ್ಟು: ಶಿಕ್ಷಕರ ಆಯ್ಕೆ ಹೊಣೆ ಸೆಕ್ಯೂರಿಟಿ ಏಜೆನ್ಸಿಗೆ

ಬಸ್ಸಿನಲ್ಲಿದ್ದ ಸಹಾಯಕ ಸಿಬ್ಬಂದಿ ಅವರು ಮತ್ತೊಂದು ವಾಹನದಲ್ಲಿ ಚಾಲಕ ಆಲ್ವಿನ್‌ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸದ್ಯ ಆಲ್ವಿನ್‌ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಅಪಘಾತ ನಡೆಯುವ ವೇಳೆಯಲ್ಲಿ ಬಸ್ಸಿನಲ್ಲಿ ಒಟ್ಟು 60  ಮಂದಿ ವಿದ್ಯಾರ್ಥಿಗಳಿದ್ದರು. ಬಸ್ಸನ್ನು ಚಾಲಕ ಎಡಕ್ಕೆ ತಿರುಗಿಸಿದ ಹಿನ್ನೆಲೆಯಲ್ಲಿ ಬಾರೀ ಅನಾಹುತವೊಂದು ತಪ್ಪಿದಂತಾಗಿದೆ.

udupi news Bramavara little rock indian school bus driver alwin heart attack School bus accident Students safe
Image Credit to Original Source

ಇದನ್ನೂ ಓದಿ : Karnataka New Schools : ಹೊಸ ಶಾಲೆಗಳಿಗೆ ಇನ್ನಿಲ್ಲದ ಬೇಡಿಕೆ: ಅನುಮತಿ ಕೋರಿ ಸಲ್ಲಿಕೆಯಾಗಿದೆ ಸಾವಿರಾರು ಅರ್ಜಿ

ಬಸ್ಸಿನ ಮುಂಭಾಗಕ್ಕೆ ಸ್ವಲ್ಪ ಪ್ರಮಾಣದಲ್ಲಿ ಹಾನಿಯಾಗಿದ್ದು, ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ : Noni Juice : ನೋನಿ ಜ್ಯೂಸ್‌ ಕುಡಿಯೋದು ಅಪಾಯಕಾರಿ : ಮಧುಮೇಹ ನಿಯಂತ್ರಣಕ್ಕೆ ಬರೋದು ನಿಜನಾ ?

udupi news Bramavara little rock indian school bus driver alwin heart attack School bus accident Students safe

Comments are closed.