New year dharma dangal: ಹೊಸ ವರ್ಷಕ್ಕೆ ಹೊಸ ಧರ್ಮ ದಂಗಲ್ : ‌ ನ್ಯೂ ಇಯರ್‌ ಪಾರ್ಟಿಯಲ್ಲಿ ಮುಸ್ಲಿಂ ಯುವಕರಿಗೆ ನೋ ಎಂಟ್ರಿ

ಮಂಗಳೂರು: (New year dharma dangal) ಇನ್ನೇನು 2022 ಕಳೆದು 2023 ಕ್ಕೆ ಕಾಲಿಡಲಿದ್ದೇವೆ. ಎಲ್ಲೆಡೆ ಹೊಸ ವರ್ಷಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಇದೇ ವೇಳೆ ಹೊಸ ವರ್ಷದ ಹೆಸರಿನಲ್ಲಿ ಮಂಗಳೂರಿನಲ್ಲಿ ಇನ್ನೊಂದು ಹೊಸ ಧರ್ಮ ದಂಗಲ್‌ ಪ್ರಾರಂಭವಾಗಿದ್ದು, ಹೊಸ ವರ್ಷದ ಪಾರ್ಟಿಗೆ ಮುಸ್ಲಿಂ ಯುವಕರು ಬರಬಾರದೆಂದು ಭಜರಂಗದಳದ ಜಿಲ್ಲಾ ಸಂಚಾಲಕ ಪುನಿತ್‌ ಅತ್ತಾವರ ವಾರ್ನಿಂಗ್‌ ನೀಡಿದ್ದಾರೆ.

ಡಿ. ಕೊನೆಯ ದಿನ ನ್ಯೂ ಇಯರ್‌ (New year dharma dangal) ಹೆಸರಲ್ಲಿ ಪಾರ್ಟಿಗಳನ್ನು ಆಯೋಜನೆ ಮಾಡಲಾಗಿದ್ದು, ಪಾರ್ಟಿಗಳನ್ನು ವಿರೋಧಿಸಿ ಭಜರಂಗದಳ ಮಂಗಳೂರು ಕಮಿಷನರ್‌ ಗೆ ಮನವಿ ಸಲ್ಲಿಸಿದೆ. “ಪಾಶ್ಚಿಮಾತ್ಯ ಸಂಸ್ಕೃತಿಯ ಪಾರ್ಟಿಗಳಿಗೆ ನಮ್ಮಲ್ಲಿ ಅವಕಾಶ ಕೊಡಬಾರದು. ಜಾಮಾತ್‌ ಮತ್ತು ಇಸ್ಲಾಂ ಪ್ರಕಾರ ಅವರುಗಳು ಪಾರ್ಟಿಗೆ ಹೋಗುವಂತಿಲ್ಲ” ಎಂದು ಭಜರಂಗದಳದ ಜಿಲ್ಲಾ ಸಂಚಾಲಕ ಪುನಿತ್‌ ಅತ್ತಾವರ ಹೇಳಿಕೆ ನೀಡಿದ್ದಾರೆ.

“ದೇಶದ ಕಾನೂನಿಗೆ ಮುಸ್ಲಿಂ ಯುವಕರು ಬೆಲೆ ಕೊಡುವುದಿಲ್ಲ. ಅವರು ಇಸ್ಲಾಂ ಅನ್ನು ಒಪ್ಪುತ್ತಾರೆ. ಹೊಸ ವರ್ಷದ ಪಾರ್ಟಿಯ ನೆಪದಲ್ಲಿ ಮಂಗಳೂರಿನ ಪಬ್‌ ಗಳಿಗೆ ಬರುತ್ತಾರೆ. ಹಲವಾರು ದುಷ್ಕ್ರತ್ಯದ ಸಂಚನ್ನು ನಡೆಸುತ್ತಾರೆ. ಡ್ರಗ್ಸ್‌, ಸೆಕ್ಸ್‌ ಜಿಹಾದ್‌, ಲವ್‌ ಜಿಹಾದ್‌ ಈ ರೀತಿಯ ಸಂಚನ್ನು ನ್ಯೂ ಇಯರ್‌ ಪಾರ್ಟಿಗಳಲ್ಲಿ ನಡೆಸುತ್ತಾರೆ. ಹೀಗಾಗಿ ನಮ್ಮ ಹಿಂದೂ ಯುವತಿಯರನ್ನು ಕಾಪಾಡುವ ನಿಟ್ಟಿನಲ್ಲಿ ಪಾರ್ಟಿಗಳಿಗೆ ಮುಸ್ಲಿಂ ಯುವಕರು ಬರಬಾರದು” ಎಂದು ಪುನಿತ್‌ ಅತ್ತಾವರ ಮುಸ್ಲಿಂ ಯುವಕರಿಗೆ ವಾರ್ನಿಂಗ್‌ ನೀಡಿದ್ದಾರೆ.

ಭಜರಂಗದಳದ ವಿರುದ್ದ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಬ್ದುಲ್‌ ಆಕ್ರೋಶ
ಭಜರಂಗದಳ ಮುಸ್ಲಿಂ ಯುವಕರನ್ನು ಪಾರ್ಟಿಗೆ ಬರಬಾರದು ಎಂದು ಹೇಳಿಕೆ ನೀಡಿರುವುದರ ವಿರುದ್ದ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಬ್ದುಲ್‌ ಆಕ್ರೋಶ ವ್ಯಕ್ತಪಡಿಸಿದ್ದು, “ಇವರ್ಯಾರು ಕೇಳುವುದಕ್ಕೆ, ಭಜರಂಗದಳ ಅನ್ನೋರು ಯಾರು?.. ದಕ್ಷಿಣ ಕನ್ನಡದಲ್ಲಿ ಸರಕಾರ ಇಲ್ಲ. ಕಾನೂನು ಸುವ್ಯವಸ್ಥೆ ಸರಿಯಿಲ್ಲ. ಬಹಿರಂಗವಾಗಿ ಇಲಾಖೆಯ ಅಸ್ತಿತ್ವವನ್ನೇ ಪ್ರಶ್ನೆ ಮಾಡಲಾಗುತ್ತಿದೆ” ಎಂದು ಭಜರಂಗದಳದ ವಿರುದ್ದ ಅಬ್ದುಲ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Assault by students: ಅಯ್ಯಪ್ಪ ಮಾಲಾಧಾರಿಗೆ ವಿದ್ಯಾರ್ಥಿಗಳಿಂದ ಹಲ್ಲೆ: ಮಾಲೆ ಧರಿಸಿ ಶಾಲೆಗೆ ಬರದಂತೆ ಶಿಕ್ಷಕರಿಂದ ಸೂಚನೆ

ಇದನ್ನೂ ಓದಿ : ಶಿಕ್ಷಕರು ಮಕ್ಕಳೊಂದಿಗೆ ಸೂಕ್ಷ್ಮವಾಗಿ ವರ್ತಿಸಿ : ಅರಿವು ಕಾರ್ಯಕ್ಕೆ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಸೂಚನೆ

ದೇಶದ ಸಂವಿಧಾನ ಎಲ್ಲರಿಗೂ ಸ್ವಾತಂತ್ರ್ಯ ಕೊಟ್ಟಿದೆ.‌ ಸಂವಿಧಾನ ಕೊಟ್ಟ ಸ್ವಾತಂತ್ರ್ಯ ಕಾಪಾಡುವ ಜವಾಬ್ದಾರಿ ಪೊಲೀಸರದ್ದು‌. ಕಾನೂನು ಸುವ್ಯವಸ್ಥೆ ಹದಗೆಡಿಸೋರ ವಿರುದ್ದ ಕೇಸ್ ದಾಖಲಿಸಿ. ಈ ರೀತಿ ಬಹಿರಂಗವಾಗಿ ಥ್ರೆಡ್ ಕೊಟ್ಟವರನ್ನ ಬಂಧಿಸಿ. ಎಲ್ಲಾ ಪಬ್, ಕ್ಲಬ್ ಗಳಿಗೆ ಹೋಗಿ ಬೆದರಿಕೆ ಹಾಕಿದವರ ಬಗ್ಗೆ ಮಾಹಿತಿ ಪಡೆಯಲಿ. ಕಾನೂನು ಸುವ್ಯವಸ್ಥೆ ವ್ಯಾಪ್ತಿಯಲ್ಲಿ ಎಲ್ಲಾ ಕಾರ್ಯಕ್ರಮಕ್ಕೂ ಅವಕಾಶ ಕೊಡಿ ಎಂದಿದ್ದಾರೆ. ‌

(New year dharma dangal) What else are we going to pass 2022 and enter 2023. Preparations for the new year are going on everywhere. Meanwhile, another new Dharma Dangal has started in Mangalore in the name of New Year, Bajrang Dal district coordinator Punit Attava has warned that Muslim youths should not come to the New Year party.

Comments are closed.