Terrible Accident : ಎರಡು ಶಾಲಾ ಬಸ್‌ಗಳ ನಡುವೆ ಭೀಕರ ಅಪಘಾತ : 15 ವಿದ್ಯಾರ್ಥಿಗಳು ಬಲಿ

ನೋನಿ : ಮಣಿಪುರ ರಸ್ತೆಯೊಂದರಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಹೊತ್ತ ಎರಡು ವಾಹನಗಳ ಭೀಕರ ಅಪಘಾತಕ್ಕೆ (Terrible Accident)ಒಳಗಾದ ಘಟನೆ ಸಂಭವಿಸಿದೆ. ಈ ದುರ್ಘಟನೆಯಿಂದಾಗಿ ಕನಿಷ್ಠ 15 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ವರದಿ ಆಗಿದೆ.

ಲಾಂಗ್ಸಾಯ್‌ ಟುಬುಂಗ್‌ ಗ್ರಾಮದ ಬಳಿ ಬಿಷ್ಣುಪುರ್‌ ಹಾಗೂ ಖೌಪುಮ್‌ ರಸ್ತೆಯಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಹೊತ್ತು ಸಾಗುತ್ತಿದ್ದ ಎರಡು ಬಸ್‌ಗಳ ಅಪಘಾತ ಸಂಭವಿಸಿದೆ. ಯರಿಪೋಕ್‌ನ ತಂಬಲ್ನು ಹೈಯರ್‌ ಸೆಕೆಂಡರಿ ಶಾಲೆಯಿಂದ ವಿದ್ಯಾರ್ಥಿಗಳನ್ನು ಹೊತ್ತ ಎರಡು ಬಸ್‌ಗಳು ಅಧ್ಯಯನ ಪ್ರವಾಸಕ್ಕಾಗಿ ಖೌಪುಮ್‌ ಕಡೆಗೆ ಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ.

ಈ ಅಪಘಾತದಲ್ಲಿ ಶಾಲಾ ಬಸ್‌ನಲ್ಲಿದ್ದ ವಿದ್ಯಾರ್ಥಿಗಳ ಪೈಕಿಯಲ್ಲಿ ಕನಿಷ್ಠ 15 ಜನ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಹಾಗೇ ಹಲವಾರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೆ ಸಾವಿನ ಸಂಖ್ಯೆ ಬಗ್ಗೆ ಇನ್ನೂ ದೃಢಪಟ್ಟಿಲ್ಲ ಎಂದು ತಿಳಿಸಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಇಂಫಾಲ್‌ನ ಮೆಡಿಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟು 22 ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಕಾಲೇಜು ಚುನಾವಣೆ ವೇಳೆ ಘರ್ಷಣೆ : ಇಂಜಿನಿಯರಿಂಗ್ ವಿದ್ಯಾರ್ಥಿಗಳ ನಡುವೆ ಮಾರಾಮಾರಿ

ಇದನ್ನೂ ಓದಿ : Assault by students: ಅಯ್ಯಪ್ಪ ಮಾಲಾಧಾರಿಗೆ ವಿದ್ಯಾರ್ಥಿಗಳಿಂದ ಹಲ್ಲೆ: ಮಾಲೆ ಧರಿಸಿ ಶಾಲೆಗೆ ಬರದಂತೆ ಶಿಕ್ಷಕರಿಂದ ಸೂಚನೆ

ಇದನ್ನೂ ಓದಿ : Bengaluru Murder Case: ಚಾಕುವಿನಿಂದ ಇರಿದು ನಡುರಸ್ತೆಯಲ್ಲಿ ಯುವಕನ ಬರ್ಬರ ಹತ್ಯೆ

ಶಾಲಾ ಬಸ್‌ನಲ್ಲಿ ಕುಳಿತು ಅಧ್ಯಯನದ ಪ್ರವಾಸಕ್ಕೆಂದು ತೆರಳುತ್ತಿದ್ದ ಬಸ್‌ ಅಪಘಾತ ನಡೆದ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಗಾಯಕ್ಕೊಳಗಾದ ವಿದ್ಯಾರ್ಥಿಗಳು ಚಿಕಿತ್ಸೆ ಪಡೆದಿದ್ದು, ಮೃತಪಟ್ಟ ವಿದ್ಯಾರ್ಥಿಗಳ ಮೃತದೇಹವನ್ನು ಸಂಬಂಧಪಟ್ಟ ಕುಟುಂಬದವರಿಗೆ ಒಪ್ಪಿಸುವ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Ballari Road Accident : ಬಸ್‌ ಹರಿದು ಮೂವರು ಹಾಸ್ಟೇಲ್‌ ವಿದ್ಯಾರ್ಥಿಗಳ ಸಾವು
ಬಳ್ಳಾರಿ : ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರಿಗೆ ಸಂಸ್ಥೆಯ ಬಸ್‌ ಹರಿದು ಮೂವರು ಹಾಸ್ಟೆಲ್‌ ವಿದ್ಯಾರ್ಥಿಗಳು ಸಾವನ್ನಪ್ಪಿರುವ ದುರ್ಘಟನೆ (Ballari Road Accident) ಸಂಭವಿಸಿದೆ. ಡಿಸೆಂಬರ್‌ 18ರ ತಡರಾತ್ರಿ ಮೂವರೂ ಯುವಕರು ರಸ್ತೆ ದಾಟುವಾಗ ಅವರ ಮೇಲೆ ಬಸ್‌ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿ ಆಗಿದೆ.

ಈ ರಸ್ತೆ ಅಪಘಾತದಲ್ಲಿ ಮೃತಪಟ್ಟವರು ಮುರುಡಿ ನಿವಾಸಿ ಶಂಕರ್ 18ವರ್ಷ, ಎಮ್ಮಿಗನೂರಿನ ಕನಕರಾಜ್‌ 19ವರ್ಷ ಹಾಗೂ ನಾಗೇನಹಳ್ಳಿಯ ಹೊನ್ನೂರ 22ವರ್ಷ ಎಂದು ಗುರುತಿಸಲಾಗಿದೆ. ಈ ಮೂವರು ಯುವಕರು ಬಳ್ಳಾರಿ ನಗರದ ಹಾಸ್ಟೇಲ್‌ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಬಸ್‌ ಬೆಂಗಳೂರಿನಿಂದ ಜೇವರ್ಗಿಗೆ ಹೊರಟಿದ್ದು, ಅದೇ ಸಂದರ್ಭದಲ್ಲಿ ಮೂವರು ಯುವಕರು ರಸ್ತೆ ದಾಟುತ್ತಿದ್ದು, ಅವರ ಮೇಲೆ ಬಸ್‌ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಧ್ಯರಾತ್ರಿ ವೇಳೆಯಲ್ಲಿ ವಿದ್ಯಾರ್ಥಿಗಳು ತಡರಾತ್ರಿ ಅಲ್ಲಿ ಬಂದಿರುವ ಬಗ್ಗೆ ಹಲವಾರು ಅನುಮಾನಗಳು ಹುಟ್ಟಿಕೊಂಡಿವೆ. ಅಷ್ಟೇ ಅಲ್ಲದೇ ಕಳೆದ ಎರಡು ದಿನಗಳಿಂದ ಮೂವರು ಯುವಕರು ವಸತಿ ಗೃಹ ತೊರೆದಿದ್ದಾರೆ ಎಂದು ತಿಳಿದು ಬಂದಿದೆ. ತಾವು ತಂಗಿದ್ದ ಹಾಸ್ಟೇಲ್‌ನ್ನು ತೊರೆದು ಈ ಮೂವರೂ ವಿದ್ಯಾರ್ಥಿಗಳು ಎಲ್ಲಿಗೆ ಹೋರಟಿದ್ದಾರೆ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಈ ಕುರಿತು ಪೊಲೀಸ್‌ ಅಧಿಕಾರಿಗಳ ಹೆಚ್ಚಿನ ತನಿಖೆಯ ಮೂಲಕ ತಿಳಿಯಬೇಕಾಗಿದೆ.

Terrible accident between two school buses: 15 students killed

Comments are closed.