ಆನ್‌ಲೈನ್‌ ಕೆಲಸ ನೀಡುವುದಾಗಿ ಬ್ರಹ್ಮಾವರದ ಯುವಕನಿಗೆ ಗೂಗಲ್ ಪೇ ಮೂಲಕ 1.40 ಲಕ್ಷ ರೂ. ವಂಚನೆ

ಬ್ರಹ್ಮಾವರ: Online Fraud Google Pay : ಆನ್‌ಲೈನ್‌ನಲ್ಲಿ ಕೆಲಸ ನೀಡುವುದಾಗಿ ನಂಬಿಸಿ ಯುವಕನೋರ್ವನಿಗೆ 1.40 ಲಕ್ಷ ರೂ. ವಂಚಿಸಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರದ ಚೇರ್ಕಾಡಿಯಲ್ಲಿ ನಡೆದಿದೆ. ವಂಚನೆಗೆ ಒಳಗಾಗಿರುವ ಯುವಕ ಇದೀಗ ಉಡುಪಿಯ ಸೆನ್ ಅಪರಾಧ ಠಾಣೆಗೆ ದೂರು ನೀಡಿದ್ದಾನೆ.

ಉಡುಪಿ ಜಿಲ್ಲೆಯ ಚೇರ್ಕಾಡಿಯ ನಿವಾಸಿಯಾಗಿರುವ ನಿತಿನ್ ಎಂಬ ಯುವಕ ಆನ್‌ಲೈನ್‌ ಮೂಲಕ ಉದ್ಯೋಗಕ್ಕೆ ಹುಡುಕಾಟ ನಡೆಸಿದ್ದಾನೆ. ಈ ವೇಳೆಯಲ್ಲಿ ಗೂಗಲ್ ನಲ್ಲಿ ಲವ್ ಲೋಕಲ್ ವೆಬ್ಸೈಟ್ ನಲ್ಲಿ ಆನ್‌ಲೈನ್‌ ಉದ್ಯೋಗ ನೀಡುವುದಾಗಿ ಕಂಪೆನಿಯ ಎಚ್ಆರ್ ಎಂದು ಹೇಳಿಕೊಂಡಿದ್ದ ಅನ್ಸುಲಾ ಗುಪ್ತಾ ಎಂಬ ವ್ಯಕ್ತಿ ಭರವಸೆ ನೀಡಿದ್ದಾನೆ.

ನಂತರದಲ್ಲಿ ಉತ್ತಮ ವೇತನ ಆಮಿಷವೊಡ್ಡಿದ್ದಾನೆ. ಇದನ್ನು ನಂಬಿದ ನಿತಿನ್ ಡಿಸೆಂಬರ್ 15 ರಿಂದ ಜನವರಿ 6ರ ವರೆಗೆ ಹಂತ ಹಂತವಾಗಿ ಒಟ್ಟು 1,40,744 ರೂಪಾಯಿ ಹಣವನ್ನು ಅನ್ಸುಲಾ ಗುಪ್ತಾ ಗೂಗಲ್ ಪೇ ಮೂಲಕ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ನಂತರದಲ್ಲಿ ಯುವಕನಿಗೆ ಉದ್ಯೋಗ ನೀಡದೇ ಇದ್ದಾಗ, ತಾನು ವಂಚನೆಗೆ ಒಳಗಾಗಿದ್ದೇನೆ ಅನ್ನೋದು ನಿತಿನ್ ಗೆ ಅರಿವಿಗೆ ಬಂದಿದೆ. ನಂತರ ಹಣವನ್ನು ವಾಪಾಸ್ ನೀಡುವಂತೆ ಕೇಳಿದ್ದರೂ ಕೂಡ ಹಣ ಹಿಂದಿರುಗಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ನಿತಿನ್ ಸೆನ್ ಅಪರಾಧ ಠಾಣೆಗೆ ದೂರು ನೀಡಿದ್ದಾನೆ.

ಇದನ್ನೂ ಓದಿ : Black magic crime case: ಸೊಸೆಗೆ ಸತ್ತ ಮಾನವ ಮೂಳೆಗಳ ಪುಡಿಯನ್ನು ತಿನ್ನುವಂತೆ ಒತ್ತಾಯ: ಪತಿ, ಅತ್ತೆ ವಿರುದ್ದ ದೂರು

ಮಧುರೈ: ತಮ್ಮ ಸಾಕು ನಾಯಿಯನ್ನು ʻನಾಯಿʼ ಎಂದು ಕರೆದಿದ್ದಕ್ಕೆ 62 ವರ್ಷದ ವ್ಯಕ್ತಿಯೊಬ್ಬರನ್ನು ನೆರೆಹೊರೆಯವರು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ದಿಂಡಿಗಲ್‌ ಜಿಲ್ಲೆಯಲ್ಲಿ ನಡೆದಿದೆ. ದಿಂಡಿಗಲ್‌ ನಿವಾಸಿ ರಾಯಪ್ಪನ್‌ ಕೊಲೆಯಾದ ವ್ಯಕ್ತಿ. ರಾಯಪ್ಪನವರು ತಮ್ಮ ಮೊಮ್ಮಗ ಕೆಲ್ವಿನ್‌ ಗೆ ಸಮೀಪದ ಜಮೀನಿನಲ್ಲಿ ಚಾಲನೆಯಲ್ಲಿದ್ದ ನೀರಿನ ಪಂಪ್‌ ಅನ್ನು ಆಪ್‌ ಮಾಡಲು ಹೇಳಿದ್ದಾರೆ. ಈ ವೇಳೆ ತನ್ನ ಮೊಮ್ಮಗನ ಬಳಿಯಲ್ಲಿ ಜಮೀನಿನ ಸುತ್ತ ನಾಯಿ ಇರಬಹುದು ಕೋಲನ್ನು ಜೊತೆಗೆ ಕೊಂಡೊಯ್ಯುವಂತೆ ತಿಳಿಸಿದ್ದಾರೆ.

ಅದನ್ನು ಕೇಳಿದ ಡೇನಿಯಲ್‌ ಸಾಕುನಾಯಿಯನ್ನು ನಾಯಿ ಎಂದಿದ್ದಕ್ಕೆ ಕೋಪಗೊಂಡು ರಾಯಪ್ಪನ ಎದೆಗೆ ಹೊಡೆದಿದ್ದಾನೆ. ಇದರಿಂದಾಗಿ ರಾಯಪ್ಪನವರು ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ರಾಯಪ್ಪನವರು ಸಾವನ್ನಪ್ಪಿರುವುದನ್ನು ತಿಳಿದ ಡೇನಿಯಲ್‌ ಮತ್ತು ಕುಟುಂಬ ಅಲ್ಲಿಂದ ಪರಾರಿಯಾಗಿದ್ದಾರೆ. ಉಲಗಂಪಟ್ಟಿಯಾರ್ಕೊಟ್ಟಂನ ನಿವಾಸಿ ನಿರ್ಮಲಾ ಫಾತಿಮಾ ರಾಣಿ ಮತ್ತು ಅವರ ಮಕ್ಕಳಾದ ಡೇನಿಯಲ್ ಮತ್ತು ವಿನ್ಸೆಂಟ್ ಅವರು ತಮ್ಮ ಸಾಕುಪ್ರಾಣಿಗಳನ್ನು ‘ನಾಯಿ’ ಎಂದು ಕರೆಯದಂತೆ ಈ ಮೊದಲೇ ರಾಯಪ್ಪನ್‌ಗೆ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಆದರೂ ಕೂಡ ರಾಯಪ್ಪನವರು ನಾಯಿ ಎಂದು ಕರೆದಿದ್ದಾರೆ ಇದರಿಂದ ಕೋಪಗೊಂಡ ಡೇನಿಯಲ್‌ ರಾಯಪ್ಪನವರಿಗೆ ಹೊಡೆದಿದ್ದಾನೆ. ದುರಾದೃಷ್ಟವಶಾತ್‌ ರಾಯಪ್ಪನವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಈ ಘಟನೆಯ ಕುರಿತು ಮಧುರೈ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿ ನಿರ್ಮಲಾ ಮತ್ತು ಅವರ ಪುತ್ರರನ್ನು ಬಂಧಿಸಿದ್ದಾರೆ. ಪ್ರಪಂಚದಲ್ಲಿ ಇಂತಹ ವಿಚಿತ್ರ ಘಟನೆಗಳು ನಡೆಯುತ್ತವೆ ಎಂಬುದಕ್ಕೆ ಇದೊಂದು ಸಾಕ್ಷಿಯಾಗಿದೆ. ಸಾಕು ನಾಯಿಯನ್ನು ನಾಯಿ ಎಂದಿರುವುದನ್ನೆ ಕಾರಣವಾಗಿಟ್ಟುಕೊಂಡು ಇಂತಹ ಕೃತ್ಯ ನಡೆಸಿರುವುದು ನಿಜವಾಗಿಯೂ ಒಂದು ದುರಂತವೇ ಸರಿ.

ಇದನ್ನೂ ಓದಿ : Rajashekara Swamiji death: ಮೂರು ದಿನದ ಹಿಂದೆ ನಾಪತ್ತೆಯಾಗಿದ್ದ ಸ್ವಾಮೀಜಿ ಶವವಾಗಿ ಪತ್ತೆ

Online Fraud through Google Pay young man from Bramavara for online work

Comments are closed.