Chikkamagaluru serial accident: ಚಿಕ್ಕಮಗಳೂರಲ್ಲಿ ಭೀಕರ ಸರಣಿ ಅಪಘಾತ : 20 ವಿದ್ಯಾರ್ಥಿಗಳಿಗೆ ಗಾಯ

ಚಿಕ್ಕಮಗಳೂರು: (Chikkamagaluru serial accident) ರಸ್ತೆಗೆ ಅಡ್ಡಲಾಗಿ ವಿದ್ಯುತ್‌ ಕಂಬ ಬಿದ್ದು ಭೀಕರ ಸರಣಿ ಅಪಘಾತ ಸಂಭವಿಸಿದ್ದು, 20 ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕಣಿವೆ-ದಾಸರಹಳ್ಳಿ ಬಳಿ ನಡೆದಿದೆ.

ಶನಿವಾರ ಚಿಕ್ಕಮಗಳೂರು ಸಖರಾಯಪಟ್ಟಣದ ಜಿಗಣೆಹಳ್ಳಿ ಸರಕಾರಿ ಶಾಲೆಯಿಂದ ವಿದ್ಯಾರ್ಥಿಗಳು ಟಾಟಾ ಏಸ್‌ ಗಾಡಿಯಲ್ಲಿ ಹಬ್ಬಕ್ಕೆ ಬಂದಿದ್ದರು. ಹಬ್ಬ ಮುಗಿಸಿ ಖುಷಿಯಿಂದ ಹಿಂದಿರುಗುವಾಗ ಏಕಾಏಕಿ ವಿದ್ಯುತ್‌ ಕಂಬ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಈ ಸಂದರ್ಭ ಭೀಕರ ಸರಣಿ ಅಪಘಾತ ಸಂಭವಿಸಿದೆ. ಈ ಭೀಕರ ಅಪಘಾತದಲ್ಲಿ ಟಾಟಾ ಏಸ್‌ ಗಾಡಿ, ಸರಕಾರಿ ಬಸ್‌ ಹಾಗೂ ಕಾರು ಜಖಂ ಗೊಂಡಿವೆ.

ಅಲ್ಲದೇ ಟಾಟಾ ಏಸ್‌ ನಲ್ಲಿದ್ದ ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭಿರ ಗಾಯಗಳಾಗಿದ್ದು, ಗಾಯಗೊಂಡ ಮಕ್ಕಳನ್ನು ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಘಟನೆಯ ಕುರಿತು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಗಾಯಕಿ ಮಂಗ್ಲಿ ತೆರಳುತ್ತಿದ್ದ ಕಾರಿಗೆ ಕಲ್ಲೆಸೆತ: ಪೊಲೀಸರಿಂದ ಲಾಠಿ ಚಾರ್ಜ್‌

ಬಳ್ಳಾರಿ: ಬಳ್ಳಾರಿಯಲ್ಲಿ ರಾತ್ರಿ ಉತ್ಸವ ಕಾರ್ಯಕ್ರಮ ನಡೆಯುತ್ತಿರುವ ವೇಳೆಯಲ್ಲಿ ಪ್ರಸಿದ್ದ ಗಾಯಕಿ ಮಂಗ್ಲಿಯ ಕಾರಿಗೆ ಯುವಕರ ಗುಂಪೊಂದು ಕಲ್ಲೆಸೆದಿದ್ದು, ಪೊಲೀಸರು ಲಾಠಿ ಚಾರ್ಜ್ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತನ್ನ ಅದ್ಬುತ ಕಂಠದ ಹಾಡುಗಾರಿಕೆಯ ಮೂಲಕ ಸುದ್ದಿಯಲ್ಲಿರುವ ತೆಲುಗಿನ ಪ್ರಸಿದ್ದ ಗಾಯಕಿ ಮಂಗ್ಲಿ ನಿನ್ನೆಯ ದಿನ ಬಳ್ಳಾರಿ ಉತ್ಸವದಲ್ಲಿ ರಸಮಂಜರಿ ಕಾರ್ಯಕ್ರಮವೊಂದನ್ನು ನೀಡಲು ತೆರಳಿದ್ದರು. ವಿವಿಧ ಹಾಡುಗಳನ್ನು ವೇದಿಕೆಯ ಮೇಲೆ ಪ್ರಸ್ತುತ ಪಡಿಸಿ ನೆರೆದ ಜನರನ್ನು ರಂಜಿಸಿದ್ದರು. ಕಾರ್ಯಕ್ರಮ ಮುಗಿದ ನಂತರದಲ್ಲಿ ಗಾಯಕಿ ಮಂಗ್ಲಿಯನ್ನು ನೋಡಲು ಯುವಕರ ಗುಂಪೊಂದು ಮುಗಿಬಿದ್ದಿದ್ದು, ಕಲಾವಿದರು ತಯಾರಾಗಲು ನಿರ್ಮಿಸಲಾದ ವೇದಿಕೆ ಹಿಂಬಾಗದಲ್ಲಿದ್ದ ಡ್ರೆಸ್ಸಿಂಗ್‌ ಟೆಂಟ್‌ ಗೂ ಕಿಡಿಗೇಡಿಗಳು ನುಗಿದ್ದಾರೆ.

ಡ್ರೆಸ್ಸಿಂಗ್‌ ರೂಮ್‌ ಗೂ ನುಗ್ಗಿದ್ದಲ್ಲದೇ ಕಾರ್ಯಕ್ರಮ ಮುಗಿಸಿ ಮಂಗ್ಲಿ ಅವರು ಅಲ್ಲಿಂದ ತನ್ನ ಕಾರಿನಲ್ಲಿ ಹಿಂದಿರುಗುವ ಸಂದರ್ಭ ಮಂಗ್ಲಿಯವರಿದ್ದ ಕಾರಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಕಿಡಿಗೇಡಿಗಳನ್ನು ಅಲ್ಲಿಂದ ಚದುರಿಸಲು ಪೊಲೀಸರು ಲಾಠಿ ಚಾರ್ಜ್‌ ನಡೆಸಿದ್ದು, ಕಿಡಿಗೇಡಿಗಳ ಗುಂಪಿನ ವಿರುದ್ದ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Strange incident: ವಿಚಿತ್ರ ಘಟನೆ: ಸಾಕು ನಾಯಿಯನ್ನು ʻನಾಯಿʼ ಎಂದಿದ್ದಕ್ಕೆ ವೃದ್ದನ ಕೊಲೆ

ಇದನ್ನೂ ಓದಿ : Rajashekara Swamiji death: ಮೂರು ದಿನದ ಹಿಂದೆ ನಾಪತ್ತೆಯಾಗಿದ್ದ ಸ್ವಾಮೀಜಿ ಶವವಾಗಿ ಪತ್ತೆ

ಇದನ್ನೂ ಓದಿ : Black magic crime case: ಸೊಸೆಗೆ ಸತ್ತ ಮಾನವ ಮೂಳೆಗಳ ಪುಡಿಯನ್ನು ತಿನ್ನುವಂತೆ ಒತ್ತಾಯ: ಪತಿ, ಅತ್ತೆ ವಿರುದ್ದ ದೂರು

serial accident: 20 students injured in Chikkamagaluru serial accident

Comments are closed.