Praveen Nettaru’s dream house : ಪ್ರವೀಣ್​ ನೆಟ್ಟಾರು ಕನಸಿನ ಮನೆ ನಿರ್ಮಾಣಕ್ಕೆ ಮುಂದಡಿ ಇಟ್ಟ ಬಿಜೆಪಿ : ಕುಟುಂಬಸ್ಥರೊಂದಿಗೆ ಕಟೀಲ್​ ಮಾತುಕತೆ

ಮಂಗಳೂರು : Praveen Nettaru’s dream house : ದುಷ್ಕರ್ಮಿಗಳಿಂದ ಹತ್ಯೆಯಾದ ಬಿ.ಜೆ.ಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಕುಟುಂಬದ ಒಬ್ಬರಿಗೆ ಸರ್ಕಾರಿ ಕೆಲಸ ನೀಡುವುದಾಗಿ ಸಿ.ಎಂ ಬಸವರಾಜ್ ಬೊಮ್ಮಾಯಿ ದೊಡ್ಡಬಳ್ಳಾಪುರದಲ್ಲಿ ನಡೆದ ಜನಸ್ಪಂದನಾ ಸಮಾವೇಶದಲ್ಲಿ ಘೋಷಣೆ ಮಾಡಿದ್ದರು. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ರಾಜ್ಯ ಬಿ.ಜೆ.ಪಿ‌ ಪ್ರವೀಣ್ ನೆಟ್ಟಾರ್ ಅವರ ಕನಸಿನ‌‌ ಮನೆಯನ್ನು ನನಸಾಗಿಸಲು ಯೋಜನೆ ಹಾಕಿಕೊಂಡಿದೆ. ಈ ಬಗ್ಗೆ ಪ್ರವೀಣ್ ಕುಟುಂಬಸ್ಥರ ಜೊತೆ ಬಿ.ಜೆ.ಪಿ ರಾಜ್ಯಾಧ್ಯಕ್ಷ ‌ನಳಿನ್ ಕುಮಾರ್ ಕಟೀಲ್ ಮಾತುಕತೆಯನ್ನು‌ ನಡೆಸಿದ್ದಾರೆ.

ನಳಿನ್ ಕುಮಾರ್ ಕಟೀಲ್ ಅವರ ಮೂಲ‌ ಮನೆ ದಕ್ಷಿಣಕನ್ನಡ ಜಿಲ್ಲೆಯ ಸವಣೂರು ಸಮೀಪದ ಕುಂಜಾಡಿಯಲ್ಲಿ ಪ್ರವೀಣ್ ನೆಟ್ಟಾರ್ ಕುಟುಂಬಸ್ಥರ ಜೊತೆ ಚರ್ಚೆ ನಡೆಸಿದ್ದಾರೆ. ಪ್ರವೀಣ್ ಅವರ ಸ್ವಗೃಹ ನಿರ್ಮಾಣದ ಕನಸನ್ನು ನನಸಾಗಿಸಲು ಬೇಕಾದ ಸಹಕಾರ ನೀಡುವುದಾಗಿಯೂ ಹೇಳಿದ್ದಾರೆ. ಈ ಸಂದರ್ಭದಲ್ಲಿ ಪ್ರವೀಣ್ ತಂದೆ ಶೇಖರ್ ಪೂಜಾರಿ, ತಾಯಿ ರತ್ನಾವತಿ, ಪತ್ನಿ‌ ನೂತನ ಸೇರಿದಂತೆ ಸ್ಥಳೀಯ ಬಿ.ಜೆ.ಪಿ ನಾಯಕರು ಭಾಗಿಯಾಗಿದ್ದರು.

ಇದೇ ಸಂದರ್ಭದಲ್ಲಿ ಪ್ರವೀಣ್ ನೆಟ್ಟಾರ್ ಕುಟುಂಬಸ್ಥರು ಪ್ರವೀಣ್ ಪತ್ನಿ ನೂತನ ಗೆ ಸರ್ಕಾರಿ ಉದ್ಯೋಗ ನೀಡಲು‌ ಸಹಕರಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಧನ್ಯವಾದವನ್ನು ಸಲ್ಲಿಸಿದರು.

ಪ್ರವೀಣ್ ಬಿ.ಜೆ.ಪಿ ಯಲ್ಲಿ ಸಕ್ರೀಯವಾಗಿರುದರ ಜೊತೆ ಸಮಾಜ ಸೇವೆಯಲ್ಲಿಯೂ ಭಾಗಿಯಾಗುತ್ತಿದ್ದರು. ಇದರ ಜೊತೆ ಜೀವನ ನಿರ್ವಹಣೆಗೆ ಕೋಳಿ ಅಂಗಡಿಯೊಂದನ್ನು ಸಹ‌ ಶುರು ಮಾಡಿದ್ದರು. ಜೀವನದ ಬಗ್ಗೆ ಸಾಕಷ್ಟು ಕನಸು ಕಟ್ಟಿಕೊಂಡಿದ್ದ ಪ್ರವೀಣ್ ವ್ಯವಸ್ಥಿತವಾದ ಮನೆಯೊಂದನ್ನು ಸಹ ನಿರ್ಮಾಣ ಮಾಡಬೇಕೆಂದು ಅಂದು‌ಕೊಂಡಿದ್ದರು.‌ ನೂತನ ಸ್ವಗೃಹ ನಿರ್ಮಾಣಕ್ಕೆ ಬೇಕಾದ ತಯಾರಿಯನ್ನು‌ ಸಹ ಮಾಡಿಕೊಂಡಿದ್ದರು. ತಮ್ಮ ಹಳೆಯ ಮನೆಯ ಪಕ್ಕದಲ್ಲೇ ನೂತನ ಮನೆ ನಿರ್ಮಾಣಕ್ಕೆ ಜಾಗದ ಸಮತಟ್ಟು ಸಹ ಮಾಡಲಾಗಿತ್ತು.‌ ಆದ್ರೆ ಅಷ್ಟರಲ್ಲಾಗಲೇ ದುಷ್ಕರ್ಮಿಗಳು ಪ್ರವೀಣ್ ಹತ್ಯೆ ನಡೆಸಿ ವಿಕೃತಿ ಮೆರೆದಿದ್ದಾರೆ‌. ದುರಂತ ಅಂದ್ರೆ ಪ್ರವೀಣ್ ಹತ್ಯೆ ಬಳಿಕ ಮೃತದೇಹಕ್ಕೆ ಇದೇ ಸಮತಟ್ಟು ಮಾಡಿದ ಜಾಗದಲ್ಲೇ ಅಗ್ನಿಸ್ಪರ್ಶ ನೀಡಿ ಅಂತಿಮ ವಿಧಿವಿಧಾನ ನಡೆಸಲಾಗಿತ್ತು.

ಪ್ರವೀಣ್ ನೆಟ್ಟಾರ್ ಹತ್ಯೆಗೆ ಇಡೀ ರಾಜ್ಯವೇ ಕಂಬನಿ ಮಿಡಿದಿತ್ತು. ರಾಜ್ಯದ ಜನ ಪ್ರವೀಣ್ ಕುಟುಂಬಕ್ಕೆ ಧನ ಸಹಾಯವನ್ನು ನೀಡಿದ್ದರು.‌‌ ಸರ್ಕಾರದಿಂದ, ಬಿ.ಜೆ.ಪಿ ಪಕ್ಷದಿಂದ, ಸಚಿವರು, ಶಾಸಕರು ತಮ್ಮ ವೈಯಕ್ತಿಕ ನೆಲೆಯಿಂದ ಪ್ರವೀಣ್ ಕುಟುಂಬಕ್ಕೆ ಪರಿಹಾರವನ್ನು ನೀಡಿದ್ದರು. ಆ ಬಳಿಕ ಪ್ರವೀಣ್ ಕನಸಿನ ಮನೆ ನಿರ್ಮಾಣವನ್ನು ಬಿಲ್ಲವ ಸಮಾಜದಿಂದ ನಡೆಸಿಕೊಡುವುದಾಗಿ ಸಮಾಜದ ಪ್ರಮುಖರು ಹೇಳಿದ್ದರು.‌ ಇದೀಗ ಬಿ.ಜೆ.ಪಿ ಸಹ ಮನೆ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ಹೇಳಿರುವುದು ಕಾರ್ಯಕರ್ತರಿಗೆ ಸಮಾಧಾನ ತಂದುಕೊಟ್ಟಿದೆ.

ಇದನ್ನು ಓದಿ : Varanasi court : ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಹಿಂದೂಗಳ ಅರ್ಜಿ ಪುರಸ್ಕರಿಸಿದ ಕೋರ್ಟ್​ : ಸೆ.22ಕ್ಕೆ ಮುಂದಿನ ವಿಚಾರಣೆ

ಇದನ್ನೂ ಓದಿ : Asia Cup Final : ಪಾಕಿಸ್ತಾನ ಸೋತ ಬೆನ್ನಲ್ಲೇ ಭಾರತದ ಪತ್ರಕರ್ತನ ಫೋನ್ ಕಸಿದುಕೊಂಡ PCB ಚೀಫ್ ರಮೀಜ್ ರಾಜಾ

Praveen Nettaru’s dream house will built by BJP: Kateel talks with family members

Comments are closed.