ಉಡುಪಿಯಲ್ಲಿ ಕೋವಿಡ್ ಸೋಂಕಿತರ ಕೈಗೆ ಇನ್ಮುಂದೆ ಸೀಲ್

ಉಡುಪಿ : ಕೊರೊನಾ ವೈರಸ್ ಸೋಂಕಿನ ನಿಯಂತ್ರಣದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಕೊರೊನಾ ಸೋಂಕಿತರ ಮನೆಗಳನ್ನು ಸೀಲ್ ಡೌನ್ ಮಾಡುವುದರ ಜೊತೆಗೆ ಇನ್ಮುಂದೆ ಕೊರೊನಾ ಸೋಂಕಿತರ ಕೈಗಳಿಗೆ ಸಿಲ್ ಹಾಕಲಿದೆ.

ಕೊರೊನಾ ಸೋಂಕಿಗೆ ಒಳಗಾಗಿ ಮನೆಗಳಲ್ಲಿ ಐಸೋಲೇಟ್ ಆಗಿರುವವರು ಮನೆಯಿಂದ ಹೊರಗೆ ತಿರುಗಾಡುತ್ತಿದ್ದಾರೆ. ಇದರಿಂದಾಗಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಜೊತೆಗೆ ಸರಕಾರ ಹೊಸ ನಿಯಮದಿಂದಾಗಿ ಸೋಂಕಿಗೆ ತುತ್ತಾದವರು ಯಾರೂ ಅನ್ನೋ ಬಗ್ಗೆ ಇತರರಿಗೆ ಮಾಹಿತಿ ಸಿಗೋದೇ ಇಲ್ಲ. ಹೀಗಾಗಿ ಜಿಲ್ಲಾಡಳಿತ ಕೊರೊನಾ ಸೋಂಕಿಗೆ ಒಳಗಾಗಿ ನಿರ್ಲಕ್ಷ್ಯ ವಹಿಸುವವರಿಗೆ ಭರ್ಜರಿಯಾಗಿಯೇ ಬಿಸಿಮುಟ್ಟಿಸಿದೆ.

ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ನೇತೃತ್ವದಲ್ಲಿ ಕೊರೊನಾ ಸೋಂಕಿತರ ಮನೆಗಳ ಮುಂಭಾಗದಲ್ಲಿ ಪಟ್ಟಿಯನ್ನು ಅಳವಡಿಸಿ, ಮನೆಯನ್ನು ಸೀಲ್ ಡೌನ್ ಮಾಡಲಾಗುತ್ತಿದೆ. ಅಲ್ದಲೇ ಕೊರೊನಾ ಸೋಂಕಿನ ಕೈಗಳಿಗೆ ಸೀಲ್ ಹಾಕುವ ಕಾರ್ಯವೂ ನಡೆಯುತ್ತಿದೆ. ಹೀಗಾಗಿ ಕೊರೊನಾ ಸೋಂಕಿತರು ಮನೆಯಿಂದ ಹೊರ ಬಂದ್ರೆ ಕೇಸ್ ದಾಖಲಾಗೋದು ಖಚಿತ.

https://kannada.newsnext.live/dalit-youth-gonibeedu-karnataka-allegedly-forced-drink-urine-police-psi-fir-chikkamagalore/

Comments are closed.