Separate Milk Union : ಉಡುಪಿ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ : ಬೇಡಿಕೆಯಿಟ್ಟ ಬಿಜೆಪಿ

ಉಡುಪಿ : (Separate Milk Union) ಹೈನುಗಾರಿಕೆಯಲ್ಲಿ ಮುಂದಿರುವ ಉಡುಪಿಗೆ ಪ್ರತ್ಯೇಕ ಹಾಲು ಒಕ್ಕೂಟ ರಚಿಸುವಂತೆ ಬಿಜೆಪಿ ಶಾಸಕ ಹಾಗೂ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ಮುಖ್ಯಮಂತ್ರಿ ಮುಂದೆ ಬೇಡಿಕೆಯಿಟ್ಟಿದ್ದಾರೆ. ಒಂದೊಮ್ಮೆ ಉಡುಪಿಯಲ್ಲೇ ಹಾಲು ಒಕ್ಕೂಟ (Separate Milk Union) ನಿರ್ಮಾಣವಾದ್ರೆ ಗುಣಮಟ್ಟದ ಹಾಲಿನ ಜೊತೆಗೆ ಹಾಲು ಸಾಗಾಟದ ವೆಚ್ಚ ತಗ್ಗಿಸಬಹುದಾಗಿದೆ. ಹೈನುಗಾರಿಕೆಗೆ ಪ್ರೋತ್ಸಾಹವನ್ನು ನೀಡುವ ಸಲುವಾಗಿ ಕೆಎಂಎಫ್ ಮಂಗಳೂರು ಒಕ್ಕೂಟವನ್ನು ಪ್ರತ್ಯೇಕಿಸಿ ಉಡುಪಿ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ನೀಡುವಂತೆ ಆಗ್ರಹಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಕಾಲೇಜುಗಳು ಇರುವುದರಿಂದ ಹಾಗೂ ಶೈಕ್ಷಣಿಕವಾಗಿ ಮುಂದಿರುವುದರಿಂದ ಜಿಲ್ಲೆಗೊಂದು ವಿಶ್ವವಿದ್ಯಾನಿಲಯವನ್ನು ಘೋಷಿಸು ವಂತೆಯೂ ಬೇಡಿಕೆ ಇಡಲಿದ್ದೇವೆ. ನ. 7ರಂದು ಜಿಲ್ಲಾ ಬಿಜೆಪಿ ವತಿಯಿಂದ ಕಾಪುವಿನಲ್ಲಿ ನಡೆಯಲಿರುವ ಜನಸಂಕಲ್ಪ ಸಮಾವೇಶ, ಹಾಗೂ ಬೈಂದೂರಿನಲ್ಲಿ ನಡೆಯಲಿರುವ ವಿವಿಧ ಯೋಜನೆಗಳ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಲಿದೆ. ಸುಮಾರು 25 ಸಾವಿರ ಫ‌ಲಾನುಭವಿಗಳು ಪಾಲ್ಗೊಳ್ಳಲಿದ್ದು , ಈ ಎರಡೂ ಕಾರ್ಯಕ್ರಮಗಳಲ್ಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭಾಗವಹಿಸ ಲಿದ್ದಾರೆ. ಈ ವೇಳೆಯಲ್ಲಿ ಸಿಎಂ ಅವರಲ್ಲಿ ಮನವಿ ಮಾಡಲಾಗುವುದು ಎಂದು ಅವರು ತಿಳಿಇದ್ದಾರೆ.

ಇದನ್ನೂ ಓದಿ : ಕುಂದಾಪುರ : 24 ಗಂಟೆಯಲ್ಲಿ ಕಾಲೇಜು ವಿದ್ಯಾರ್ಥಿಯ ಅಪಹರಣ ಪ್ರಕರಣ ಬೇಧಿಸಿದ ಪೊಲೀಸರು

ಇದನ್ನೂ ಓದಿ : ವಿಧಾನಸಭಾ ಚುನಾವಣೆ 2023: ಬಂಟ್ವಾಳದಲ್ಲಿ ಬಿಜೆಪಿಯಿಂದ ರಾಜೇಶ್ ನಾಯಕ್ Vs ಕಾಂಗ್ರೆಸ್ ನಿಂದ ಪದ್ಮರಾಜ್, ಅಶ್ವಿನ್ ಕುಮಾರ್ ರೈ

ಬೆಳಗ್ಗೆ 11 ಗಂಟೆಗೆ ಕಾಪು ಬಸ್‌ ನಿಲ್ದಾಣದಲ್ಲಿ ಜನಸಂಕಲ್ಪ ಸಮಾವೇಶ ನಡೆಯಲಿದೆ. ಸಂಜೆ 4ಕ್ಕೆ ಬೈಂದೂರು ತಾಲೂಕಿನ ಮುಳ್ಳಿಕಟ್ಟೆಯಲ್ಲಿ ನಡೆ ಯುವ ಫ‌ಲಾನುಭವಿಗಳ ಸಮಾವೇಶ ಹಾಗೂ 1,270 ಕೋಟಿ .ರೂ.ಗಳ ವಿವಿಧ ಯೋಜನೆಗೆ ಶಂಕುಸ್ಥಾಪನೆ ನಡೆಯಲಿದ್ದು , ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಪಾಲ್ಗೊಳ್ಳಲಿದ್ದಾರೆ. ನವೆಂಬರ್ 5ರ ಬೆಳಗ್ಗೆ 11ಕ್ಕೆ ಮಣಿಪಾಲದ ಕಂಟ್ರಿಇನ್‌ ಹೊಟೇಲ್‌ನಲ್ಲಿ ಜಿಲ್ಲಾ ಕಾರ್ಯಕಾರಿಣಿ ಸಭೆ ನಡೆಯಲಿದ್ದು ,ಈ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಅಂಗಾರ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ವಿ. ಸುನಿಲ್‌ ಕುಮಾರ್‌ ಭಾಗವಹಿಸಲಿದ್ದಾರೆ ಎಂದರು.

ಇದನ್ನೂ ಓದಿ : Preveen Nettaru NIA reward : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಆರೋಪಿಗಳ ಸುಳಿವು ನೀಡಿದ್ರೆ 5 ಲಕ್ಷ ಬಹುಮಾನ

ಜಿಲ್ಲಾ ವಕ್ತಾರ ರಾಘವೇಂದ್ರ ಕಿಣಿ, ಸಹ ವಕ್ತಾರ ಶಿವಕುಮಾರ ಅಂಬಲಪಾಡಿ, ಉಪಾಧ್ಯಕ್ಷ ಸುಪ್ರಸಾದ್‌ ಶೆಟ್ಟಿ, ಕಾರ್ಯದರ್ಶಿ ಗುರುಪ್ರಸಾದ್‌, ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ, ಅಲ್ಪಸಂಖ್ಯಾಕರ ಮೋರ್ಚಾದ ಅಧ್ಯಕ್ಷ ದಾವುದ್‌ ಅಬೂಬಕ್ಕರ್‌, ಮಾಧ್ಯಮ ಪ್ರಕೋಷ್ಠದ ಸಂಚಾಲಕ ಶ್ರೀನಿಧಿ ಹೆಗ್ಡೆ, ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್‌ ಮುಂತಾದವರು ಉಪಸ್ಥಿತರಿದ್ದರು.

(Separate Milk Union) BJP MLA and district president Kuiladi Suresh Naik has demanded the Chief Minister to form a separate milk union for Udupi, which is ahead in dairy farming. Once a separate milk union is established in Udupi, the cost of milk transportation can be reduced along with quality milk. In order to encourage dairy farming, KMF has demanded to separate the Mangalore union and give a separate milk union to Udupi district.

Comments are closed.