Sri Mookambika Temple Kollur : ಕೊಲ್ಲೂರಿನ ಶ್ರೀ ಕ್ಷೇತ್ರ ಮೂಕಾಂಬಿಕೆಗೆ ನೂತನ ರಥ ಸಮರ್ಪಣೆ

ಕುಂದಾಪುರ : ಕೊಲ್ಲೂರಿನ ಶ್ರೀ ಕ್ಷೇತ್ರ ಮೂಕಾಂಬಿಕಾ (Sri Mookambika Temple Kollur) ದೇವಸ್ಥಾನಕ್ಕಾಗಿ ಅದ್ಭುತ ಕಾಷ್ಠಶಿಲ್ಪ ಹೊಂದಿರುವ ಬ್ರಹ್ಮರಥದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಇಂದು (ಫೆ.15) ಬುಧವಾರದಂದು ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದಿಂದ ಈ ರಥವನ್ನು ಕೊಲ್ಲೂರಿಗೆ ಸಕಲ ಸಿದ್ದತೆಯಿಂದ ಕೊಂಡೊಯ್ಯಲಾಗಿದೆ.

ಕೊಲ್ಲೂರು ಶ್ರೀ ಮೂಕಾಂಬಿಕೆಗೆ ನೂತನ ಬ್ರಹ್ಮರಥವನ್ನು ಇಂದು ಬೆಳಿಗ್ಗೆ ವೈಭವದ ಪುರ ಮೆರವಣಿಗೆಯೊಂದಿಗೆ ಕೋಟೇಶ್ವರ ಕೋಟಿಲಿಂಗೇಶ್ವರದಿಂದ ಶ್ರೀ ಕ್ಷೇತ್ರ ಕೊಲ್ಲೂರಿಗೆ ತಲುಪಿದೆ. ಇದು ದಿವಂಗತ ಆರ್ .ಎನ್. ಶೆಟ್ಟಿ ಪುತ್ರ ಸುನಿಲ್ ಶೆಟ್ಟಿ ರವರ ಕೊಡುಗೆ ಆಗಿದೆ. 400 ವರ್ಷಗಳ ಹಳೆಯ ರಥಕ್ಕೆ ಇತಿಶ್ರೀಯೊಂದಿಗೆ, ಹಳೆಯ ರಥದ ಪಡಿ ಅಚ್ಚು ತೆಗೆದು ನಿರ್ಮಾಣ ಮಾಡಲಾಗಿದ್ದು, ಇಂದು ಕೊಲ್ಲೂರು ತಾಯಿ ಶ್ರೀ ಮೂಕಾಂಬಿಕೆ ಸನ್ನಿಧಿಗೆ ನೂತನ ಬ್ರಹ್ಮರಥ ಸಮರ್ಪಣೆ ಮಾಡಲಾಗಿದೆ.

ದೇವಳದ ಅತ್ಯಂತ ಪುರಾತನ ಅಂದರೆ 400 ವರ್ಷ ಹಳೆಯದಾದ ರಥ ಸಂಪೂರ್ಣ ಹಾಳಾಗಿರುವ ಹಿನ್ನೆಲೆಯಲ್ಲಿ ನೂತನ ರಥದ ನಿರ್ಮಾಣ ಕಾರ್ಯ ಪ್ರಾರಂಭವಾಗಿ 9 ತಿಂಗಳು ಕಳೆದಿದ್ದು, ಸದ್ಯ ರಥ ಸಂಪೂರ್ಣವಾಗಿ ಸಿದ್ಧವಾಗಿದೆ. ಆಧುನಿಕ ತಂತ್ರಜ್ಞಾನ ಬಳಸಿರುವ ರಥಶಿಲ್ಪಿಗಳು ತ್ರಿಡಿ ಸ್ಕ್ಯಾನಿಂಗ್ ತಂತ್ರಜ್ಞಾನ ಬಳಸಿ, ಹಳೆ ರಥದ ಪಡಿಯಚ್ಚು ತೆಗೆದು ಹೊಸ ರಥ ನಿರ್ಮಿಸಿದ್ದಾರೆ. ಮುರ್ಡೇಶ್ವರದ ಖ್ಯಾತ ಉದ್ಯಮಿ ದಿ. ಆರ್‌.ಎನ್‌. ಶೆಟ್ಟಿ ಅವರ ಪುತ್ರ ಉದ್ಯಮಿ ಸುನಿಲ್‌ ಶೆಟ್ಟಿ ಅವರು ನೂತನ ರಥ ನಿರ್ಮಾಣದ ವೆಚ್ಚ ಭರಿಸಿದ್ದಾರೆ.

ದೇಗುಲದಲ್ಲಿ ಈವರೆಗೆ ಬಳಸುತ್ತಿದ್ದ ರಥವು ಕೆಳದಿ ಅರಸರ ಕಾಲದ್ದಾಗಿದ್ದು, 400 ವರ್ಷಗಳ ಇತಿಹಾಸವನ್ನು ಹೊಂದಿದೆ. ಆ ರಥದಲ್ಲಿದ್ದ ಶಿಲ್ಪಕಲೆಯಲ್ಲಿ ಯಾವುದೇ ಬದಲಾವಣೆಯಾಗದಂತೆ ನೂತನ ರಥದಲ್ಲಿ ಕೂಡ ರೂಪಿಸಿರುವುದು ರಥ ಶಿಲ್ಪಿಗಳ ಕೈಚಳಕವನ್ನು ಎತ್ತಿಹಿಡಿದಿದೆ. ಸುಮಾರು 42 ಜನ ಕುಶಲಕರ್ಮಿಗಳು 9 ತಿಂಗಳುಗಳ ಕಾಲ ಶ್ರಮವಹಿಸಿ ರಥವನ್ನು ಸಿದ್ಧಪಡಿಸಿದ್ದಾರೆ ಎನ್ನುತ್ತಾರೆ ರಥಶಿಲ್ಪಿ ರಾಜಗೋಪಾಲ ಆಚಾರ್ಯ.
ಒಟ್ಟಾರೆಯಾಗಿ ಹಳೆಯ ರಥದ ಜೆರಾಕ್ಸ್ ನಂತೆ ಹೊಸ ರಥ ನಿರ್ಮಾಣವಾಗಿದೆ.

ಇನ್ನು 400 ವರ್ಷಗಳ ಇತಿಹಾಸ ಹೊಂದಿರುವ ಹಳೆ ರಥವನ್ನು ದೇಗುಲದ ಆನೆಬಾಗಿಲಿನ ಬಳಿ ಸೂಕ್ತ ಸ್ಥಳದಲ್ಲಿ ಸಂರಕ್ಷಣೆ ಮಾಡಿ ಪಾರದರ್ಶಕ ಫ್ರೇಮ್‌ ಬಳಸಿ ಭಕ್ತರ ವೀಕ್ಷಣೆಗೆ ಇರಿಸುವ ಯೋಜನೆ ರೂಪಿಸಲಾಗಿದೆ. ಸದ್ಯ ನೂತನ ರಥವೇರಿ ಬರುವ ತಾಯಿ ಮೂಕಾಂಬಿಕೆಯ ದರ್ಶನ ಪಡೆಯಲು ಭಕ್ತರು ಕಾತುರದಿಂದ ಎದುರು ನೋಡುತ್ತಿದ್ದಾರೆ. ಸಮಾಜಮುಖಿ ಚಿಂತನೆಯ ಉದ್ಯಮಿ ಆರ್. ಎನ್ ಶೆಟ್ಟಿ ಅವರ ಸಮಾಜಮುಖಿ ಕಾರ್ಯ ಹಿಂದಿನ ದಿನಗಳಲ್ಲಿ ಪ್ರಸ್ತುತವಾಗಿದೆ.

ಇದನ್ನೂ ಓದಿ : Maha shivaratri- Yamapooje: ಯಾಮಪೂಜೆ ಎಂದರೇನು?: ಇದರ ವಿಧಿವಿಧಾನಗಳೇನು ಗೊತ್ತಾ?

ಇದನ್ನೂ ಓದಿ : Mahashivratri jagarane: ಆಧ್ಯಾತ್ಮದ ಜೊತೆಗೆ ವೈಜ್ಞಾನಿಕ ಕಾರಣವನ್ನು ಹೊಂದಿರುವ ಪುಣ್ಯ ಆಚರಣೆ ಈ ಮಹಾಶಿವರಾತ್ರಿ ಜಾಗರಣೆ

ಇದೀಗ ಅವರ ಪುತ್ರ ಸುನಿಲ್ ಶೆಟ್ಟಿ ಅವರ ಮುಂದಾಳತ್ವದಲ್ಲಿ 400 ವರ್ಷದ ಹಳೆಯ ರಥವನ್ನು ಸಂಚಾರ ನಿಲ್ಲಿಸಿ, ಇದೀಗ ಹೊಸ ರಥಕ್ಕೆ ಮಣೆ ಹಾಕಿದ್ದಾರೆ. ತ್ರೀಡಿ ತಂತ್ರಜ್ಞಾನದೊಂದಿಗೆ ನೂತನವಾಗಿ ನಿರ್ಮಿಸುವುದರ ಮೂಲಕ ದೇಗುಲಕ್ಕೆ ಇನ್ನಷ್ಟು ನೂತನವಾಗಿ ರಥ ನಿರ್ಮಾಣ ಕಾರ್ಯ ನಡೆದಿದ್ದು 9 ತಿಂಗಳುಗಳ ಕಾಲ ನಿರಂತರವಾಗಿ ರಥ ವಿನ್ಯಾಸದ ಹಾಗೂ ವಿಶಿಷ್ಟ ರೀತಿಯ ಪರಿಕಲ್ಪನೆಯಲ್ಲಿ ನಿರ್ಮಿಸಲಾಗಿದೆ.

Sri Mookambika Temple Kollur : Dedication of new chariot to Sri Kshetra Mookambike of Kollur

Comments are closed.