ನಟ ದರ್ಶನ್ ಮನೆ ಮುಂದೆ ಫ್ಯಾನ್ಸ್ : ಒಂದು ದಿನ ಮುನ್ನವೇ ಡಿ ಬಾಸ್‌ ಹುಟ್ಟು ಹಬ್ಬ ಸಂಭ್ರಮ!

ಫೆಬ್ರವರಿ 16 ಬರುತ್ತಿದೆ ಅಂದರೆ ಸಾಕು, ಡಿ ಬಾಸ್‌ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟುತ್ತೆ. ಒಂದು ದಿನ ಮುನ್ನವೇ ಡಿ ಬಾಸ್ ಫ್ಯಾನ್ಸ್ (Actor Darshan’s birthday) ಮನೆ ಮುಂದೆ ಜಾಮಾಯಿಸಿ ಬಿಡುತ್ತಾರೆ. ರಸ್ತೆಯುದ್ದಕ್ಕೂ ಎಲ್ಲಿ ನೋಡಿದರೂ ಅಭಿಮಾನಿಗಳೇ ಎದ್ದು ಕಾಣುತ್ತಾರೆ. ನಟ ದರ್ಶನ್ ಮನೆ ಇರುವ ರಾಜರಾಜೇಶ್ವರಿ ನಗರದ ರಸ್ತೆ ಮೇಲೆ ಪೆಂಡಲ್ ಬೀಳುತ್ತೆ. ನಟ ದರ್ಶನ್ ಸಿನಿಮಾದ ಕಟೌಟ್‌ಗಳು, ಬ್ಯಾನರ್‌ಗಳು ರಸ್ತೆಯುದ್ದಕ್ಕೂ ಎದ್ದು ನಿಲ್ಲುತ್ತವೆ. ಕಳೆದ ಮೂರು ವರ್ಷಗಳಿಂದ ಈ ಸಂಭ್ರಮ ಮಿಸ್ ಆಗಿತ್ತು. ಅದೀಗ ಮತ್ತೆ ಮರುಕಳಿಸಿದೆ.

ನಾಳೆ(ಫೆಬ್ರವರಿ 16) ನಟ ದರ್ಶನ್ 46ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಬೆನ್ನಲ್ಲೇ ಅಭಿಮಾನಿಗಳು ಕಳೆದ ಒಂದು ವಾರದಿಂದಲೇ ಸಂಭ್ರಮಿಸುತ್ತಿದ್ದಾರೆ. ಈ ಬಾರಿ ನಟ ದರ್ಶನ್ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಡಿ ಬಾಸ್‌ ಮನೆ ಮುಂದೆ ಸಂಭ್ರಮ ಮನೆ ಮಾಡಿದೆ. ಹುಟ್ಟುಹಬ್ಬದ ವೇಳೆ ತಮ್ಮ ನೆಚ್ಚಿನ ನಟನಿಗಾಗಿ ಅಭಿಮಾನಿಗಳು ವಿಭಿನ್ನವಾದ ಕೇಕ್‌ಗಳನ್ನು ತರುತ್ತಿದ್ದರು. ಹಾರಗಳನ್ನು ತಂದು ಸಂಭ್ರಮಿಸುತ್ತಿದ್ದರು. ಆದರೆ, ಸ್ವತ: ದರ್ಶನ್ ತಮ್ಮ ಅಭಿಮಾನಿಗಳಿಗೆ ಇದ್ಯಾವುದೂ ಬೇಡ ಅನ್ನೋ ಸಂದೇಶವನ್ನು ಅಭಿಮಾನಿಗಳಿಗೆ ನೀಡಿದ್ದರು. ಈ ಕಾರಣಕ್ಕಾಗಿ ದರ್ಶನ್ ಫ್ಯಾನ್ಸ್ ಅವರ ಮನೆಗೆ ದವಸ ಧಾನ್ಯಗಳನ್ನು ತಂದು ಹಾಕುತ್ತಿದ್ದಾರೆ. ಈ ದವಸ ಧಾನ್ಯಗಳನ್ನು ಅನಾಥ ಆಶ್ರಮಕ್ಕೆ ನೀಡಲು ದರ್ಶನ್ ತೀರ್ಮಾನಿಸಿದ್ದಾರೆ.

ನಟ ದರ್ಶನ್ ಮನೆ ಮುಂದೆ ಅಭಿಮಾನಿಗಳ ಸಂಭ್ರಮ ಒಂದು ದಿನ ಮುನ್ನವೇ ಶುರುವಾಗಿದೆ. ಮನೆ ಮುಂದೆನೇ ‘ಚಕ್ರವರ್ತಿ’ ಸಿನಿಮಾದ ಕಟೌಟ್ ಅನ್ನು ಅಭಿಮಾನಿಗಳು ನಿಲ್ಲಿಸಿದ್ದಾರೆ. ಶಿವಮೊಗ್ಗದ ನಾಗೇಶ್ ಎಂಬ ಅಭಿಮಾನಿ ದಾಸನ ಮನೆ ಮುಂದೆನೇ ಲಾಂಗ್ ಹಿಡಿದು ನಿಂತ ‘ಚಕ್ರವರ್ತಿ’ ಸಿನಿಮಾದ ಕಟೌಟ್‌ ಅನ್ನು ನಿಲ್ಲಿಸಿದ್ದಾರೆ. ಹಾಗೆಯೇ ಮೈಸೂರು ಅರಮನೆ ಶೈಲಿಯ ದ್ವಾರವನ್ನು ನಿರ್ಮಿಸಲಾಗಿದೆ. ಇದೆಲ್ಲವೂ ಅಭಿಮಾನಿಗಳನ್ನು ಸೆಳೆಯುತ್ತಿದೆ. ಹುಟ್ಟುಹಬ್ಬಕ್ಕೆ ಒಂದೆರಡು ದಿನ ಇದೆ ಅನ್ನುವಾಗಲೇ ದರ್ಶನ್ ಅಭಿಮಾನಿಗಳಿಗಾಗಿ ಟ್ಯಾಟೂ ಹಾಕಿಸಿಕೊಂಡಿದ್ದರು. ಇದು ಅಭಿಮಾನಿಗಳ ಮನಕಲುಕಿತ್ತು. ಈಗ ದರ್ಶನ್ ಹುಟ್ಟುಹಬ್ಬಕ್ಕೆ ಬರುವ ಅಭಿಮಾನಿಗಳು ಕೂಡ ಹಚ್ಚೆ ಹಾಕಿಸಿಕೊಂಡು ಬರುತ್ತಿದ್ದಾರೆ. ದರ್ಶನ್ ಬರ್ತ್‌ಡೇಗೆ ಅಭಿಮಾನಿಗಳು ಕೂಡ ಗೌರವ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ : Martin Movie Teaser : ನಟ ಧ್ರುವ ಸರ್ಜಾ, ಎಪಿ ಅರ್ಜುನ್ ಕಾಂಬಿನೇಶನ್‌ನ ‘ಮಾರ್ಟಿನ್’ ಟೀಸರ್ ಡೇಟ್‌ ಫಿಕ್ಸ್‌

ಇದನ್ನೂ ಓದಿ : ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳಿಂದ ಆಫರ್ ಇದೆ : ಆದ್ರೆ ಫ್ಯಾನ್ಸ್ ಪಕ್ಷಕ್ಕೆ ನನ್ನ ಬೆಂಬಲ ಎಂದ ಕಿಚ್ಚ ಸುದೀಪ್

ಇದನ್ನೂ ಓದಿ : Former MP Ramya : ಚನ್ನಪಟ್ಟಣದಿಂದ ಮಾಜಿ ಸಂಸದೆ ರಮ್ಯಾ ಸ್ಪರ್ಧೆ ಮಾಡಲ್ಲ” ಎಂದ ಸಂಸದ ಡಿ.ಕೆ.ಸುರೇಶ್

‘ಕ್ರಾಂತಿ’ ಸಿನಿಮಾ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ 56ನೇ ಸಿನಿಮಾ ಮೇಲೆ ಫ್ಯಾನ್ಸ್ ಕಣ್ಣಿಟ್ಟಿದ್ದಾರೆ. ತರುಣ್ ಸುಧೀರ್ ನಿರ್ದೇಶಿಸುತ್ತಿರುವ 56ನೇ ಸಿನಿಮಾ ಟೈಟಲ್‌ಗಾಗಿ ಎದುರು ನೋಡುತ್ತಿದ್ದಾರೆ. ಫೆಬ್ರವರಿ 16ರ ಮಧ್ಯರಾತ್ರಿ 12 ಗಂಟೆಗೆ ಟೈಟಲ್ ರಿವೀಲ್ ಆಗುತ್ತಿದೆ. ಶೀರ್ಷಿಕೆ ಅನಾವರಣ ಆಗುತ್ತಿದ್ದಂತೆ ಅಭಿಮಾನಿಗಳು ರಾತ್ರಿಯಿಂದ ಸೋಶಿಯಲ್ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡಿಸುವುದಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

Actor Darshan’s birthday: Fans in front of actor Darshan’s house: A day before D Boss’s birthday celebration!

Comments are closed.