ಮಂಗಳೂರು: ಅತಿಯಾಗಿ ಮೊಬೈಲ್‌ ಬಳಸುತ್ತಿದ್ದಕ್ಕೆ ಬೈದ ತಾಯಿ: ಮನನೊಂದು ನೇಣಿಗೆ ಶರಣಾದ ಬಾಲಕ

ಮಂಗಳೂರು: (Student got suicide) ಅತಿಯಾಗಿ ಮೊಬೈಲ್‌ ಬಳಸುತ್ತಿದ್ದ ಕಾರಣಕ್ಕೆ ಮಗನಿಗೆ ತಾಯಿ ಬೈದಿದ್ದು, ಇದರಿಂದ ಮನನೊಂದು ಬಾಲಕ ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳೂರಿನ ಕೋಟೆಮುರದಲ್ಲಿರುವ ರೆಡ್‌ ಬ್ರಿಕ್ಸ್‌ ಅಪಾರ್ಟ್‌ ಮೆಂಟ್‌ನಲ್ಲಿ ನಡೆದಿದೆ. ಕೋಟೆಮುರದಲ್ಲಿರುವ ರೆಡ್‌ ಬ್ರಿಕ್ಸ್‌ ಅಪಾರ್ಟ್‌ ಮೆಂಟ್‌ ನಿವಾಸಿಗಳಾದ ಜಗದೀಶ್‌ ಹಾಗೂ ವಿನಯ ದಂಪತಿಯ ಪುತ್ರ ಜ್ಞಾನೇಶ್‌ (14 ವರ್ಷ) ಮೃತ ಬಾಲಕ.

ಪ್ರತಿದಿನ ಜ್ಞಾನೇಶ್ ಹೆಚ್ಚು ಮೊಬೈಲ್‌‌ ನಲ್ಲೇ ಮುಳುಗಿರುತ್ತಿದ್ದು, ಓದಿನ ಕಡೆ ಗಮನ ಹರಿಸುತ್ತಿರಲಿಲ್ಲ. ಈ ವಿಚಾರವಾಗಿ ತಾಯಿ ಬಾಲಕನಿಗೆ ಮೊಬೈಲ್‌ ಬಿಟ್ಟು ಓದುವುದಾಗಿ ಗದರಿಸಿದ್ದಾರೆ. ಇದರಿಂದ ಬಾಲಕ ಮನನೊಂದು ಬೇಸರ ಮಾಡಿಕೊಂಡಿದ್ದನು. ನಂತರ ತಾನು ಸ್ನಾನ ಮಾಡಿ ಬರುವುದಾಗಿ ಹೇಳಿ ಕೋಣೆಯೊಳಗೆ ಹೋಗಿದ್ದಾನೆ. ಸಮಯ ಕಳೆದರೂ ಮಗ ಹೊರಗೆ ಬಾರದೇ ಇದ್ದಾಗ ಬಾಲಕನ ತಂದೆ ಜಗದೀಶ್‌ ಕಿಟಕಿಯ ಮೂಲಕ ಕೋಣೆಯೊಳಗೆ ನೋಡಿದ್ದಾರೆ.

ಈ ವೇಳೆ ಬಾಲಕ ಸೀಲಿಂಗ್‌ ಫ್ಯಾನ್‌ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಕೂಡಲೇ ಕೋಣೆಯ ಬಾಗಿಲು ತೆರೆದು ನೇಣು ಬಿಗಿದ ವೇಲನ್ನು ಕತ್ತರಿಸಿ ಆತನನ್ನು ಕೆಳಗೆ ಇಳಿಸಿ ನೋಡಿದಾಗ ಆತ ಮೃತಪಟ್ಟಿರುದು ತಿಳಿದುಬಂದಿದೆ. ಮೃತ ಜ್ಞಾನೇಶ್‌ ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಓದಿನ ಕಡೆ ಗಮನ ಹರಿಸುತ್ತಿರಲಿಲ್ಲ. ಇದಕ್ಕಾಗಿ ತಾಯಿ ಆತನ ಮೇಲಿರುವ ಕಾಳಜಿಯಿಂದ ಬೈದಿದ್ದಾಳೆ. ತಾಯಿ ಬೈದಿರುವುದಕ್ಕೆ ಮನನೊಂದು ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇತ್ತೀಚೆಗೆ ಮೊಬೈಲ್‌ ವಿಚಾರವಾಗಿ ತಂದೆ ತಾಯಂದಿರು ಬೈದರೆಂದು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ತಂದೆ ತಾಯಂದಿರು ಮಕ್ಕಳ ಮೇಲಿನ ಕಾಳಜಿಯಿಂದ ಬೈಯಲು ಕೂಡ ಹೆದರುವಂತಾಗಿದೆ.

ಇದನ್ನೂ ಓದಿ : Lorry driver death: ಅನುಮಾನಸ್ಪದ ರೀತಿಯಲ್ಲಿ ಲಾರಿ ಚಾಲಕ ಸಾವು: ಇನ್ನೋರ್ವ ಚಾಲಕನೇ ಕೊಲೆ ಮಾಡಿರುವ ಶಂಕೆ

ಇದನ್ನೂ ಓದಿ : Explosion in pharma factory: ಫಾರ್ಮಾ ಫ್ಯಾಕ್ಟರಿಯಲ್ಲಿ ಭಾರಿ ಸ್ಫೋಟ: 1 ಸಾವು, 3 ಮಂದಿಗೆ ಗಾಯ

ಇದನ್ನೂ ಓದಿ : Woman shot dead: ನಡುರಸ್ತೆಯಲ್ಲೇ ಮಹಿಳೆಯ ಗುಂಡಿಕ್ಕಿ ಹತ್ಯೆ

Student got suicide: Mangaluru: Mother scolded him for excessive use of mobile phone: Boy committed suicide

Comments are closed.