Hero Maestro XOOM : 68,599 ರೂ. ಗಳಿಗೆ ಮೆಸ್ಟ್ರೋ XOOM ಲಾಂಚ್‌ ಮಾಡಿದ ಹೀರೋ

ಆಟೋಮೊಬೈಲ್‌ ಕ್ಷೇತ್ರದಲ್ಲಿ ತನ್ನ ಉತ್ಪನ್ನಗಳಿಂದ ಹೆಸರುವಾಸಿಯಾದ ಹೀರೋ (Hero) ಭಾರತದಲ್ಲಿ ಸ್ಕೂಟರ್‌ (Scooter) ಶ್ರೇಣಿಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ. ಹೀರೋ, ಈಗ ಹೊಸ ಮೆಸ್ಟ್ರೋ LX, VX, ಮತ್ತು ZX (Hero Maestro XOOM) ಎಂಬ ಮೂರು ಟ್ರಿಮ್‌ಗಳಲ್ಲಿ ಬಿಡುಗಡೆ ಮಾಡಿದೆ. ಅದರಲ್ಲಿ ಮೆಸ್ಟ್ರೋ XOOM LX ಅನ್ನು ಅತಿ ಕಡಿಮೆ ಬೆಲೆಗೆ ಬಿಡುಗಡೆ ಮಾಡಿದೆ. ಈ ಟ್ರಿಮ್‌ನ ಸ್ಕೂಟರ್‌ಗೆ 68,599 ರೂ. (ಎಕ್ಸ್‌ ಶೋ ರೂಂ ಬೆಲೆ) ನಿಗದಿಪಡಿಸಿದೆ. ನಂತರದ VX ಮತ್ತು ZX ಟ್ರಿಮ್‌ಗಳಿಗೆ ಕ್ರಮವಾಗಿ 71,799 ರೂ. ಮತ್ತು 76,699 ರೂ. ಬೆಲೆಯನ್ನು ನಿಗದಿಪಡಿಸಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋ ರೂಂ ಬೆಲೆಗಳಾಗಿವೆ.

ವೈಶಿಷ್ಟ್ಯಗಳು:
ಹೀರೋ ಬಿಡುಗಡೆ ಮಾಡಿದ ಮೆಸ್ಟ್ರೋ XOOM ಸ್ಕೂಟರ್ 110.9 cc ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್ Fi ಎಂಜಿನ್ ಅನ್ನು CVT ಯೊಂದಿಗೆ ಜೋಡಿಸಲಾಗಿದೆ. ಎಂಜಿನ್ 7,250 rpm ನಲ್ಲಿ 8.05 bhp ಉತ್ಪಾದನೆಮಾಡುತ್ತದೆ. 5,750 rpm ನಲ್ಲಿ 8.70 Nm ಟಾರ್ಕ್ ಅನ್ನು ನೀಡುತ್ತದೆ ಎಂದು ಹೇಳಲಾಗಿದೆ. ಈ ಸ್ಕೂಟರ್ 5.2 ಲೀಟರ್ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಇದರ ವಿನ್ಯಾಸದ ಬಗ್ಗೆ ಹೇಳುವುದಾದರೆ ಇದು ಆಕರ್ಷಕ ಡಿಸೈನ್‌ ಅನ್ನು ಹೊಂದಿದೆ. ಎಲ್ಇಡಿ ಹೆಡ್ಲ್ಯಾಂಪ್‌ ಮತ್ತು ಎಕ್ಸ್-ಆಕಾರದ ಎಲ್ಇಡಿ DRLಗಳನ್ನು ಹೊಂದಿದೆ. ಇದು ಬ್ಲೂಟೂತ್ ಸಂಪರ್ಕ ಹೊಂದುವ ಅವಕಾಶನ ನೀಡಿರುವುದರಿಂದ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನೊಂದಿಗೆ ಬರುತ್ತದೆ.

ಹೀರೋ ಬಿಡುಗಡೆ ಮಾಡಿರುವ ಮೆಸ್ಟ್ರೋ XOOM ಸ್ಕೂಟರ್, 12-ಇಂಚಿನ ಮಿಶ್ರಲೋಹದ ಚಕ್ರಗಳ ಸಹಾಯದಿಂದ ಓಡಲಿದೆ. ಇದರ ಟಾಪ್-ಎಂಡ್ ZX ಮಾದರಿಯು ಕಾರ್ನರ್‌ ಲೈಟ್‌ನೊಂದಿಗೆ ಬರುತ್ತದೆ. ಇದು ರೈಡರ್ ಬಲ ಮತ್ತು ಎಡಗಡೆ ತಿರುಗಲು ಬಯಸಿದಾಗ ಸ್ವಯಂಚಾಲಿತವಾಗಿ ಸಕ್ರಿಯಗೊಳಿಸುತ್ತದೆ. ಈ ರೂಪಾಂತರವು ಪ್ರೊಜೆಕ್ಟರ್ ಎಲ್ಇಡಿ ಹೆಡ್‌ಲ್ಯಾಂಪ್ ಅನ್ನು ಸಹ ಹೊಂದಿದೆ. ಇದನ್ನು ಮುಂಭಾಗದ ಆಂಗ್ಯುಲರ್‌ ಏಪ್ರನ್‌ನಲ್ಲಿ ಅಳವಡಿಸಲಾಗಿದೆ. ಹಾಗೆ ಮೆಸ್ಟ್ರೋ XOOMನ ‌ಉಳಿದ ವೈಶಿಷ್ಟ್ಯಗಳೆಂದರೆ XTEC ತಂತ್ರಜ್ಞಾನ, ಪಿಲಿಯನ್ ಸೌಕರ್ಯಕ್ಕಾಗಿ ರಿಯರ್‌ ಗ್ರಿಪ್‌, USB ಚಾರ್ಜರ್‌ ಸೌಕರ್ಯವಿರುವ ಮುಂಭಾಗದ ಗ್ಲೋವ್ ಬಾಕ್ಸ್ ಮತ್ತು LED ಲ್ಯಾಂಪ್‌ ಇರುವ ದೊಡ್ಡದಾದ ಡಿಕ್ಕಿ ಹೊಂದಿದೆ. ಈ ಸ್ಕೂಟರ್ ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಮ್ (IBS) ಮತ್ತು ಮುಂಭಾಗದಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.

ಬಣ್ಣಗಳ ಆಯ್ಕೆ ಮತ್ತು ಲಭ್ಯತೆ :
ಇದು ಕಂಪನಿಯು ತಯಾರಿಸಿದ ಮೂರನೇ ಮೂರನೇ ಗೇರ್‌ಲೆಸ್ ಸ್ಕೂಟರ್ ಆಗಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಮೆಸ್ಟ್ರೋ ಎಡ್ಜ್ ಮತ್ತು ಪ್ಲೆಷರ್ ಪ್ಲಸ್‌ನ ಸಾಲಿಗೆ ಸೇರುತ್ತದೆ. ಈ ಸ್ಕೂಟರ್‌ನ ಬುಕ್ಕಿಂಗ್ ಪ್ರಾರಂಭವಾಗಿದ್ದು. ಮೆಸ್ಟ್ರೋ XOOM ಸ್ಕೂಟರ್‌ ಅನ್ನು ಮ್ಯಾಟ್ ಅಬ್ರಾಕ್ಸ್ ಆರೆಂಜ್, ಬ್ಲಾಕ್‌, ಸ್ಪೋರ್ಟ್ಸ್ ರೆಡ್, ಪೋಲ್‌ಸ್ಟಾರ್ ಬ್ಲೂ ಮತ್ತು ಪರ್ಲ್ ಸಿಲ್ವರ್ ವೈಟ್ ಎಂಬ ಐದು ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.

ಇದನ್ನೂ ಓದಿ : Samsung New Phones : ಫೆಬ್ರವರಿ 1ಕ್ಕೆ ಬಿಡುಗಡೆಯಾಗಲಿದೆ ಸ್ಯಾಮ್‌ಸಂಗ್‌ ಗ್ಯಾಲೆಕ್ಸಿ S23 ಸರಣಿ ಸ್ಮಾರ್ಟ್‌ಫೋನ್‌ಗಳು

ಇದನ್ನೂ ಓದಿ : Fire-Boltt Smartwatch : ಮೂರು ಬಜೆಟ್‌ ಫ್ರೆಂಡ್ಲೀ ಸ್ಮಾರ್ಟ್‌ವಾಚ್‌ ಪರಿಚಯಿಸಿದ ಫೈರ್‌–ಬೋಲ್ಟ್‌; ಫಿಟ್ನೆಸ್‌ ಪ್ರಿಯರಿಗೆ ಇದು ಬೆಸ್ಟ್‌ ವಾಚ್‌

(Hero Maestro XOOM scooter launched at Rs. 68,599. Hero introduces its 3 trims like LX, VX, and ZX)

Comments are closed.