Student hangout: ಉಡುಪಿ: ನೇಣಿಗೆ ಶರಣಾದ 6 ನೇ ತರಗತಿ ವಿದ್ಯಾರ್ಥಿನಿ

ಉಡುಪಿ: (Student hangout) ಯೂಟ್ಯೂಬ್‌ ಚಾನೆಲ್‌ ನೋಡಿ ಆರನೇ ತರಗತಿ ವಿದ್ಯಾರ್ಥಿನಿಯೋರ್ವಳು ಮನೆಯ ಬಾತ್‌ ರೂಮ್‌ ನಲ್ಲಿ ನೇಣಿಗೆ ಶರಣಾದ ಘಟನೆ ಬ್ರಹ್ಮಗಿರಿಯ ಪ್ಲಾಟ್‌ ಒಂದರಲ್ಲಿ ನಡೆದಿದೆ. ಉಡುಪಿ ಸಾಯಿರಾಧಾ ಡೆವಲಪರ್ಸ್‌ ಉದ್ಯೋಗಿ ಪ್ರವೀಣ್‌ ಶೆಟ್ಟಿ ಎನ್ನುವವರ ಮಗಳು ಮಂಗಳಾದೇವಿ (11 ವರ್ಷ) ಮೃತ ವಿದ್ಯಾರ್ಥಿನಿ.

ಮೃತ ವಿದ್ಯಾರ್ಥಿನಿ ಮಂಗಳಾದೇವಿ ಕುಂಜಾರುಗಿರಿಯ ಆನಂದ ತೀರ್ಥ ಶಾಲೆಯಲ್ಲಿ ಆರನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಮಕರ ಸಂಕ್ರಾಂತಿಯ ಪ್ರಯುಕ್ತ ಶಾಲೆಗೆ ರಜೆ ಇದ್ದ ಕಾರಣ ಬಾಲಕಿಯನ್ನು ಮನೆಯಲ್ಲಿ ಬಿಟ್ಟು ಹೆತ್ತವರು ಕೆಲಸಕ್ಕೆ ಹೋಗಿದ್ದರು. ಈ ಸಮಯದಲ್ಲಿ ಬಾಲಕಿ ಮೊಬೈಲ್‌ ಹಿಡಿದು ಯೂಟ್ಯೂಬ್‌ ನೋಡಿದ್ದಾಳೆ. ಇದಾದ ಬಳಿಕ ಸ್ನಾನಗ್ರಹಕ್ಕೆ ತೆರಳಿ ನೇಣಿಗೆ (Student hangout) ಕೊರಳೊಡ್ಡಿದ್ದಾರೆ.

ಸಂಜೆ ಪೋಷಕರು ಮನೆಗೆ ಬಂದಾಗ ಬಾಲಕಿಯ ಬೆಡು ರೂಮ್‌ ಬಾಗಿಲು ತಟ್ಟಿದ್ದಾರೆ. ಬಾಲಕಿ ಬಾಗಿಲು ತೆರೆಯದೇ ಇದ್ದಾಗ ಸಂಶಯಗೊಂಡು ಬಾಗಿಲು ಒಡೆದು ಒಳಗೆ ಹೋದಾಗ ಆಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಸದ್ಯ ಘಟನೆಯ ಕುರಿತು ಉಡುಪಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ಡ್ರಗ್ಸ್‌ ಸೇವಿಸಿ ದರೋಡೆಗೆ ಸಂಚು: ಆರೋಪಿಗಳ ಬಂಧನ

ಮಣಿಪಾಲ: ಮಾದಕ ದ್ರವ್ಯ ಸೇವನೆ ಮಾಡಿ ದರೋಡೆಗೆ ಸಂಚು ರೂಪಿಸುತ್ತಿದ್ದ ಆರೋಪಿಗಳನ್ನು ಉಡುಪಿ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಮಣಿಪಾಲ ಪಿವಿ ನಗರದ ಅನಂತ ರೆಸಿಡೆನ್ಸಿಯಲ್ಲಿ ಐದು ಮಂದಿ ಗುಂಪುಗೂಡಿ ಅಕ್ರಮವಾಗಿ ಮಾದಕ ದ್ರವ್ಯ ಹಾಗೂ ಗಾಂಜಾವನ್ನು ಮನೆಯಲ್ಲಿಟ್ಟುಕೊಂಡು ಅದನ್ನು ಸೇವಿಸಿ ನಂತರ ದರೋಡೆಗೆ ಸಂಚು ರೂಪಿಸುತ್ತಿದ್ದರು.

ಇದನ್ನೂ ಓದಿ : Kundapura bike accident: ಕುಂದಾಪುರ : ಬೈಕ್ ಢಿಕ್ಕಿ ಪಾದಚಾರಿ ಸಾವು

ಇದನ್ನೂ ಓದಿ : Old man disoriented on flight: ವಿಮಾನದಲ್ಲಿ ಅಸ್ತವ್ಯಸ್ತಗೊಂಡ 60 ವರ್ಷದ ವ್ಯಕ್ತಿ: ಇಂದೋರ್‌ ನಲ್ಲಿ ತುರ್ತು ಭೂಸ್ಪರ್ಶ

ಇದನ್ನೂ ಓದಿ : Jharkhand crime case: ಅಕ್ರಮ ಸಂಬಂಧ: ಪತ್ನಿಯ ಪ್ರಿಯಕರನ ತಲೆ ಕಡಿದ ಪತಿ

ಈ ಸಂಬಂಧ ಆರೋಪಿಗಳನ್ನು ಬಂಧಿಸಿದ್ದು, ಆರು ಗ್ರಾಂ ಎಂಡಿಎಂ, 110 ಗ್ರಾಂ ಗಾಂಜಾ, ಐದು ಮೊಬೈಲ್‌ ಹಾಗೂ ಕೆಲವು ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ.

Student hangout: Udupi: 6th class girl surrendered to hanging

Comments are closed.