Inhuman behavior of husband: ಗರ್ಭಿಣಿ ಪತ್ನಿಯನ್ನು ಬೈಕ್ ಗೆ ಕಟ್ಟಿ ಎಳೆದೊಯ್ದ ಪತಿ : ಅಮಾನವೀಯ ವರ್ತನೆಗೆ ಬಾರೀ ಆಕ್ರೋಶ

ಉತ್ತರಪ್ರದೇಶ: (Inhuman behavior of husband) ಪತಿಯೊಬ್ಬ ಪಾನಮತ್ತನಾಗಿ ಗರ್ಭಿಣಿ ಪತ್ನಿಯನ್ನು ಬೈಕ್​ಗೆ ಕಟ್ಟಿ 200 ಮೀಟರ್​ ಎಳೆದೊಯ್ದು ಕ್ರೌರ್ಯ ಮೆರೆದಿರುವ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಪಿ ಪತಿಯನ್ನು ಬಂಧಿಸಲಾಗಿದೆ. ಸುಮನ ಎನ್ನುವಾಕೆ ಹಲ್ಲೆಗೊಳಗಾದ ಮಹಿಳೆ.

ಉತ್ತರಪ್ರದೇಶದ ಪಿಲಿಭಿತ್​ ಜಿಲ್ಲೆಯ ಘುಂಗ್‌ಚೈ ಗ್ರಾಮದಲ್ಲಿ ಆಘಾತಕಾರಿ ಘಟನೆ (Inhuman behavior of husband) ನಡೆದಿದ್ದು, ಆರೋಪಿ ರಾಮ್​ಗೋಪಾಲ್​ ಶನಿವಾರ ಪಾನಮತ್ತನಾಗಿ ಮನೆಗೆ ಬಂದಾಗ ಗರ್ಭಿಣಿ ಪತ್ನಿ ಆತನನ್ನು ವಿರೋಧಿಸಿದ್ದಾಳೆ. ಇದರಿಂದ ಕುಪಿತನಾದ ಆತ, ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಇಷ್ಟಕ್ಕೆ ಬಿಡದ ಕ್ರೂರಿ ಆಕೆಯನ್ನು ತನ್ನ ಬೈಕ್​ಗೆ ಕಟ್ಟಿ ಸುಮಾರು 200 ಮೀಟರ್ ಎಳೆದೊಯ್ದು ಕ್ರೌರ್ಯ ಮೆರೆದಿದ್ದಾನೆ.

ಪತ್ನಿಯನ್ನು ಎಳೆದೊಯ್ಯುತ್ತಿದ್ದುದನ್ನು ಜನರು ಕಂಡು ನಿಲ್ಲಿಸಲು ಯತ್ನಿಸಿದರೂ ಆತ ಬೈಕ್‌ ನಿಲ್ಲಿಸಿಲ್ಲ. ಹೀಗೆ ಸುಮಾರು 200 ಮೀಟರ್ ವರೆಗೂ ಗರ್ಭಿಣಿ ಅಂತಾನೂ ನೋಡದೇ ಅಕೆಯನ್ನು ಎಳೆದೊಯ್ದಿದ್ದಾನೆ. ಮಹಿಳೆಯ ಸಹೋದರ ಬೈಕ್​ ಬೆನ್ನತ್ತಿ ಸಹೋದರಿಯನ್ನು ರಕ್ಷಿಸಿದ್ದಾನೆ. ಬೈಕ್‌ ನಲ್ಲಿ ಆಕೆಯನ್ನು ಎಳೆದುಕೊಂಡು ಹೋದ ಕಾರಣ ಆಕೆಗೆ ಗಂಭಿರವಾದ ಗಾಯಗಳಾಗಿವೆ. ಗಾಯಗೊಂಡ ಆಕೆಯನ್ನು ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರು.

ಆರೋಪಿ ರಾಮ್​ಗೋಪಾಲ್ ಮತ್ತು ಹಲ್ಲೆಗೊಳಗಾದ ಗರ್ಭಿಣಿ ಸುಮನ್ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಈ ಜೋಡಿ ಪ್ರೀತಿಸಿ ವಿವಾಹವಾಗಿದ್ದರು ಎಂಬುದು ವಿಶೇಷ. ಮದುವೆಯಾದ ಕೆಲ ದಿನಗಳಲ್ಲಿ ಆರೋಪಿ ಡ್ರಗ್ಸ್ ಚಟಕ್ಕೆ ಬಿದ್ದಿದ್ದ. ಹೀಗೆ ಡ್ರಗ್ಸ್‌ ಚಟಕ್ಕೆ ಬಿದ್ದಿದ್ದ ಈತ ತನ್ನ ಪತ್ನಿ 8 ತಿಂಗಳ ಗರ್ಭಿಣಿ ಎನ್ನುವುದನ್ನೂ ಲೆಕ್ಕಿಸದೇ ಕುಡಿತದ ಚಟವನ್ನು ಪ್ರಶ್ನಿಸಿದ್ದಕ್ಕೆ ಕ್ರೂರತ್ವ ಮೆರೆದಿದ್ದಾನೆ.

ಇದನ್ನೂ ಓದಿ : Student hangout: ಉಡುಪಿ: ನೇಣಿಗೆ ಶರಣಾದ 6 ನೇ ತರಗತಿ ವಿದ್ಯಾರ್ಥಿನಿ

ಇದನ್ನೂ ಓದಿ : Kundapura bike accident: ಕುಂದಾಪುರ : ಬೈಕ್ ಢಿಕ್ಕಿ ಪಾದಚಾರಿ ಸಾವು

ಮಹಿಳೆಯ ಸಹೋದರ ಆರೋಪಿಯ ವಿರುದ್ದ ದೂರು ನೀಡಿದ್ದು, ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯ ಸಹೋದರ ನೀಡಿದ ದೂರಿನ ಮೇರೆಗೆ ಆತನ ಮೇಲೆ ಕೊಲೆ ಕೇಸ್​ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

Inhuman behavior of husband: The husband who tied his pregnant wife to the bike and dragged her: Outrage over inhuman behavior

Comments are closed.